ರಾಣಿಬೆನ್ನೂರು: ಧಾರ್ಮಿಕ ಮನೋಭಾವನೆ ಹೊಂದಿದವರು ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದು ಹುಣಸಿಕಟ್ಟಿ ಸಿದ್ದಾಶ್ರಮದ ಗುರು ಜಯಾನಂದ ಸ್ವಾಮಿಗಳು ನುಡಿದರು. ತಾಲೂಕಿನ ಕಮದೋಡ ಗ್ರಾಮದ ತಳವಾರ (ವಾಲ್ಮೀಕಿ ನಗರ) ಓಣಿಯಲ್ಲಿ ನೂತನವಾಗಿ ನಿರ್ಮಿಸಿರುವ ಚಂದ್ರಗುತ್ತೆಮ್ಮದೇವಿ ದೇವಸ್ಥಾನ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಇಂದಿನ ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಸಂಸ್ಕೃತಿ ಮತ್ತು ಮತ್ತು ಧಾರ್ಮಿಕತೆಯ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು. ಹೀಗಾದಲ್ಲಿ ಮಕ್ಕಳು ಹಾಗೂ ಧಾರ್ಮಿಕತೆಯ ಮನೋಭಾವನೆಯನ್ನು ರೂಢಿಸಿಕೊಂಡು ಸಮಾಜದಲ್ಲಿ ಆದರ್ಶ ಪ್ರಾಯರಾಗಿರಲು ಸಾಧ್ಯ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ದೇವಸ್ಥಾನಗಳು, ಮಠ ಮಾನ್ಯಗಳು ಇರುವ ಗ್ರಾಮಗಳು ಶಾಂತಿ ಹಾಗೂ ನೆಮ್ಮದಿಯ ಜೊತೆಗೆ ಪುಣ್ಯ ಕ್ಷೇತ್ರಗಳಾಗಿ ಹೊರ ಹೊಮ್ಮುತ್ತವೆ ಎಂದರು. ಇದೇ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯಿಂದ ಸಮಾಜದ ಹಿರಿಯರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಹನುಮಂತಪ್ಪ ಮೀನಕಟ್ಟಿ, ಸುಭಾಸ ಶಿರಗೇರಿ, ವಿಠ್ಠಲ, ಅಜಯ ಮೇಲಮಾಳಗಿ, ಗಣೇಶ ಗುಂಟೇರ, ಮಲಕಪ್ಪ ಬೆನ್ನೂರ, ಕುಮಾರ ಕ್ಯಾತಹಳ್ಳಿ, ಹನುಮಂತಪ್ಪ ಹರಾರಿ, ಶಿವು ದಡ್ಡಳ್ಳಿ ಮತ್ತಿತರರಿದ್ದರು.
ಧಾರ್ಮಿಕ ಮನೋಭಾವನೆ ಹೊಂದಿದವರು ನೆಮ್ಮದಿಯ ಬದುಕು ಕಾಣಲು ಸಾಧ್ಯ-ಸ್ವಾಮೀಜಿ
ಧಾರ್ಮಿಕ ಮನೋಭಾವನೆ ಹೊಂದಿದವರು ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದು ಹುಣಸಿಕಟ್ಟಿ ಸಿದ್ದಾಶ್ರಮದ ಗುರು ಜಯಾನಂದ ಸ್ವಾಮಿಗಳು ನುಡಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.