ಉಡುಪಿ: ಇಲ್ಲಿನ ಜಾಮಿಯ ಮಸೀದಿಯ ಬಳಿ ಆಟೋಮೆಟಿಕ್ ಕಾರೊಂದು ರಿವರ್ಸ್ ತೆಗೆಯುವಾಗ ಬೇಕಾಬಿಟ್ಟಿ ಚಲಿಸಿ ಮೂವರು ಗಾಯಗೊಂಡ ಘಟನೆ ನಡೆದಿದೆ.

ಉಡುಪಿ: ಇಲ್ಲಿನ ಜಾಮಿಯ ಮಸೀದಿಯ ಬಳಿ ಆಟೋಮೆಟಿಕ್ ಕಾರೊಂದು ರಿವರ್ಸ್ ತೆಗೆಯುವಾಗ ಬೇಕಾಬಿಟ್ಟಿ ಚಲಿಸಿ ಮೂವರು ಗಾಯಗೊಂಡ ಘಟನೆ ನಡೆದಿದೆ. ಮಸೀದಿಯ ಬಳಿ ಕಟ್ಟಡವೊಂದರ ಮುಂಭಾಗದಲ್ಲಿ ಕಾರನ್ನು ಪಾರ್ಕ್ ಮಾಡಲಾಗಿತ್ತು. ಕಾರ್ ಮಾಲಿಕ ಒಳಗೆ ಕುಳಿತು ಎಕ್ಸಲೆಟರ್ ಕೊಟ್ಟಾಗ ನಿಯಂತ್ರಣ ತಪ್ಪಿದ ಅಟೋಮೆಟಿಕ್ ಕಾರು ಏಕಾಏಕಿ ಹಿಂದಕ್ಕೆ ಅಡ್ಡಾದಿಡ್ಡಿ ಚಲಿಸಿ ಹಿಂಬದಿಯಲ್ಲಿ ಬರುತ್ತಿದ್ದ ಬೈಕ್, ಆಟೋ ರಿಕ್ಷಾ ಮತ್ತು ಪಾದಾಚಾರಿಗೆ ಡಿಕ್ಕಿ ಹೊಡೆದಿದೆ.

ದ್ವಿಚಕ್ರ ವಾಹನ ಸವಾರ, ಆಟೋ ಚಾಲಕ ಮತ್ತು ಪಾದಾಚಾರಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಿನ ಅಡ್ಡಾದಿಡ್ಡಿ ಚಲನೆ ಕಟ್ಟಡ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಈ ದೃಶ್ಯ ಈಗ ವೈರಲ್ ಆಗಿದೆ.