ಕೊಳ್ಳೇಗಾಲದ ವೀರಶೈವ ಮಹಾಸಭೆಗೆ ತಿಮ್ಮರಾಜಿಪುರ ಪುಟ್ಟಣ್ಣ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

| Published : Jul 09 2024, 12:48 AM IST

ಕೊಳ್ಳೇಗಾಲದ ವೀರಶೈವ ಮಹಾಸಭೆಗೆ ತಿಮ್ಮರಾಜಿಪುರ ಪುಟ್ಟಣ್ಣ ಅಧ್ಯಕ್ಷರಾಗಿ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲ ವೀರಶೈವ ಮಹಾಸಭಾ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ತಿಮ್ಮರಾಜಿಪುರ ಪುಟ್ಟಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪುಟ್ಟಣ್ಣ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಶಿವಮಲ್ಲಪ್ಪ ಘೋಷಿಸಿದರು.

ಗುರುಮಲ್ಲೇಶ್ವರ ಕಾಂಪ್ಲೆಕ್ಸ್‌ನಲ್ಲಿ ಮುಖಂಡರ ಸಮ್ಮುಖದಲ್ಲಿ ಘೋಷಣೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲ ವೀರಶೈವ ಮಹಾಸಭಾ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ತಿಮ್ಮರಾಜಿಪುರ ಪುಟ್ಟಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ಗಮಿತ ವೀರಶೈವ ಮಹಾಸಭೆ ಅಧ್ಯಕ್ಷ ಆಲಹಳ್ಳಿ ಮಹದೇವಪ್ರಸಾದ್, ಚಾಮುಲ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ, ನಿರ್ಗಮಿತ ಕಾರ್ಯದರ್ಶಿ ಉಗನಿಯ ಬಸವರಾಜು, ಮುಖಂಡರಾದ ಬಸಪ್ಪನದೊಡ್ಡಿ ಬಸವರಾಜು, ಮುಳ್ಳೂರು ಇಂದ್ರೇಶ್, ಬೂದಿತಿಟ್ಟು ಗುರುಸ್ವಾಮಿ, ತೋಟದ ಗಿರೀಶ್, ಮಲ್ಲೇಶಪ್ಪ, ಗುಂಡೇಗಾಲ ಬಸಪ್ಪ ಸೇರಿ ಇತರರ ಸಮ್ಮುಖದಲ್ಲಿ ನಡೆದ ಸೋಮವಾರದ ಸಭೆಯಲ್ಲಿ ಪುಟ್ಟಣ್ಣ ಅವರ ಆಯ್ಕೆಗೆ ಹಾಜರಿದ್ದವರು ಒಪ್ಪಿಗೆ ನೀಡಿದರು. ಈ ಹಿನ್ನೆಲೆ ಪುಟ್ಟಣ್ಣ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಶಿವಮಲ್ಲಪ್ಪ ಘೋಷಿಸಿದರು.

ಆಯ್ಕೆ ಪ್ರಕ್ರಿಯೆ ನ್ಯಾಯ ಸಮ್ಮತವಾಗಿದೆ. ಯಾವುದೇ ಲೋಪವಾಗಿಲ್ಲ ಎಂದು ಚುನಾವಣಾಧಿಕಾರಿ ಇದೇ ವೇಳೆ ಹೇಳಿದರು.

ಸಂತಸ ತಂದಿದೆ:

ಅವಿರೋದ ಆಯ್ಕೆ ಸಂತಸ ತಂದಿದೆ. ಸಮಾಜದ ಕೆಲಸ ಮಾಡುವ ನಿಟ್ಟಿನಲ್ಲಿ ನನಗೆ ಬೆಂಬಲ ಸೂಚಿಸಿದ ಎಲ್ಲರನ್ನು ಅಭಿನಂದಿಸುವೆ, ನನ್ನ ಕೈಲಾದ ಮಟ್ಟಿಗೆ ವೀರಶೈವ ಮಹಾಸಭೆ ಸಂಘಟನೆ ಜೊತೆ ಜೊತೆಗೆ ಸಂಕಷ್ಟದಲ್ಲಿರುವವರನ್ನು ಗುರುತಿಸಿ ನನ್ನ ಕೈಲಾದ ಸಹಾಯ ಮಾಡುವ ನಿಟ್ಟಿನಲ್ಲಿ ಮುಂದಾಗುವೆ. ಏನೇ ವಿರೋಧವಿದ್ದರೂ ಸಮಾಜ ನನ್ನ ಪರವಿತ್ತು, ಹಾಗಾಗಿ ನನ್ನ ಆಯ್ಕೆ ಸುಗಮವಾಯಿತು. ಹಿರಿಯನಾದರೂ ನನಗೆ ಹೆಚ್ಚಿನ ಬೆಂಬಲ ವ್ಯಕ್ತವಾಯಿತು. ಹಾಗಾಗಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮುಂದಡಿ ಇಡುವೆ ಎಂದರು.

ಈ ವೇಳೆ ನಗರಸಭೆ ಸದಸ್ಯ ಜಿ.ಪಿ.ಶಿವಕುಮಾರ್, ಅಚ್ಗಾಲ್ ಮಹದೇವಸ್ವಾಮಿ, ಬಸವರಾಜು ಇತತರಿದ್ದರು.

ಆಯ್ಕೆ ಸರಿಯಾದ ರೀತಿಯಲ್ಲಿ, ನ್ಯಾಯಸಮ್ಮತವಾಗಿಯೇ ನಡೆದಿದೆ. ಆರೋಪ ಮಾಡುವವರಿಗೆ ನಮ್ಮ ಚುನಾವಣಾಧಿಕಾರಿಗಳೇ ತಕ್ಕ ಉತ್ತರ ನೀಡಿದ್ದಾರೆ. ಹಿರಿಯರಾದ ಪುಟ್ಟಣ್ಣ ಆಯ್ಕೆ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಮಹದೇವಪ್ರಸಾದ್, ನಿರ್ಗಮಿತ ಅಧ್ಯಕ್ಷ.

ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸರಿಯಾಗಿ ಆಗಿಲ್ಲ, ಆಕಾಂಕ್ಷಿಯಾಗಿದ್ದ ನಾನು ಸೇರಿದಂತೆ ಕೆಲವರನ್ನು ವಿಶ್ವಾಸಕ್ಕೆ ಪಡೆಯದೆ ಕಡೆಗಣಿಸಿದ್ದಾರೆ. ಹಾಗಾಗಿ ನಾವು ಕಾನೂನು ಹೋರಾಟಕ್ಕೆ ಸಜ್ಜಾಗುತ್ತೇವೆ.

ತಿಮ್ಮರಾಜಿಪುರ ರಾಜು, ಅಧ್ಯಕ್ಷ ಸ್ಥಾನದ ಆಕಾಂಕ್ಷಿ.