ಸಾರಾಂಶ
ತೋಟಪ್ಪನವರ ಜೀವನದಲ್ಲಿ ಕೊಟ್ರಮ್ಮನವರು ಸ್ಫೂರ್ತಿದಾಯಕ ಮಹಿಳೆಯಾಗಿದ್ದರು. ಮಕ್ಕಳನ್ನು ಸಲಹುವ ಜೊತೆಗೆ ಸಂಸ್ಕಾರ ಕೊಟ್ಟು ಸಮಾಜ ಕಟ್ಟುವ ಕಾರ್ಯದಲ್ಲಿ ಅವರನ್ನು ತೊಡಗುವಂತೆ ಮಾಡಿರುವ ಕಾರ್ಯವು ಶ್ಲಾಘನೀಯ.
ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ರಂಭಾಪುರಿ ಡಾ.ವೀರಸೋಮೇಶ್ವರ ಸ್ವಾಮೀಜಿ ಶ್ಲಾಘನೆ
ಕನ್ನಡಪ್ರಭ ವಾರ್ತೆ ಹರಿಹರಕೊಂಡಜ್ಜಿ ತೋಟಪ್ಪನವರ ಮನೆತನವು ಸಮಾಜದ ಕಾರ್ಯಗಳಲ್ಲಿ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ರಂಭಾಪುರಿ ಡಾ.ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ದೇವಸ್ಥಾನ ರಸ್ತೆಯ ಶ್ರೀರೇಣುಕಾ ಮಂದಿರದಲ್ಲಿ ದಿ.ಕೊಂಡಜ್ಜಿ ತೋಟಪ್ಪನವರ ಪತ್ನಿ ಕೊಟ್ರಮ್ಮ ತೋಟಪ್ಪನವರ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ ತೋಟಪ್ಪನವರ ಜೀವನದಲ್ಲಿ ಕೊಟ್ರಮ್ಮನವರು ಸ್ಫೂರ್ತಿದಾಯಕ ಮಹಿಳೆಯಾಗಿದ್ದರು. ಮಕ್ಕಳನ್ನು ಸಲಹುವ ಜೊತೆಗೆ ಸಂಸ್ಕಾರ ಕೊಟ್ಟು ಸಮಾಜ ಕಟ್ಟುವ ಕಾರ್ಯದಲ್ಲಿ ಅವರನ್ನು ತೊಡಗುವಂತೆ ಮಾಡಿರುವ ಕಾರ್ಯವು ಶ್ಲಾಘನೀಯ ಎಂದರು.ದಿ.ತೋಟಪ್ಪನವರು ಹಾಗೂ ಅವರ ಕುಟುಂಬದವರು ಸಮಾಜದವರ ಕಟ್ಟಿಕೊಂಡು ಇಲ್ಲಿನ ರೇಣುಕಾಮಂದಿರ ನಿರ್ಮಾಣಕ್ಕೆ ಹಗಲಿರಳು ಶ್ರಮಿಸಿರುವುದಕ್ಕೆ ಇವತ್ತು ಸುಂದರ ದೇವಸ್ಥಾನ ಹಾಗೂ ಸಭಾಭವನ ನಿರ್ಮಾಣವಾಗಿದೆ ಎಂದರು.
ಮಾತೃ ಹೃದಯವಿರುವ ಕೊಟ್ರಮ್ಮನವರ ಅಗಲಿಕೆ ಕೊಂಡಜ್ಜಿ ತೋಟಪ್ಪನವರ ಕುಟುಂಬಕ್ಕೆ ತುಂಬಲಾರದ ನಷ್ಟ. ಭಗವಂತನು ಇಚ್ಛೆಯಂತೆ ಅವನ ಪಾದಂಗಳಕ್ಕೆ ಸೇರುವುದು ಪ್ರತಿಯೊಂದು ಜೀವರಾಶಿಗಳಿಗೆ ವಿಧಿ ಲಿಖಿತವಾಗಿರುತ್ತದೆ ಎಂದ ಅವರು ಈ ಕುಟುಂಬವು ಆತ್ಮಸ್ಥೈರ್ಯ ತುಂಬಿ ಮುನ್ನಡೆಯಬೇಕೆಂದು ಆಶೀರ್ವದಿಸಿದರು. ಕಾರ್ಯಕ್ರಮಕ್ಕೆ ಮುನ್ನ ತೋಟಪ್ಪನವರ ಮನೆಯಲ್ಲಿ ಕೊಟ್ರಮ್ಮನವರ ಆತ್ಮ ಶಾಂತಿಗಾಗಿ ಇಷ್ಟಲಿಂಗ ಪೂಜೆ ನೆರವೇರಿಸಿದರು.ಈ ವೇಳೆ ಡಾ.ನಾಗಭೂಷಣ ಶಿವಾಚಾರ್ಯರು, ಜುಂಜಪ್ಪ ಸಿದ್ದಪ್ಪನವರ್, ಎನ್.ಎಚ್ ಪಾಟೀಲ್, ಕುಂಬಾರ್ ಕರಿಬಸಪ್ಪ, ಕೊಂಡಜ್ಜಿ ತೋಟಪ್ಪರ ಪಂಚಾಕ್ಷರಿ, ಕೊಂಡಜ್ಜಿ ವೀರೇಂದ್ರ, ತೋಟಪ್ಪರ ರುದ್ರಮುನಿ, ನೀಲಕಂಠ ಕೊಂಡಜ್ಜಿ. ಎನ್.ಈ ಸುರೇಶ್ ಸ್ವಾಮಿ. ಗಜ ಪುರದ ವೀರಯ್ಯನವರು. ವಿಶಾಲ. ಅನ್ನಪೂರ್ಣಮ್ಮ. ಅನುಸೂಯ, ಉಮಾ, ರಾಚಪ್ಪ, ಕಂಚಿಕೇರಿ ಶಿವಣ್ಣ, ಸಿದ್ದಯ್ಯ, ರೇವಣಸಿದ್ದಯ್ಯ, ಕೊಂಡಜ್ಜಿ ತೋಟಪ್ಪನವರ ಬಂಧುಗಳು ಹಾಗೂ ರೇಣುಕಾ ಮಂದಿರದ ಪದಾಧಿಕಾರಿಗಳಿದ್ದರು.
,,,,,,,,,,,,,,,,,,,,,,,,