ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಬಡ ಮತ್ತು ಮಧ್ಯಮ ವರ್ಗದವರ ಮಕ್ಕಳ ಬಾಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸಮರ್ಥನಂ ಸಂಸ್ಥೆಯಿಂದ ಟಿಂಕರಿಂಗ್ ಲ್ಯಾಬ್ ವ್ಯವಸ್ಥೆ ಮಾಡಿ ಕೊಡಲಾಗಿದೆ ಎಂದು ಸಮರ್ಥನಂ ಸಂಸ್ಥೆ ಮುಖ್ಯಸ್ಥ ಮಹಾಂತೇಶ ಕಿವಡಸಣ್ಣವರ ಹೇಳಿದರು.ಪಟ್ಟಣದ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ (ಎಂ.ಜೆ.ಹೈಸ್ಕೂಲ್) ದಲ್ಲಿ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಕಲಚೇತನರಿಗಾಗಿ ಕ್ರೀಡೆ ಮತ್ತು ಅವರಿಗೆ ಉದ್ಯೋಗ ಒದಗಿಸುತ್ತ ಕಳೆದ 27 ವರ್ಷಗಳಿಂದ ಸೇವೆ ಮಾಡಲಾಗುತ್ತಿದೆ. ಸಂಸ್ಥೆ ಲಾಭರಹಿತ ಉದ್ದೇಶ ಹೊಂದಿದೆ. ಇದೀಗ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಆರಂಭಿಸಿದ್ದು, ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನದ ಅರಿವು ಮೂಡಿಸಲು ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ಲ್ಯಾಬ್ ಒದಗಿಸುತ್ತಿದೆ. 113 ವರ್ಷದ ಈ ಭಾಗದ ಹೆಮ್ಮೆಯ ಶಾಲೆಗೆ ಕೊಡುಗೆ ನೀಡಿದ್ದಕ್ಕೆ ಸಂಸ್ಥೆ ಹೆಮ್ಮೆ ಪಡುತ್ತದೆ ಎಂದರು.
ಬೆಂಗಳೂರಿನ ಯುನೈಟೆಡ್ ವೇ ಕಾರ್ಯಕ್ರಮ ಮುಖ್ಯಸ್ಥ ಮದಿ ಆಳಗನ್ ಮಾತನಾಡಿ, ಶಾಲೆ ನೋಡಿ ಖುಷಿಯಾಯಿತು. ಬರುವ ದಿನಗಳಲ್ಲಿ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ಮತ್ತು ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆಗೆ ಸಹಕಾರ ನೀಡುವೆ. ಸಮರ್ಥನಂ ಸಂಸ್ಥೆ ಜಿಲ್ಲೆಯಲ್ಲಿ 3 ಶಾಲೆಗಳಿಗೆ ಲ್ಯಾಬ್ ಒದಗಿಸಿದೆ ಎಂದು ಮಾಹಿತಿ ನೀಡಿದರು.ವಿಜಯ ಸೊಸಿಯಲ್ ಕ್ಲಬ್ ಅಧ್ಯಕ್ಷ, ಹಿರಿಯ ನ್ಯಾಯವಾದಿ ಬಿ.ಎಸ್.ಕಿವಡಸಣ್ಣವರ ಅವರು, ಶಾಲೆಯಲ್ಲಿನ ಪ್ರಗತಿ ನೋಡಿ ಅಭಿಮಾನ ವ್ಯಕ್ತಪಡಿಸಿದರು.
ಮುಖ್ಯಾಧ್ಯಾಪಕ ಎಂ.ಸಿ.ಹಂಗರಕಿ ಮಾತನಾಡಿ, ಶಾಲೆ ಉನ್ನತೀಕರಣದತ್ತ ಸಾಗಿದ್ದು, ಮಕ್ಕಳ ಭವಿಷ್ಯಕ್ಕೆ ₹10 ಲಕ್ಷ ಮೌಲ್ಯದ ಲ್ಯಾಬ್ ನೀಡಿದ್ದಕ್ಕೆ ಸಮರ್ಥನಂ ಸಂಸ್ಥೆಗೆ ಕೃತಜ್ಞತೆ ಅರ್ಪಿಸಿದರು. ಮಿನಿ ರೊಬೋಟ್ ತಯಾರಿಕೆ ಸೇರಿದಂತೆ ಇತರ ವಿಜ್ಞಾನ ತಂತ್ರಜ್ಞಾನ ಲಾಭ ಪಡೆಯಲು ಟಿಂಕರಿಂಗ್ ಲ್ಯಾಬ್ ಸದುಪಯೋಗವಾಗಲಿದೆ ಎಂದರು.ಶಾಲೆ ಹಳೆ ವಿದ್ಯಾರ್ಥಿನಿ, ಉದ್ಯಮಿ ಮಂಜುಳಾ ಕಿವಡಸಣ್ಣವರ, ಟ್ರಸ್ಟಿಗಳಾದ ಉದಯಕುಮಾರ ಬಾಗೂರ, ಸಮರ್ಥನಂದ ಶಿಕ್ಷಣ ವಿಭಾಗದ ಮುಖ್ಯಸ್ಥ ಗುರುರಾಘವೇಂದ್ರ, ಪದಾಧಿಕಾರಿಗಳಾದ ದೀಪಕ ಸಿಂಧೆ, ಅರುಣಕುಮಾರ, ಕೃಷ್ಣಾ, ಟಿಂಕರಿಂಗ್ ಲ್ಯಾಬ್ ಕಾರ್ಯಕ್ರಮ ಮುಖ್ಯಸ್ಥ ಲೋಕೇಶಕುಮಾರ ಆಗಮಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಎಸ್.ಬಳಿಗಾರ, ಕೆ.ಎಂ.ಸಂಗೊಳ್ಳಿ, ಸುಲೋಚನಾ ಹೊಸಮನಿ, ಶಿಕ್ಷಕರಾದ ಬಾಳೇಶ್ ಬೋರಗಲ್, ಗಂಗಮ್ಮ ತುರಮರಿ, ಈಶ್ವರ ಮದನಭಾವಿ, ಐ.ಎಂ.ದಿವಾಣದ, ರುಬೀನಾ ಮುಲ್ಲಾನವರ, ಇರ್ಫಾ ಮುಲ್ಲಾ ಹಾಗೂ ಇತರ ಶಿಕ್ಷಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ಪಾಟೀಲ ಸ್ವಾಗತಿಸಿದರು. ಗೀತಾ ಸೊಲಬಣ್ಣವರ ನಿರೂಪಿಸಿದರು. ವಿಜಯಾ ಹಸರಂಗಿ ವಂದಿಸಿದರು.ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಕಲಚೇತನರಿಗಾಗಿ ಕ್ರೀಡೆ ಮತ್ತು ಅವರಿಗೆ ಉದ್ಯೋಗ ಒದಗಿಸುತ್ತ ಕಳೆದ 27 ವರ್ಷಗಳಿಂದ ಸೇವೆ ಮಾಡಲಾಗುತ್ತಿದೆ. ಸಂಸ್ಥೆ ಲಾಭರಹಿತ ಉದ್ದೇಶ ಹೊಂದಿದೆ. ಇದೀಗ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಆರಂಭಿಸಿದ್ದು, ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನದ ಅರಿವು ಮೂಡಿಸಲು ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ಲ್ಯಾಬ್ ಒದಗಿಸುತ್ತಿದೆ. 113 ವರ್ಷದ ಈ ಭಾಗದ ಹೆಮ್ಮೆಯ ಶಾಲೆಗೆ ಕೊಡುಗೆ ನೀಡಿದ್ದಕ್ಕೆ ಸಂಸ್ಥೆ ಹೆಮ್ಮೆ ಪಡುತ್ತದೆ.
-ಮಹಾಂತೇಶ ಕಿವಡಸಣ್ಣವರ, ಸಮರ್ಥನಂ ಸಂಸ್ಥೆ ಮುಖ್ಯಸ್ಥರು.ಶಾಲೆ ನೋಡಿ ಖುಷಿಯಾಯಿತು. ಬರುವ ದಿನಗಳಲ್ಲಿ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ಮತ್ತು ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆಗೆ ಸಹಕಾರ ನೀಡುವೆ. ಸಮರ್ಥನಂ ಸಂಸ್ಥೆ ಜಿಲ್ಲೆಯಲ್ಲಿ 3 ಶಾಲೆಗಳಿಗೆ ಲ್ಯಾಬ್ ಒದಗಿಸಿದೆ.-ಮದಿ ಆಳಗನ್,
ಬೆಂಗಳೂರಿನ ಯುನೈಟೆಡ್ ವೇ ಕಾರ್ಯಕ್ರಮ ಮುಖ್ಯಸ್ಥರು.