ಸಾರಾಂಶ
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಬಿಜೆಪಿಯಲ್ಲಿ ಯಾರಿಗೆ ಸಿಗುತ್ತೆ ? ಕಾಂಗ್ರೆಸ್‌ನಲ್ಲಿ ಯಾರಿಗೆ ಟಿಕೆಟ್ ? ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳ ಘೋಷಣೆ ಮಾಡುವ ಕಾಲ ಸನ್ನಿಹಿತವಾಗುತ್ತಿದ್ದಂತೆ ಎಲ್ಲರ ಚಿತ್ತ ದೆಹಲಿಯತ್ತ ಇದೆ. ಆದರೆ, ಯಾರಿಗೆ ಟಿಕೆಟ್ ಎಂಬುದು ಖಚಿತವಾಗಿ ಊಹಿಸಲು ಸಾಧ್ಯವೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ, ಜಿಲ್ಲೆಯಲ್ಲಿ ಜನ್ಮ ತಾಳಿದ ಗೋ ಬ್ಯಾಕ್ ಚಳುವಳಿ. ಇದು, ಕಮಲ ಮಾತ್ರವಲ್ಲ, ಕೈಗೂ ಸುತ್ತಿಕೊಂಡಿತ್ತು. ಹೀಗಾಗಿ ಈ ಎರಡು ಪಕ್ಷಗಳು ಯಾರಿಗೆ ಮಣೆ ಹಾಕುತ್ತವೆ ಎಂಬ ಕುತೂಹಲ ಮೂಡಿದೆ.
ಮತ್ತೆ ರಿಪೀಟ್ ಆಗುತ್ತಾ 2014ರ ಚುನಾವಣಾ ಕಣ । ಬಿಜೆಪಿ- ಕಾಂಗ್ರೆಸ್‌ನಲ್ಲೂ ಗೋ ಬ್ಯಾಕ್ ಚಳುವಳಿ । ಟಿಕೆಟ್ ಸಿಗುವ ಚಿತ್ರಣ ಇನ್ನೂ ಅಸ್ಪಷ್ಟ,
ಆರ್. ತಾರಾನಾಥ್‌ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಬಿಜೆಪಿಯಲ್ಲಿ ಯಾರಿಗೆ ಸಿಗುತ್ತೆ ? ಕಾಂಗ್ರೆಸ್‌ನಲ್ಲಿ ಯಾರಿಗೆ ಟಿಕೆಟ್ ? ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳ ಘೋಷಣೆ ಮಾಡುವ ಕಾಲ ಸನ್ನಿಹಿತವಾಗುತ್ತಿದ್ದಂತೆ ಎಲ್ಲರ ಚಿತ್ತ ದೆಹಲಿಯತ್ತ ಇದೆ. ಆದರೆ, ಯಾರಿಗೆ ಟಿಕೆಟ್ ಎಂಬುದು ಖಚಿತವಾಗಿ ಊಹಿಸಲು ಸಾಧ್ಯವೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ, ಜಿಲ್ಲೆಯಲ್ಲಿ ಜನ್ಮ ತಾಳಿದ ಗೋ ಬ್ಯಾಕ್ ಚಳುವಳಿ. ಇದು, ಕಮಲ ಮಾತ್ರವಲ್ಲ, ಕೈಗೂ ಸುತ್ತಿಕೊಂಡಿತ್ತು. ಹೀಗಾಗಿ ಈ ಎರಡು ಪಕ್ಷಗಳು ಯಾರಿಗೆ ಮಣೆ ಹಾಕುತ್ತವೆ ಎಂಬ ಕುತೂಹಲ ಮೂಡಿದೆ.ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಜಯಗಳಿಸಿದ ಶೋಭಾ ಕರಂದ್ಲಾಜ್ ಅವರು ಈ ಬಾರಿಯೂ ಕೂಡ ಸ್ಪರ್ಧೆ ಮಾಡಲು ಇಚ್ಚಿಸಿದ್ದಾರೆ. ಆದರೆ, ಅವರಿಗೆ ಮಾತೃ ಪಕ್ಷದವರೆ ಅಡ್ಡಗಾಲು ಹಾಕುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಗೋ ಬ್ಯಾಕ್ ಶೋಭಾ ಎಂದು ಸಾಮಾಜಿಕ ಜಾಲ ತಾಣದಲ್ಲಿ ಕರೆ ನೀಡುವ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಅವರಿಗೆ ಟಿಕೆಟ್ ಕೊಟ್ರೆ ಒಂದು ಲಕ್ಷ ಬಿಜೆಪಿ ಮತಗಳು ನೋಟಾಕ್ಕೆ ಹಾಕುವುದಾಗಿ ಇದೇ ಸಾಮಾಜಿಕ ಜಾಲ ತಾಣದಲ್ಲಿ ಪಕ್ಷದ ಕಾರ್ಯಕರ್ತರು ಬೆದರಿಕೆ ಹಾಕಿದ್ದರು.ಶೋಭಾ ಕರಂದ್ಲಾಜೆ ಬೇಡ, ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್, ಡಿ.ಎನ್. ಜೀವರಾಜ್, ಸಿ.ಟಿ. ರವಿ. ಈ ಮೂವರಲ್ಲಿ ಓರ್ವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದರು. ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿ ಟಿಕೆಟ್ ಪಕ್ಕಾ ಎಂಬ ಸುದ್ದಿ ಕ್ಷೇತ್ರದಲ್ಲಿ ಹರಡುತ್ತಿದ್ದಂತೆ ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡರ ಆಕ್ರೋಶ ಸ್ಫೋಟ ಗೊಂಡಿತು. ದಿಕ್ಕಾರದ ಘೋಷಣೆಗಳು ಮೊಳಗಿದವು.ಜಿಲ್ಲಾ ಕೇಂದ್ರದಲ್ಲಿ ಈ ರೀತಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಬಿಜೆಪಿ ವರಿಷ್ಟರು ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಸೋಮವಾರ ರಾತ್ರಿಯೇ ದೆಹಲಿಗೆ ಕರೆಸಿಕೊಂಡರು. ಹಾಗಾಗಿ ಕ್ಷೇತ್ರದಲ್ಲಿ ಮತ್ತೆ ಗೊಂದಲ ಸೃಷ್ಟಿಯಾಗಿದೆ. ಶೋಭಾ ಕರಂದ್ಲಾಜೆಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಗಾಳಿ ಸುದ್ದಿ ಮಂಗಳವಾರ ದಟ್ಟವಾಗಿ ಹರಡಿಕೊಂಡಿತ್ತು. ಸಿ.ಟಿ. ರವಿ ಅವರ ಮನವೊಲಿಸಿ ಅವರಿಗೆ ಬೇರೊಂದು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡುವ ಬಗ್ಗೆ ವರಿಷ್ಟರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.ಒಂದು ದಶಕ:ಬಿಜೆಪಿ ವರಿಷ್ಟರ ಲೆಕ್ಕಚಾರ ಅಂದುಕೊಂಡಂತೆ ಆದ್ರೆ ಶೋಭಾ ಕರಂದ್ಲಾಜೆ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಕಾಂಗ್ರೆಸ್ ನಡೆಯೂ ಕೂಡ ಅಸ್ಪಷ್ಟವಾಗಿದೆ. ಕ್ಷೇತ್ರದ ಮತದಾರರು ನಿರೀಕ್ಷಿಸಿದಂತೆ ಮಂಗಳವಾರದಂದು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು. ಅವರು ಪಕ್ಷಕ್ಕೆ ಬರುವ ಮೊದಲೇ ಕಾಂಗ್ರೆಸ್ ಪಕ್ಷದಲ್ಲಿ ಅವರ ಬಗ್ಗೆ ವಿರೋಧ ವ್ಯಕ್ತವಾಯಿತು. ಗೋ ಬ್ಯಾಕ್ ಹೆಗಡೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಕೆಲವರು ಟ್ಯಾಗ್ ಮಾಡಿದ್ದರು, ಡಾ.ಅಂಶುಮಂತ್, ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದರು.ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಪ್ರಶ್ನೆಯ ಮೊದಲ ಸಾಲಿನಲ್ಲಿ ಜಯಪ್ರಕಾಶ್ ಹೆಗಡೆ ಅವರ ಹೆಸರಿದೆ. ಎರಡು ಮತ್ತು ಮೂರನೇ ಸಾಲಿನಲ್ಲಿ ಇನ್ನುಳಿದ ಆಕಾಂಕ್ಷಿಗಳು ಇದ್ದಾರೆಂದು ಹೇಳಲಾಗುತ್ತಿದೆ.ಬಿಜೆಪಿಯಿಂದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಪಕ್ಷದಿಂದ ಜಯಪ್ರಕಾಶ್ ಹೆಗಡೆ ಸ್ಪರ್ಧೆ ಮಾಡಿದರೆ 2014ರ ಚುನಾವಣಾ ಕಣ ರಿಪೀಟ್ ಆಗಲಿದೆ.ಈ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಮೊದಲ ಚುನಾವಣೆಯಾಗಿದ್ದರೆ, ಜಯಪ್ರಕಾಶ್ ಹೆಗಡೆ ಅವರಿಗೆ ಎರಡನೇ ಚುನಾವಣೆಯಾಗಿತ್ತು. ಈ ಬಾರಿಯೂ ಕೂಡ ಇದೇ ಚಿತ್ರಣ ಮತದಾರರ ಎದುರಾಗಲಿದೆಯಾ ? ಇದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.ಪೋಟೋ ಫೈಲ್ ನೇಮ್ 12 ಕೆಸಿಕೆಎಂ 8 - 9