ಪರ್ಮಿಟ್‌ ಇಲ್ಲದೆ ಸಂಚರಿಸಿದ ಟಿಪ್ಪರ್‌ ವಶ : ಆನ್‌ಲೈನ್‌ ನಲ್ಲೇ ೧.೭೪ ಲಕ್ಷ ದಂಡ

| Published : Jan 15 2024, 01:49 AM IST

ಪರ್ಮಿಟ್‌ ಇಲ್ಲದೆ ಸಂಚರಿಸಿದ ಟಿಪ್ಪರ್‌ ವಶ : ಆನ್‌ಲೈನ್‌ ನಲ್ಲೇ ೧.೭೪ ಲಕ್ಷ ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ಪರ್ಮಿಟ್‌ ಇಲ್ಲದೆ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಮೂರು ಟಿಪ್ಪರ್‌ಗಳ ಮೇಲೆ ಭಾನುವಾರ ಬೆಳಗ್ಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ದಾಳಿ ನಡೆಸಿದ್ದಾರೆ. ರಾಜಪ್ಪ, ಪ್ರಭಾಕರ್‌, ಸೆಲ್ವಕುಮಾರ್‌ಗೆ ಸೇರಿದ ಮೂರು ಟಿಪ್ಪರ್‌ಗಳನ್ನು ಭಾನುವಾರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ಹಿರೀಕಾಟಿ ಬಳಿ ತಡೆದು ತಪಾಸಣೆ ನಡೆಸಿದಾಗ ಪರ್ಮಿಟ್‌ ವಂಚಿಸಿರುವುದು ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪರ್ಮಿಟ್‌ ಇಲ್ಲದೆ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಮೂರು ಟಿಪ್ಪರ್‌ಗಳ ಮೇಲೆ ಭಾನುವಾರ ಬೆಳಗ್ಗೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ದಾಳಿ ನಡೆಸಿದ್ದಾರೆ. ರಾಜಪ್ಪ, ಪ್ರಭಾಕರ್‌, ಸೆಲ್ವಕುಮಾರ್‌ಗೆ ಸೇರಿದ ಮೂರು ಟಿಪ್ಪರ್‌ಗಳನ್ನು ಭಾನುವಾರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ಹಿರೀಕಾಟಿ ಬಳಿ ತಡೆದು ತಪಾಸಣೆ ನಡೆಸಿದಾಗ ಪರ್ಮಿಟ್‌ ವಂಚಿಸಿರುವುದು ಪತ್ತೆಯಾಗಿದೆ. ರಾಜಪ್ಪಗೆ ಸೇರಿದ ಟಿಪ್ಪರ್‌ಗೆ ೩೫೭೦೦ ಸಾವಿರ, ಪ್ರಭಾಕರ್‌, ಸೆಲ್ವಕುಮಾರ್‌ ಸೇರಿದ ಟಿಪ್ಪರ್‌ಗೆ ತಲಾ ೬೯೨೫೦ ಸಾವಿರ ದಂಡ ವಿಧಿಸಿದ್ದಾರೆ. ದಂಡವನ್ನು ಆನ್‌ಲೈನ್‌ನಲ್ಲಿ ಕಟ್ಟಿದ ಬಳಿಕ ಟಿಪ್ಪರ್‌ ಬಿಡಲಾಗಿದೆ ಎಂದು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ಹಿರೀಕಾಟಿ ಗೇಟ್‌ ಬಳಿ ಇರುವುದನ್ನು ಖಚಿತ ಪಡಿಸಿಕೊಂಡ ಕೆಲ ಕ್ರಷರ್‌ನ ಮಾಲೀಕರು ಕ್ರಷರ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ಪದ್ಮಜ ಯಾವ ಕಡೆ ಹೋದರು ಎಂದು ಮೊಬೈಲ್‌ ಮೂಲಕ ಮಾಹಿತಿ ಹಂಚಿಕೊಳ್ಳುವುದನ್ನು ಪ್ರತ್ಯೇಕ್ಷ ದರ್ಶಿಗಳು ತಿಳಿಸಿದ್ದಾರೆ. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪದ್ಮಜ ಹೆದ್ದಾರಿಯಲ್ಲಿ ಇರುವ ತನಕ ಟಿಪ್ಪರ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಪದ್ಮಜ ನಂಜನಗೂಡಿನತ್ತ ತೆರಳಿದರು ಎಂದಾಕ್ಷಣ ಕ್ವಾರಿ ಹಾಗೂ ಕ್ರಷರ್‌ನಲ್ಲಿದ್ದ ಟಿಪ್ಪರ್‌ ಗಳ ಸಂಚಾರ ಶುರುವಾಯಿತು ಎಂದು ಹಿರೀಕಾಟಿ ಗ್ರಾಮದ ಯುವಕರೊಬ್ಬರು ಹೇಳಿದ್ದಾರೆ.