ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಚನ್ನಮಲ್ಲೀಪುರ ಗ್ರಾಮದ ಬಳಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲವಾಗಿದೆ.ಬುಧವಾರ ಬೆಳಗ್ಗೆಯಿಂದಲೇ ಹುಲಿ ಚನ್ನಮಲ್ಲೀಪುರ ಬಳಿ ಹುಲಿ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಆ ಹುಲಿಯ ಮೇಲೆ‌ ನಿಗಾ ವಹಿಸಿತ್ತು. ಗುರುವಾರ ಸಹ ಹುಲಿ ಸೆರೆಗೆ ರೈತರ ಆಗ್ರಹವಾಗಿತ್ತು.ರೈತರ ಆಗ್ರಹ ಹಾಗೂ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್‌ರ ಸೂಚನೆ ಮೇರೆಗೆ ಅರಣ್ಯ ಇಲಾಖೆ ಸಾಕಾನೆ ಕರೆಸಿ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿತು.ಇದರ ಮಧ್ಯೆ ಎಸಿಎಫ್ ಕೆ. ಸುರೇಶ್ ಹಾಗೂ ಮದ್ದೂರು ಆರ್‌ಎಫ್‌ಒ ಪುನೀತ್ ಕುಮಾರ್‌ ರೈತರು ಹಾಗೂ ಸಾರ್ವಜನಿಕರಿಂದ ಬೈಗುಳ ಉಚಿತವಾಗಿ ಸಿಕ್ಕಿತ್ತು.ಇದರ ಬೆನ್ನಲ್ಲೇ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ಮೈಸೂರು ವೃತ್ತದ ಸಿಸಿಎಫ್‌ ರವಿಶಂಕರ್‌ ಸಾಕಾನೆ ಬಂದ ನಂತರ ಸೆರೆ. ನಂತರ ಹುಲಿಗೆ ಡಾಟ್ ಮಾಡುವ ಮೂಲಕ ಹುಲಿ ಪ್ರಜ್ಞೆ ತಪ್ಪಿದ ಬಳಿಕ ಬಲೆ ಮೂಲಕ ಸೆರೆ ಹಿಡಿದರು.