ಸಾರಾಂಶ
-ವೈದ್ಯರ ದಿನಾಚರಣೆಯಲ್ಲಿ ಡಾ.ಬಸವಕುಮಾರಸ್ವಾಮೀಜಿ ಅಭಿಮತ
-----ಕನ್ನಡಪ್ರಭವಾರ್ತೆ, ಚಿತ್ರದುರ್ಗ
ನಮ್ಮ ಆಲೋಚನೆಗಳು ಎಲ್ಲಿಯವರೆಗೆ ಶುದ್ಧವಾಗಿರುವುದಿಲ್ಲವೂ ಅಲ್ಲಿಯವರೆಗೂ ನಮ್ಮ ಆರೋಗ್ಯವೂ ಶುದ್ಧವಾಗಿ ಇರಲು ಸಾಧ್ಯವಿಲ್ಲ. ನಮ್ಮ ಆಲೋಚನೆಗಳ ಮೇಲೆ ನಮ್ಮ ಆರೋಗ್ಯ ಆವಲಂಭಿತವಾಗಿರುತ್ತದೆ. ಆಲೋಚನೆಗಳು ನಮ್ಮೆಲ್ಲ ಅನಾಹುತಕ್ಕೂ, ಆತಂಕಕ್ಕೂ, ಆಪತ್ತಿಗೂ ಆನಾರೋಗ್ಯಕ್ಕೂ ಮುಖ್ಯವಾದ ಕಾರಣವಾಗಿರುತ್ತದೆ ಎಂದು ಎಸ್ ಜೆಎಂವಿದ್ಯಾ ಪೀಠದ ಆಡಳಿತಾತ್ಮಾಕ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.ನಗರದ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ವೈದ್ಯಕೀಯ ಲೋಕದಲ್ಲಿ ಅಶ್ಚರ್ಯಗಳು ನಡೆಯುತ್ತವೆ. ಅದಕ್ಕಿಂತಲೂ ಆಪರೂಪದ ಆಶ್ಚರ್ಯಗಳು ಅಧಾತ್ಮ ಲೋಕದಲ್ಲಿ ನಡೆಯುತ್ತವೆ. ದೇಶ, ನಾಡು ಸಮಾಜ, ಆರೋಗ್ಯ ಪೂರ್ಣವಾಗಿ ಇರಲು ನಿಮ್ಮ ಶ್ರಮ ಅಧಿಕವಾಗಿದೆ. ವೈದ್ಯರ ಕಷ್ಟಗಳನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಎಷ್ಟೇ ಕಷ್ಟವಿದ್ದರೂ ನಂಬಿ ಬಂದ ರೋಗಿಗೆ ಚಿಕಿತ್ಸೆ ನೀಡುವುದರ ಮೂಲಕ ಆತನ ಆರೈಕೆಯನ್ನು ಮಾಡುತ್ತಾನೆ. ಮೊದಲು ತಾನು ನಂಬಿದ ವೃತ್ತಿಯನ್ನು ಗೌರವಿಸಿ ಅದಕ್ಕೆ ಮನ್ನಣೆ ನೀಡುವುದರ ಮೂಲಕ ರೋಗಿಗಳ ಸೇವೆಯನ್ನು ಮಾಡುತ್ತಾರೆ ಎಂದರು.
ಸಂತ ಮಹಾಂತರ ಆಲೋಚನೆಗಳು ಶುದ್ಧವಾಗಿರುತ್ತವೆ. ಸಂತರು ಯೋಗ, ಧ್ಯಾನ, ಶಿವಯೋಗ, ಪ್ರಾಣಾಯಾಮ, ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ರೂಢಿಸಿಕೊಂಡಿದ್ದರು. ಇವರನ್ನು ಭವ ವೈದ್ಯರು ಎನ್ನಲಾಗುತ್ತಿತ್ತು. 12ನೇ ಶತಮಾನದಲ್ಲಿ ಎಲ್ಲದಕ್ಕೂ ಒಬ್ಬರೇ ವೈದ್ಯರಿದ್ದರು. ಯೋಗದ ಮೂಲಕ ರೋಗವನ್ನು ನಿವಾರಣೆ ಮಾಡುತ್ತಿದ್ದರು. ಇಂದು ಜಾತಿ ಧರ್ಮದಲ್ಲಿ ಸಿಲುಕಿಕೊಂಡು ಬೇರೆ ಬೇರೆಯಾಗಿದ್ದೇವೆ. ಅಹಿಂಸೋ ಪರಮೋಧರ್ಮಃ, ದಯವೇ ಧರ್ಮದ ಮೂಲವಯ್ಯ ಎಂಬುದ ಅರಿಯಬೇಕೆಂದು ಹೇಳಿದರು.ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಪಿ.ಟಿ.ವಿಜಯಕುಮಾರ್, ಕಾರ್ಯದರ್ಶಿ ಕೆ.ಎಂ.ಬಸವರಾಜ್, ಜಿಲ್ಲಾ ಸರ್ಜನ್ ಡಾ. ಎಸ್.ಪಿ.ರವಿಂದ್ರ, ಬಸವೇಶ್ವರ ಆಸ್ಪತ್ರೆಯ ಡಾ.ಸುರೇಶ್ ಭಂಡಾರಿ, ಡಾ.ರಾಜೇಶ್ ಡಾ, ನಾಗೇಂದ್ರಗೌಡ ಭಾಗವಹಿಸಿದ್ದರು. ಸಿದ್ದಗಂಗಮ್ಮ ಹಾಗೂ ಹೇಮಲತ ಪ್ರಾರ್ಥಿಸಿದರೆ, ಡಾ.ಪ್ರಶಾಂತ್ ಸ್ವಾಗತಿಸಿದರು. ಡಾ.ಬಸವಂತಪ್ಪ ವಂದಿಸಿದರು. ರೂಪ ಕಾರ್ಯಕ್ರಮ ನಿರೂಪಿಸಿದರು.
------------ಪೋಟೋ ಕ್ಯಾಪ್ಸನ್
ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ದಿನಾಚರಣೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಪಿ.ಟಿ.ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.------
ಫೋಟೋ- 8 ಸಿಟಿಡಿ 2-