ದಿನದಲ್ಲಿ ಕೆಲಹೊತ್ತನ್ನಾದರೂ ಓದಿಗೆ ಮೀಸಲಿಡಬೇಕೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಮನವಿ ಮಾಡಿದರು.ದಿನದಲ್ಲಿ ಕೆಲಹೊತ್ತನ್ನಾದರೂ ಓದಿಗೆ ಮೀಸಲಿಡಬೇಕೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಮನವಿ ಮಾಡಿದರು.
ಮಡಿಕೇರಿ: ದಿನದಲ್ಲಿ ಕೆಲಹೊತ್ತನ್ನಾದರೂ ಓದಿಗೆ ಮೀಸಲಿಡಬೇಕೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಮನವಿ ಮಾಡಿದರು.ಅಮ್ಮತ್ತಿ ಒಂಟಿಯಂಗಡಿಯಲ್ಲಿರುವ ಕೊಡವ ಅಸೋಸಿಯೇಶನ್ ಸಂಸ್ಥೆಯಲ್ಲಿ ಸ್ಥಾಪಿಸಿದ14ನೇ ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮದಲ್ಲಿ ಪುಸ್ತಕ ಪತ್ತಾಯ ಅನಾವರಣಗೊಳಿಸಿ ಮಾತನಾಡಿದರು.
ಅಕಾಡೆಮಿಯ ಇತಿಹಾಸದಲ್ಲಿ ಪ್ರಾರಂಭಿಸಿರುವ ಪುಸ್ತಕ ಪತ್ತಾಯ ಯೋಜನೆಗೆ ನಾಡಿನಾದ್ಯಂತ ಬೆಂಬಲ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಪುಸ್ತಕ ಪತ್ತಾಯಗಳು ತೆರೆದುಕೊಳ್ಳಲಿವೆ. ಇವೆಲ್ಲ ಮುಂದಿನ ದಿನಗಳಲ್ಲಿ ಕೊಡವ ಸಾಹಿತ್ಯದ ಕ್ರಾಂತಿಗೆ ನಾಂದಿ ಹಾಡಲಿದೆ ಎಂದು ಮಹೇಶ್ ನಾಚಯ್ಯ ಅಭಿಪ್ರಾಯಿಸಿದರು.ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮಾತನಾಡಿ, ಕೊಡವ ಪುಸ್ತಕ ಪತ್ತಾಯವು ಮಹತ್ವದ ಯೋಜನೆಯಾಗಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವಂತಾಗಬೇಕು. ಮುಂದಿನ ದಿನಗಳಲ್ಲಿ ಅಕಾಡೆಮಿ ವತಿಯಿಂದ ನಡೆಸುವ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾರ್ಯಕ್ರಮಗಳಿಗೆ ಸಹಕರಿಸುವುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೊಡಗಿನ ಪರಿಸರ ಹದಗೆಡುತ್ತಿದ್ದು, ಭೂಪರಿವರ್ತನೆಗಳಂತ ಪ್ರಕ್ರಿಯೆಗೆ ಅವಕಾಶ ನೀಡಬಾರದು. ಕೃಷಿಗೆ ಕೇರಳ ರಾಜ್ಯದ ಮಾದರಿಯಲ್ಲಿ ಸಬ್ಸಿಡಿ ಸಿಗುವಂತಾಬೇಕು. ಈ ನಿಟ್ಟಿನಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಮನಸ್ಸು ಮಾಡಬೇಕು ಎಂದರು. ಅಕಾಡೆಮಿ ವತಿಯಿಂದ ಮಚ್ಚಾರಂಡ ಕುಟುಂಬಸ್ಥರಿಗೆ ನಾಲ್ಕು ದುಡಿಗಳನ್ನು ನೀಡಲಾಯಿತು. ಕೊಡವ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಲೇಡೀಸ್ ವಿಂಗ್ ಅಧ್ಯಕ್ಷೆ ಮುಕ್ಕಾಟಿರ ಜಮುನ ಬೆಳ್ಯಪ್ಪ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಲೇಡೀಸ್ ವಿಂಗ್ ಸದಸ್ಯೆಯರಾದ ಬೇರೆರ ಸುಮಾ ಶಿವಪ್ಪ, ಮಂಡೇಪಂಡ ಲೀನ ಪೂವಣ್ಣ ಪ್ರಾರ್ಥಿಸಿದರು. ಮಚ್ಚಾರಂಡ ಸುಮಾ ಕಿರಣ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ನಾಪಂಡ ಸಿ. ಗಣೇಶ್ ವೇದಿಕೆಗೆ ಅತಿಥಿಗಳನ್ನು ಬರಮಾಡಿಕೊಂಡರು.ಚೆಕ್ ನೆರವು: ಮುಖ್ಯ ಅತಿಥಿಗಳನ್ನು ಅಸೋಸಿಯೇಶನ್ ಆರವಣದಿಂದ ಸಭಾಂಗಣಕ್ಕೆ ದುಡಿಕೊಟ್ಟ್ ಪಾಟ್‌ನೊಂದಿಗೆ ಕರೆತರಲಾಯಿತು. ಅಸೋಸಿಯೇಶನ್ ವತಿಯಿಂದ ಅಕಾಡೆಮಿಗೆ ಪುಸ್ತಕ ಪತ್ತಾಯದ ನೋಂದಣಿ ಶುಲ್ಕದ ಚೆಕ್ಕನ್ನು ನೀಡಲಾಯಿತು. ಇದರಂತೆ ಅಕಾಡೆಮಿ ಅಧ್ಯಕ್ಷರು ಪುಸ್ತಕ ಪತ್ತಾಯ ನೋಂದಣಿ ಪತ್ರವನ್ನು ಅಸೋಸಿಯೇಶನ್ ಅಧ್ಯಕ್ಷ ಮಂಡೇಪಂಡ ರಾಬಿನ್ ಮಂದಪ್ಪರಿಗೆ ಹಸ್ತಾಂತರಿಸಿದರು.ಅಸೋಸಿಯೇಶನ್ ಸದಸ್ಯರಾದ ಚಂಬಾಂಡ ಸುನಿಲ್ ಸುಬ್ಬಯ್ಯ, ಮಚ್ಚರಂಡ ದಿನೇಶ್, ಆಪಾಡಂಡ ತಮ್ಮ, ಸೋಮೆಯಂಡ ಎಸ್. ಕಾವೇರಪ್ಪ ತಂಡದವರು ಬಾಳೋಪಾಟ್ ಹಾಡಿದರು. ಬೆಕ್ಕೆಸೊಡ್ಲೂರ್ ಶ್ರೀ ಮಂದತವ್ವ ಕೊಡವ ಸಾಂಸ್ಕೃತಿಕ ಸಂಘದ ಮಲ್ಲಮಡ ಶಾಮಲ ತಂಡದವರಿಂದ ಗೆಜ್ಜೆತಂಡ್ ಹಾಗೂ ಕೊಡವ ನೃತ್ಯ ಪ್ರದರ್ಶಿಸಲಾಯಿತು. ಲೇಡೀಸ್ ವಿಂಗ್ ಸದಸ್ಯೆಯರು ಉಮ್ಮತ್ತಾಟ್ ಪ್ರದರ್ಶನ ನೀಡಿದರು. ಅಕಾಡೆಮಿ ಸದಸ್ಯರಾದ ಪಾನಿಕುಟ್ಟಿರ ಕೆ. ಕುಟ್ಟಪ್ಪ, ಕಂಬೆಯಂಡ ಡೀನ ಬೋಜಣ್ಣ, ನಾಯಂದಿರ ಆರ್. ಶಿವಾಜಿ, ಚೊಟ್ಟೆಯಂಡ ಸಂಜು ಕಾವೇರಪ್ಪ, ಪೊನ್ನಿರ ಯು. ಗಗನ್, ಕೊಂಡಿಜಮ್ಮನ ಬಾಲಕೃಷ್ಣ ಹಾಗೂ ಕೊಡವ ಸಂಸ್ಥೆಯ ಸಂಚಾಲಕ ಮಚ್ಚಾರಂಡ ಕಿರಣ್ ಮತ್ತಿತರರಿದ್ದರು. ಅಕಾಡೆಮಿ ಸದಸ್ಯ ನಾಪಂಡ ಸಿ. ಗಣೇಶ ವಂದಿಸಿದರು.