ಪತ್ರಕರ್ತರಿಗೆ ಬೆದರಿಕೆ : ಕ್ರಮಕ್ಕೆ ಆಗ್ರಹಿಸಿ ಮನವಿ

| Published : Jun 01 2024, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗ ಅಥಣಿ ತಾಲೂಕಿನ ಬೇವನೂರ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರೆಯಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಎದುರಿನಲ್ಲಿಯೇ ಮಾಧ್ಯಮದವರಿಗೆ ಬೆದರಿಕೆ ಹಾಕಿರುವ ಸಂತೋಷ ಚುರಮೂಲೆ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಒತ್ತಾಯಿಸಿ ರಾಮದುರ್ಗದ ಪತ್ರಕರ್ತರು ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಅಥಣಿ ತಾಲೂಕಿನ ಬೇವನೂರ ಗ್ರಾಮದ ಅಮೋಘ ಸಿದ್ದೇಶ್ವರ ಜಾತ್ರೆಯಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಎದುರಿನಲ್ಲಿಯೇ ಮಾಧ್ಯಮದವರಿಗೆ ಬೆದರಿಕೆ ಹಾಕಿರುವ ಸಂತೋಷ ಚುರಮೂಲೆ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಒತ್ತಾಯಿಸಿ ರಾಮದುರ್ಗದ ಪತ್ರಕರ್ತರು ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ತಕ್ಷಣ ಬೆದರಿಕೆ ಹಾಕಿರುವ ಸಂತೋಷ ಚುರಮೂಲೆ ಮೇಲೆ ಕಾನೂನು ಕ್ರಮ ಕೈಗೊಂಡು ಕರ್ತವ್ಯ ನಿರ್ವಹಿಸುವ ಪತ್ರಕರ್ತರಿಗೆ ರಕ್ಷಣೆ ನೀಡಬೇಕು. ಶಾಸಕರ ಎದುರಿನಲ್ಲಿಯೇ ಬೆದರಿಕೆ ಹಾಕಿದರೇ ಶಾಸಕರು ಸುಮ್ಮನಿರುವುದು ವರ್ತನೆ ಸರಿಯಲ್ಲ ಎಂದು ಪತ್ರಕರ್ತರು ಶಾಸಕರ ಕ್ರಮದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರೆಸ್‌ಕ್ಲಬ್ ಅಧ್ಯಕ್ಷ ಎಂ.ಬಿ.ಧೂಪದ, ಕಾರ್ಯದರ್ಶಿ ಚನ್ನಪ್ಪ ಮಾದರ, ಹಿರಿಯ ಪತ್ರಕರ್ತರಾದ ಈರಣ್ಣ ಬುಡ್ಡಾಗೋಳ, ಗುರು ಮುನವಳ್ಳಿ, ರವಿ ಸದಾಶಿವನವರ, ಎಂ.ಕೆ.ಯಾದವಾಡ, ರಾಮಚಂದ್ರ ಯಾದವಾಡ, ಸುಭಾಷ ಘೋಡಕೆ, ಅಭಿ ಮುನವಳ್ಳಿ, ರಮೇಶ ರಾಯಭಾಗ, ವೀರಣ್ಣ ಕಲ್ಯಾಣಿ ಸೇರಿದಂತೆ ಹಲವರಿದ್ದರು.