ಸಾರಾಂಶ
ನೀರು ಅತ್ಯಮೂಲ್ಯ ಮಿತವಾಗಿ ಬಳಸಿ, ಪೋಲು ಮಾಡದಿರಿ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸುವ ನಗಸಭೆಯ ಅಧಿಕಾರಿಗಳು ಹಾಗೂ ಸದಸ್ಯರೇ ಬೇಜವಾಬ್ದಾರಿ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಶಿರಸಿ: ಪ್ರಸಕ್ತ ಸಾಲಿನಲ್ಲಿ ಬಿಸಿಲಿನ ತಾಪದಿಂದ ಜಲಮೂಲಗಳೆಲ್ಲವೂ ಒಣಗಿರುವ ಕಾರಣ ಕುಡಿಯುವ ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆಯ ನಿರ್ಲಕ್ಷ್ಯದಿಂದ ಭೀಮನಗುಡ್ಡದ ಜಲಸಂಗ್ರಹಗಾರದಿಂದ ಪ್ರತಿನಿತ್ಯ ಸಾವಿರಾರು ಲೀಟರ್ ನೀರು ಪೋಲಾಗುತ್ತಿದೆ.
ಶಿರಸಿ ನಗರ ವ್ಯಾಪ್ತಿಯ ೩೧ ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸುವ ಕೆಂಗ್ರೆ ಮತ್ತು ಮಾರಿಗದ್ದೆ ಜಲಮೂಲಗಳಲ್ಲಿ ನೀರು ಹರಿಯುವುದು ನಿಂತು ಒಣಗಿದೆ. ನಗರ ವ್ಯಾಪ್ತಿಗೆ ನೀರು ಪೂರೈಕೆಗೆ ₹೫೬ ಲಕ್ಷ ವೆಚ್ಚದಲ್ಲಿ ೧೩ ಕೊಳವೆ ಬಾವಿಗಳನ್ನು ಹೊಸದಾಗಿ ತೆಗೆಯಲಾಗಿದೆ. ಇದರಲ್ಲಿ ಕೆಲವು ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಸಮರ್ಪವಾಗಿಲ್ಲ. ರಾಜ್ಯ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆ ನೀರಿನ ಪೂರೈಕೆಯೂ ನಗರಸಭೆಗೆ ಸವಾಲಾಗಿರುತ್ತದೆ. ಈ ನಡುವೆ ಭೀಮನಗುಡ್ಡದ ಜಲಸಂಗ್ರಹಗಾರದಿಂದ ಕಲ್ಕುಣಿ ಸ್ಮಶಾನದ ಪಕ್ಕದಲ್ಲಿ ನೀರು ಹರಿದು ಕೆರೆ ಸೇರುತ್ತಿದೆ. ಪ್ರತಿದಿನ ಸಾವಿರಾರು ಲೀಟರ್ ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿರುವುದಕ್ಕೆ ಸಾರ್ವಜನಿಕರು ನಗರಸಭೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ನೀರು ಅತ್ಯಮೂಲ್ಯ ಮಿತವಾಗಿ ಬಳಸಿ, ಪೋಲು ಮಾಡದಿರಿ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸುವ ನಗಸಭೆಯ ಅಧಿಕಾರಿಗಳು ಹಾಗೂ ಸದಸ್ಯರ ಬೇಜವಾಬ್ದಾರಿಯಿಂದ ಬಳಕೆಗೆ ಸಿಗದೇ, ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರ ಕುರಿತು ಬೇರೆ ವ್ಯವಸ್ಥೆ ಮಾಡುವುದರ ಬಗ್ಗೆ ಯೋಚಿಸಿ, ತ್ವರಿತವಾಗಿ ಯೋಜನೆ ಅನುಷ್ಠಾನಗೊಳಿಸಬೇಕು ಎನ್ನುತ್ತಾರೆ ಸಾರ್ವಜನಿಕರು.ಸುಮಾರು ೩೦ ಸಾವಿರ ಲೀಟರ್ ನೀರು ಪೋಲು
ಜಲಸಂಗ್ರಹಗಾರದಿಂದ ದಿನಿತ್ಯ ಸುಮಾರು ೩೦ ಸಾವಿರ ಲೀಟರ್ ನೀಲು ಹರಿದು ಹೋಗುತ್ತಿದೆ. ನೀರಿನ ತುಟಾಗ್ರತೆ ಇಷ್ಟೊಂದು ಪ್ರಮಾಣದಲ್ಲಿರುವಾಗ ನೀರು ಪೋಲು ಮಾಡುತ್ತಿರುವ ನಗರಭೆಯ ವಿರುದ್ಧ ಸಾರ್ವಜನಿಕರು ಆಕ್ರೋಶಗೊಳ್ಳುವುದು ಅನಿವಾರ್ಯ. ಸದ್ಯ ಎರಡ್ಮೂರು ದಿನಕ್ಕೊಮ್ಮೆ ನೀರು ಬರುತ್ತದೆ. ಸಮಯಕ್ಕೆ ಸರಿಯಾಗಿ ಮಾತ್ರ ನೀರು ಬರುವುದಿಲ್ಲ. ನೀರಿಗಾಗಿ ಕಾದು ಕುಳಿತುಕೊಳ್ಳುವ ಸ್ಥಿತಿ ಈಗಲೇ ಇದೆ. ಮುಂದಿನ ದಿನಗಳಲ್ಲಿ ಇನಷ್ಟು ನೀರಿನ ಅಭಾವ ಉಂಟಾಗುತ್ತದೆ. ನಗರಸಭೆಯಿಂದ ಸಮರ್ಪಕ ನೀರು ಪೂರೈಕೆಯು ಸವಾಲಿನ ಪ್ರಶ್ನೆಯಾಗುತ್ತದೆ. ನೀರು ಪೋಲು ತಡೆಗಟ್ಟುವ ಬಗ್ಗೆ ನಗರಸಭೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ.ಪರ್ಯಾಯ ಬಳಕೆಗೆ ಉಪಯೋಗಿಸಬಹುದು
ನೀರು ಶುದ್ಧೀಕರಣ ಮಾಡುವುದರಿಂದ ಬ್ಲೀಚಿಂಗ್ ಪೌಡರ್ ಹಾಕುವುದರಿಂದ ಇದಿಷ್ಟು ನೀರು ಹೊರಗಡೆ ಬಿಡುವುದು ಅನಿವಾರ್ಯವಾಗಿದೆ ಎಂಬುದು ನಗರಸಭೆಯ ಅಧಿಕಾರಿಗಳು ಹೇಳುತ್ತಾರೆ. ಜಲಸಂಗ್ರಹಗಾರದ ಸಮೀಪ ಮತ್ತೊಂದು ಟ್ಯಾಂಕ್ ನಿರ್ಮಿಸಿ, ಶೌಚಾಲಯ ಸ್ವಚ್ಛತೆ, ಚರಂಡಿ ಸ್ವಚ್ಛತೆಗೆ ಈ ನೀರನ್ನು ಬಳಕೆ ಮಾಡಿಕೊಳ್ಳಬಹುದು. ಅದನ್ನು ಬಿಟ್ಟು ನೀರು ಪೋಲು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಇದರ ಕುರಿತು ನಗರಸಭೆಯ ಸದಸ್ಯರು ಹಾಗೂ ಶಾಸಕರು ಗಮನ ವಹಿಸುವುದು ಅತ್ಯವಶ್ಯ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.ಕಠಿಣ ಕ್ರಮವಾಗಲಿ: ಒಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರದ ದುಸ್ಥಿತಿ ಬಂದಿದ್ದರೆ ಇನ್ನೊಂದೆಡೆ ಭೀಮನಗುಡ್ಡದ ಜಲ ಸಂಗ್ರಹಗಾರದಿಂದ ಧಾರಾಕಾರವಾಗಿ ಪೋಲಾಗುತ್ತಿದೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು. ಅಲ್ಲಿ ಕಾರ್ಯ ನಿರ್ವಹಿಸುವ ಬೇಜವಾಬ್ದಾರಿ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ