ಸಾರಾಂಶ
ಬೆಂಗಳೂರಿನ ವಸಂತ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನರೇಗಾ ಹಬ್ಬ- ೨೦೨೫ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶಸ್ತಿ ಪ್ರದಾನ ಮಾಡಿದರು.
೨೦೨೩- ೨೪ನೇ ಸಾಲಿನಲ್ಲಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನ
ಕನ್ನಡಪ್ರಭ ವಾರ್ತೆ ಮಂಡ್ಯಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದಕ್ಕೆ ಮಂಡ್ಯ ಜಿಲ್ಲೆಯು ೩ ರಾಜ್ಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನವಾಗಿದೆ.
ಮೈಸೂರು ವಿಭಾಗದ ಅತ್ಯುತ್ತಮ ಒಗ್ಗೂಡಿಸುವಿಕೆ ಜಿಲ್ಲಾ ಪುರಸ್ಕಾರಕ್ಕೆ ರೇಷ್ಮೆ ಇಲಾಖೆ, ಅತ್ಯುತ್ತಮ ಗ್ರಾಮ ಪಂಚಾಯತಿ ಪುರಸ್ಕಾರಕ್ಕೆ ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಪಂ ಲತಾ ಡಿ.ಕೆ ಅತ್ಯುತ್ತಮ ಕಾಯಕ ಬಂಧುವಾಗಿ ವಿಶೇಷ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.ಬೆಂಗಳೂರಿನ ವಸಂತ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನರೇಗಾ ಹಬ್ಬ- ೨೦೨೫ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶಸ್ತಿ ಪ್ರದಾನ ಮಾಡಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ರೇಷ್ಮೆ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೈನಾವತಿ, ಪಿಡಿಒ ನಂಜುಂಡಯ್ಯ ಪಿ.ದೊಡ್ಡರಸಿನಕೆರೆ ಗ್ರಾಪಂ ಕಾಯಕ ಬಂಧು ಲತಾ ಇತರರು ಭಾಗಿಯಾಗಿದ್ದರು.ಮ- ನರೇಗಾ ಯೋಜನೆಯಲ್ಲಿ ಅತ್ಯುತ್ತಮ ಒಗ್ಗೂಡಿಸುವಿಕೆಗೆ ನೀಡಲಾದ ಜಿಲ್ಲಾ ಪುರಸ್ಕಾರವನ್ನು ರೇಷ್ಮೆ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ ಸ್ವೀಕರಿಸಿದರು. ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಅತ್ಯುತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿಯನ್ನು ಅಧ್ಯಕ್ಷೆ ಮೈನಾವತಿ ಹಾಗೂ ಪಿಡಿಒ ನಂಜುಂಡಯ್ಯ ಅವರು ಸ್ವೀಕರಿಸಿದರು. ದೊಡ್ಡರಸಿನಕೆರೆ ಗ್ರಾಮ ಪಂಚಾಯಿತಿಯ ಡಿ.ಕೆ.ಲತಾ ಉತ್ತಮ ಕಾಯಕಬಂಧು ಪ್ರಶಸ್ತಿ ಪಡೆದರು.