ಕೂಲಿ ಕೇಳಿದ್ದಕ್ಕೆ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ
KannadaprabhaNewsNetwork | Published : Oct 20 2023, 01:00 AM IST
ಕೂಲಿ ಕೇಳಿದ್ದಕ್ಕೆ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ
ಸಾರಾಂಶ
ಕೂಲಿ ಹಣ ಕೇಳಿದಕ್ಕೆ ಜಾತಿ ನಿಂದನೆ ಮಾಡಿ, ಕಂಬಕ್ಕೆ ಕಟ್ಟಿಹಾಕಿ ಗಂಭೀರವಾಗಿ ಹಲ್ಲೆ ಮಾಡಿರುವ ದೊಡ್ಡವಲಗಮಾದಿ ಗ್ರಾಮದಲ್ಲಿ ನಡೆದಿದೆ.
ಬಂಗಾರಪೇಟೆ: ಕೂಲಿ ಹಣ ಕೇಳಿದಕ್ಕೆ ಜಾತಿ ನಿಂದನೆ ಮಾಡಿ, ಕಂಬಕ್ಕೆ ಕಟ್ಟಿಹಾಕಿ ಗಂಭೀರವಾಗಿ ಹಲ್ಲೆ ಮಾಡಿರುವ ದೊಡ್ಡವಲಗಮಾದಿ ಗ್ರಾಮದಲ್ಲಿ ನಡೆದಿದೆ. ಅಮರೇಶ್ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿರುವ ವ್ಯಕ್ತಿ. ದೊಡ್ಡವಲಗಮಾದಿ ಗ್ರಾಮದ ಜಗದೀಶ್ ಸಿಂಗ್, ರವಿಸಿಂಗ್ ಮತ್ತು ಸತೀಶ್ ಸಿಂಗ್ ಎಂಬುವವವರು ಹಲ್ಲೆ ಮಾಡಿರುವ ಆರೋಪಿಗಳು. ಜಗದೀಶ್ ಸಿಂಗ್ ಎಂಬುವರ ಮನೆ ನಿರ್ಮಾಣದ ಕೆಲಸಕ್ಕೆ ಅಮರೇಶ್ ಹೋಗಿದ್ದು, ಕೂಲಿ ಹಣ ಕೊಡಿ ಎಂದು ಕೇಳಿದಕ್ಕೆ ಜಾತಿ ನಿಂದನೆ ಮಾಡಿದಲ್ಲದೆ ಹಣವನ್ನು ಎಲ್ಲೆಂದರಲ್ಲಿ ಕೇಳುತ್ತಿಯಾ ಎಂದು ಜಗದೀಶ್ ಸಿಂಗ್, ರವಿಸಿಂಗ್ ಮತ್ತು ಸತೀಶ್ ಸಿಂಗ್ ರಸ್ತೆಯಲ್ಲೆ ಹಲ್ಲೆ ಮಾಡಿ ರಕ್ತ ಬರುವಂತೆ ಹೊಡೆದಿದ್ದಾರೆ. ನಂತರ ಸತೀಶ್ ಸಿಂಗ್ ಮನೆ ಬಳಿ ಕರೆದುಕೊಂಡು ಹೋಗಿ ಕಂಬಕ್ಕೆ ಕಟ್ಟಿ ಹಾಕಿ ಹಣ ಕೇಳುವಿಯಾ ಎಂದು ಬೆಲ್ಟ್ ನಿಂದ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಗ್ರಾಮಸ್ಥರಿಗೆ ವಿಷಯ ತಿಳಿದು ಸ್ಥಳಕ್ಕೆ ಬಂದು ಬಿಡಿಸಲು ಪ್ರಯತ್ನಿಸಿದ್ದಾರೆ. ಹಲ್ಲೆಗೊಳಗಾಗಿದ್ದ ಅಮರೇಶ್‌ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಮರೇಶ್ ನೀಡಿದ ದೂರಿನ ಮೇಲೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೀಳು ಜಾತಿಯವರು ನೀಡಿದ ದೂರಿನ ಮೇರೆಗೆ ನಮ್ಮನ್ನು ಪೋಲಿಸರು ಬಂಧಿಸಿದ್ದಾರೆ. ರಮೇಶ್ ನಮ್ಮವರೊಂದಿಗೆ ಅಸಭ್ಯವಾಗಿ ವರ್ತಿಸಿದರಲ್ಲದೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಎಂದು ಆರೋಪಿಗಳು ಪ್ರತಿದೂರು ನೀಡಿದ್ದಾರೆ.