ಕಾರು ತೆರವುಗೊಳಿಸುವಂತೆ ಕೇಳಿದ್ದಕ್ಕೆ ಆಕ್ರೋಶಗೊಂಡ ಆರೋಪಿಗಳು ಜಾತ್ರಾ ಕಮಿಟಿಯ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

​ಗದಗ: ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿನ ಬಸವೇಶ್ವರ ಜಾತ್ರಾ ಮಹೋತ್ಸವದ ವೇಳೆ ರಥೋತ್ಸವದ ಹಾದಿಯಲ್ಲಿ ಕಾರು ಅಡ್ಡಗಟ್ಟಿ ಗಲಾಟೆ ಮಾಡಿದ್ದಲ್ಲದೆ, ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮೂವರು ಯುವಕರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಸಂಜೆ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಸಂಭ್ರಮ ಮನೆಮಾಡಿತ್ತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ರಥೋತ್ಸವ ಸಾಗುತ್ತಿದ್ದ ವೇಳೆ ಅನ್ಯ ಕೋಮಿನ ಕೆಲ ಹುಡುಗರು ಮತ್ತು ತಂಡದವರು ತಮ್ಮ ಕಾರನ್ನು ರಥದ ಹಾದಿಯಲ್ಲೇ ಅಡ್ಡಲಾಗಿ ನಿಲ್ಲಿಸಿದ್ದರು.

​ಭಕ್ತಾದಿಗಳು ಹಾಗೂ ಜಾತ್ರಾ ಕಮಿಟಿಯ ಸದಸ್ಯರು ರಥ ಸಾಗಲು ಅನುವು ಮಾಡಿಕೊಡುವಂತೆ ಮತ್ತು ಕಾರನ್ನು ಪಕ್ಕಕ್ಕೆ ಸರಿಸುವಂತೆ ವಿನಂತಿಸಿದ್ದಾರೆ. ಆದರೆ ಈ ವೇಳೆ ಕಿರಿಕ್ ಮಾಡಿದ ತಂಡವು ಕಾರು ಸರಿಸಲು ನಿರಾಕರಿಸಿದ್ದಲ್ಲದೆ, ಜಾತ್ರಾ ಕಮಿಟಿಯ ಯುವಕರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

ಕಾರು ತೆರವುಗೊಳಿಸುವಂತೆ ಕೇಳಿದ್ದಕ್ಕೆ ಆಕ್ರೋಶಗೊಂಡ ಆರೋಪಿಗಳು ಜಾತ್ರಾ ಕಮಿಟಿಯ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ತಕ್ಷಣ ಕಾರ್ಯಪ್ರವೃತ್ತರಾದ ಗದಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ, ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.

​ಜಾತ್ರಾ ಕಮಿಟಿ ಸದಸ್ಯರು ನೀಡಿದ ದೂರಿನನ್ವಯ ಮೂವರು ಆರೋಪಿಗಳ ಮೇಲೆ ಪ್ರಕರಣ ದಾಖಲಾಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸಂಭ್ರಮದ ಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಮಾಡಿ ಸಾರ್ವಜನಿಕ ಶಾಂತಿಗೆ ಭಂಗ ತಂದವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸವ ಕೇಂದ್ರದಲ್ಲಿ ವಚನಗೋಷ್ಠಿ

ಗದಗ: ತಾಲೂಕಿನ ಕಳಸಾಪುರ ಗ್ರಾಮದ ಬಸವ ಕೇಂದ್ರದಲ್ಲಿ ಶಿವಾನುಭವದಲ್ಲಿ ವಚನಗೋಷ್ಠಿ ಜರುಗಿತು.ಬಸವಣ್ಣನವರ ಭಾವಚಿತ್ರಕ್ಕೆ ಕಾರ್ಯಕ್ರಮದಲ್ಲಿ ಗಣ್ಯರು ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಿಲ್ಪಾ ಖಂಡಮ್ಮನವರ, ಜಯಶ್ರೀ, ಸವಿತಾ ಖಂಡಮ್ಮನವರ, ಮುತ್ತು ನಾಯ್ಕರ, ರಾಜು ಬಳ್ಳಾರಿ, ಮಲ್ಲೇಶ ನಾಗಸಮುದ್ರ ಮುಂತಾದವರು ಇದ್ದರು. ಬಸವಕೇಂದ್ರದ ಕಾರ್ಯಾಧ್ಯಕ್ಷ ಸಮಾಜ ಸೇವಕರು ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿದರು. ಮಂಜನಗೌಡ ರಾಮನಗೌಡ್ರ ಸ್ವಾಗತಿಸಿ, ನಿರೂಪಿಸಿದರು.