ಸಾರಾಂಶ
-ಪೂರ್ವ ಸಿದ್ದತಾ ಸಭೆಯಲ್ಲಿ ಟಿಪ್ಪು ಖಾಸಿ ಆಲಿ ಹೇಳಿಕೆ। ಅನುಮತಿ ಕೊಟ್ಟರೆ ಮಾತ್ರ ಮೆರವಣಿಗೆ
-----ಕನ್ನಡಪ್ರಭವಾರ್ತೆ, ಚಿತ್ರದುರ್ಗ ಹಜರತ್ ಟಿಪ್ಪು ಸುಲ್ತಾನ್‍ರವರ 274 ನೇ ಜಯಂತಿ ಹಾಗೂ 69 ನೇ ಕನ್ನಡ ರಾಜ್ಯೋತ್ಸವವನ್ನು ನ.20 ರಂದು ತರಾಸು ರಂಗಮಂದಿರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದೆಂದು ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಹೇಳಿದರು. ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವುದರಿಂದ ನ.11 ರಂದು ಆಚರಿಸಬೇಕಿದ್ದ ಟಿಪ್ಪು ಜಯಂತಿ ಮತ್ತು ಕನ್ನಡ ರಾಜ್ಯೋತ್ಸವವನ್ನು ನ.20 ಕ್ಕೆ ಆಚರಿಸುವ ಕುರಿತು ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಟಿಪ್ಪುಸುಲ್ತಾನ್ ಕೇವಲ ಮುಸ್ಲಿಂರಿಗಷ್ಟೆ ಅಲ್ಲ. ಎಲ್ಲಾ ಜಾತಿ ಧರ್ಮದವರಿಗೂ ಬೇಕಾದವರು. 850 ಕ್ಕೂ ಹೆಚ್ಚು ದೇವಾಲಯಗಳನ್ನು ಜೀರ್ಣೊದ್ದಾರಗೊಳಿಸಿರುವ ಟಿಪ್ಪು ಶೃಂಗೇರಿ ಶಾರದಾಂಬೆಯ ಪರಮ ಭಕ್ತ. ಗಾಂಧಿ ಸರ್ಕಲ್‍ನಿಂದ ಮೆರವಣಿಗೆ ಮೂಲಕ ರಂಗಮಂದಿರಕ್ಕೆ ತೆರಳಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಅನುಮತಿ ಕೊಟ್ಟರೆ ಸರಿ. ಇಲ್ಲವಾದರೆ ನೇರವಾಗಿ ರಂಗಮಂದಿರದಲ್ಲಿ ಟಿಪ್ಪುಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸೋಣ ಎಂದರು. ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಎಂಸಿಒ ಬಾಬು ಮಾತನಾಡಿ, ಟಿಪ್ಪು ಜಯಂತಿ ಆಚರಿಸಿ ಅವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಎಲ್ಲರಿಗೂ ತಲುಪಿಸೋಣ. ಕೆಲವು ಕೋಮುವಾದಿಗಳು ಟಿಪ್ಪುಸುಲ್ತಾನ್‍ರವರನ್ನು ಏಕವಚನದಲ್ಲಿ ನಿಂದಿಸುವುದು ನಮ್ಮ ಮನಸ್ಸಿಗೆ ನೋವಾಗುತ್ತದೆ. ಹಾಗಾಗಿ ಟಿಪ್ಪುಜಯಂತಿಯಲ್ಲಿ ಮೆರವಣಿಗೆ ಬೇಡವೆಂದು ಸಲಹೆ ನೀಡಿದರು. ದಲಿತ ಮುಖಂಡ ಮಹಲಿಂಗಪ್ಪ ಕುಂಚಿಗನಾಳ್ ಮಾತನಾಡಿ, ಟಿಪ್ಪುಸುಲ್ತಾನ್‍ರವರನ್ನು ಕೇವಲ ಮುಸ್ಲಿಂ ಜನಾಂಗಕ್ಕೆ ಮೀಸಲಿಡುವುದು ಸರಿಯಲ್ಲ ಎಂದರು.
ಕೆ.ರಾಜಣ್ಣ ಮಾತನಾಡಿ, ಅನೇಕ ದೇವಾಲಯಗಳು ಟಿಪ್ಪುಸುಲ್ತಾನ್ ಕಾಲದಲ್ಲಿ ಅಭಿವೃದ್ದಿಯಾಗಿದೆ. ಮೈಸೂರು ಸುತ್ತಮುತ್ತಲಿನಲ್ಲಿ ದಲಿತರಿಗೆ ಮೊದಲು ಜಮೀನು ನೀಡಿದ್ದು, ಟಿಪ್ಪುಸುಲ್ತಾನ್ ಎನ್ನುವುದನ್ನು ಯಾರು ಮರೆಯಬಾರದು ಎಂದರು.ಎ.ಸಾಧಿಕ್‍ವುಲ್ಲಾ ಮಾತನಾಡಿ, ಟಿಪ್ಪು ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣ. ಇದಕ್ಕೆ ನಮ್ಮ ಬೆಂಬಲವಿರುತ್ತದೆ ಎಂದರು.
ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ, ದಲಿತರು, ಮುಸಲ್ಮಾನರು ಒಂದಾಗಿ ಟಿಪ್ಪುಸುಲ್ತಾನ್ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಜಾತಿ, ಧರ್ಮಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವವರು ಸಮಾಜದಲ್ಲಿ ಅಶಾಂತಿ ಮೂಡಿಸಲು ಹೊರಟಿದ್ದಾರೆ. ಕಳೆದ ಹದಿನೇಳು ವರ್ಷಗಳಿಂದಲೂ ಚಿತ್ರದುರ್ಗದಲ್ಲಿ ಟಿಪ್ಪುಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಎಲ್ಲಿಯೂ ಗಲಾಟೆಗೆ ಅವಕಾಶವಿಲ್ಲ ಎಂದು ಹೇಳಿದರು.ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಹೆಚ್.ಶಬ್ಬೀರ್ ಭಾಷ, ಎ.ಜಾಕೀರ್ ಹುಸೇನ್, ಅಕ್ಬರ್, ಮೆಹಬೂಬ್, ಹನೀಫ್, ಆಫೀಜ್ ಫೈಲ್ವಾನ್, ಕಣಿವೆ ಮಾರಮ್ಮ ಯುವಕ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ,ಸೈಯದ್ ಇಸ್ಮಾಯಿಲ್, ಮನ್ಸೂರ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.---------------ಪೋಟೋ ಕ್ಯಾಪ್ಸನ್ ಟಿಪ್ಪುಸುಲ್ತಾನ್ ಜಯಂತಿ ಆಚರಣೆ ಸಂಬಂದ ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಟಿಪ್ಪುಖಾಸಿಂ ಆಲಿ ಮಾತನಾಡಿದರು. ----------ಪೋಟೋ ಪೈಲ್ ನೇಮ್- 11 ಸಿಟಿಡಿ4
;Resize=(128,128))
;Resize=(128,128))