ಸಾರಾಂಶ
ಪಡಿತರ ಚೀಟಿ ತಿದ್ದುಪಡಿ ( ಹೆಸರು ಬದಲಾವಣೆ, ಸದಸ್ಯರ ಸೇರ್ಪಡೆ ಮತ್ತು ಸದಸ್ಯರ ಹೆಸರು ತೆಗೆದು ಹಾಕುವುದು, ನ್ಯಾಯಬೆಲೆ ಅಂಗಡಿ ಬದಲಾವಣೆ ಮತ್ತು ವಿಳಾಸ ಬದಲಾವಣೆ) ಪ್ರಾರಂಭ
ಯಾದಗಿರಿ: ಪಡಿತರ ಚೀಟಿ ತಿದ್ದುಪಡಿ ( ಹೆಸರು ಬದಲಾವಣೆ, ಸದಸ್ಯರ ಸೇರ್ಪಡೆ ಮತ್ತು ಸದಸ್ಯರ ಹೆಸರು ತೆಗೆದು ಹಾಕುವುದು, ನ್ಯಾಯಬೆಲೆ ಅಂಗಡಿ ಬದಲಾವಣೆ ಮತ್ತು ವಿಳಾಸ ಬದಲಾವಣೆ) ಪ್ರಾರಂಭವಾಗಿದ್ದು, ನಿಮ್ಮ ಹತ್ತಿರದ ಗ್ರಾಮ್ ಓನ್ ಮತ್ತು ಕರ್ನಾಟಕ ಓನ್ ಕೇಂದ್ರಗಳಲ್ಲಿ ಜ.31ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಅನಿಲಕುಮಾರ ಡವಳಗಿ ಅವರು ತಿಳಿಸಿದ್ದಾರೆ.
ಆಹಾರ ಇಲಾಖೆಯ ಸೇವೆಯನ್ನು ನೀಡಲು ಅರ್ಜಿದಾರರಿಂದ (ನಾಗರಿಕರಿಂದ) 25 ರು. ಪಡಿತರ ಚೀಟಿ ತಿದ್ದುಪಡಿ ಅರ್ಜಿ ಸಲ್ಲಿಕೆಗೆ ಸೇವಾ ಶುಲ್ಕವನ್ನು ಸರ್ಕಾರದಿಂದ ನಿಗದಿಪಡಿಸಲಾಗಿರುತ್ತದೆ. ಸರ್ಕಾರ ನಿಗದಿಪಡಿಸಿದ ಸೇವಾ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿ ನಿರ್ವಹಿಸುತ್ತಿರುವ ಸಿಬ್ಬಂದಿ ಪಡೆದರೆ ಜಿಲ್ಲಾ ಅಥವಾ ತಾಲೂಕು ಆಹಾರ ಇಲಾಖೆ ತಹಸೀಲ್ದಾರರ ಕಚೇರಿಗೆ ಅಥವಾ ಸಹಾಯವಾಣಿ 1967 ಸಂಖ್ಯೆಗೆ ದೂರುಗಳನ್ನು ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.