ಹೊನ್ನಾಳಿಯಲ್ಲಿ ಆಗಸ್ಟ್ ಹತ್ತರಿಂದ ಮೂರು ದಿನ ರಾಯರ ಆರಾಧನೆ

| Published : Aug 10 2025, 01:30 AM IST

ಹೊನ್ನಾಳಿಯಲ್ಲಿ ಆಗಸ್ಟ್ ಹತ್ತರಿಂದ ಮೂರು ದಿನ ರಾಯರ ಆರಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಆ.10ರಿಂದ ಮೂರು ದಿನ ನಡೆಯಲಿದೆ. ಶ್ರೀ ಕ್ಷೇತ್ರ ಸಾನ್ನಿಧ್ಯ ಪ್ರಾಚೀನತೆಗಳಿಂದ ದ್ವಿತೀಯ ಮಂತ್ರಾಲಯ ಎಂದೇ ಮಾನ್ಯವಾದ ಹೊನ್ನಾಳಿ ಗುರು ರಾಘವೇಂದ್ರರ ಮಠ ಗುರುರಾಯರ ಆರಾಧನೆಗೆ ಸಜ್ಜಾಗಿದೆ.

ಹೊನ್ನಾಳಿ: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಆ.10ರಿಂದ ಮೂರು ದಿನ ನಡೆಯಲಿದೆ. ಶ್ರೀ ಕ್ಷೇತ್ರ ಸಾನ್ನಿಧ್ಯ ಪ್ರಾಚೀನತೆಗಳಿಂದ ದ್ವಿತೀಯ ಮಂತ್ರಾಲಯ ಎಂದೇ ಮಾನ್ಯವಾದ ಹೊನ್ನಾಳಿ ಗುರು ರಾಘವೇಂದ್ರರ ಮಠ ಗುರುರಾಯರ ಆರಾಧನೆಗೆ ಸಜ್ಜಾಗಿದೆ.

ಪವಿತ್ರ ತುಂಗಭದ್ರಾ ನದಿ ತೀರದ ಪವಿತ್ರ ಸನ್ನಿಧಿಯಲ್ಲರುವ ರಾಯರ ಮಠಕೆ ಕೇವಲ ದಾವಣಗೆರೆ ಜಿಲ್ಲೆ ಅಥವಾ ಶಿವಮೊಗ್ಗ ಜಿಲ್ಲೆಯಿಂದ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದಲ್ಲೂ ಸಹಾಸ್ರಾರು ಭಕ್ತರು ಆರಾಧನೆಗೆ ಆಗಮಿಸಿ ರಾಯರ ದರ್ಶನ ಪಡೆಯಲಿದ್ದಾರೆ.

ಭಾನುವಾರ ರಾಯರ ಪೂರ್ವಾರಾಧನೆ, ಸೋಮವಾರ ಮಧ್ಯಾರಾಧನೆ, ಮಂಗಳವಾರ ಉತ್ತರಾರಾಧನೆ, ರಾಯರ ಬೆಳ್ಳಿ ರಥೋತ್ಸವ ಹಾಗೂ ಬುಧವಾರ ಪವಮಾನ ಹೋಮ ಮತ್ತು ಅಭಿನಂದನಾ ಕಾರ್ಯಕ್ರಮವೂ ನಡೆಯಲಿದೆ.

ರಾಯರ ಆರಾಧನ ಕಾಲದಲ್ಲಿ ಬಾನುವಾರ ವಿದ್ವಾನ್ ಮಧೂರ್ ಪಿ ಬಾಲಸುಬ್ರಹ್ಮಣ್ಯಂ,ಸುಷ್ಮಾ ಸಂತೋಷ್ ಅವರಿಂದ ಸಂಗೀತ ಕಾರ್ಯಕ್ರಮ ಸೇರಿದಂತೆ ಪಂಡಿತರಿಂದ ಉಪನ್ಯಾಸ, ಪಾರಾಯಣಾಧಿಗಳೊಂದಿಗೆ ಜ್ಞಾನಾರಾಧನೆ, ಸಂಗೀತಾ ಕಲಾವಿದರಿಂದ ಗಾನಾರಾಧನೆ, ಹಿರಿಯರು, ಜ್ಞಾನಿಗಳು ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಮತ್ತು ಅನ್ನಬ್ರಹ್ಮಾರಾಧನೆಗಳು ಸೇರಿದಂತೆ ಭರತನಾಟ್ಯ ದಾಸನಮನ, ದಾಸವಾಣಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀಮಠದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಗುರುರಾಯರ ಮಠದ ಪದಾಧಿಕಾರಿಗಳು ತಿಳಿಸಿದ್ದಾರೆ.

ಧಾರ್ಮಿಕ ಆಚರಣೆ:

ಮೂರು ದಿನಗಳ ಕಾಲ ಕನಕಾಭಿಷೇಕ, ಪಾದಪೂಜೆ, ವಾಯುಸ್ತುತಿ ಪಾರಾಯಣ, ಶ್ರೀ ರಾಘವೇಂದ್ರ ಸ್ತೋತ್ರ, ಅಷ್ಟೋತ್ರ ಪಾರಾಯಣ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನದ ಆರಾಧನ ಸಮಯದಲ್ಲಿ ನಡೆಯುತ್ತವೆ ಎಂದು ಶ್ರೀಮಠ ತಿಳಿಸಿದೆ.