ಟಿಪ್ಪು ಜಯತಿ ಅದ್ಧೂರಿ ಆಚರಣೆ

| Published : Nov 11 2024, 11:45 PM IST

ಸಾರಾಂಶ

ಟಿಪ್ಪು ಕೊಡುಗೆಗಳು ಸ್ಮರಿಸಿರುವುದು ದೇಶಕ್ಕೆ ಹಾಗೂ ರಾಜ್ಯಕ್ಕೆ ಅವಶ್ಯಕತೆ ಇದೆ ಎಂದು ಕಾಂಗ್ರೆಸ್ ಮುಖಂಡ ಕೆ. ನಯಾಜ್ ಅಹ್ಮದ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಟಿಪ್ಪು ಕೊಡುಗೆಗಳು ಸ್ಮರಿಸಿರುವುದು ದೇಶಕ್ಕೆ ಹಾಗೂ ರಾಜ್ಯಕ್ಕೆ ಅವಶ್ಯಕತೆ ಇದೆ ಎಂದು ಕಾಂಗ್ರೆಸ್ ಮುಖಂಡ ಕೆ. ನಯಾಜ್ ಅಹ್ಮದ್ ತಿಳಿಸಿದರು.

ನಗರದ ಗುಂಚಿ ಚೌಕದಲ್ಲಿ ಎನ್‌ಸಿಸಿ ಕ್ರಿಕೆಟ್ ಕ್ಲಬ್, ಆಲಾ ಮಸೀದಿ ಅಧ್ಯಕ್ಷರು ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಅಕಾಡೆಮಿ ವತಿಯಿಂದ ಮೌಲಾನ ಅಜಾದ್ ಮಾಡೆಲ್ ಸ್ಕೂಲ್‌ನಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಮಾತನಾಡಿದರು.

ಮರಾಠ, ಪೇಶ್ವೆ ರಾಜ ಮನೆತನಗಳು ರಾಜ್ಯದ ಮೇಲೆ ದಾಳಿ ಮಾಡಿ ಅನೇಕ ದೇವಾಲಯಗಳ ದ್ವಂಸ ಮಾಡಿದ್ದನ್ನು ಕಂಡು ಖುದ್ದಾಗಿ ಟಿಪ್ಪು ರಾಜ್ಯ ಪರ್ಯಟನೆ ಮಾಡಿ ತನ್ನ ಆಡಳಿತದಲ್ಲಿ ಆಗಿರುವ ನಷ್ಟದ ಬಗ್ಗೆ ಕ್ಷಮೆ ಕೇಳಿ ಆಗಿರುವ ನಷ್ಟಕ್ಕೆ ಅಂದಿನ ಕಾಲದಲ್ಲಿ ಪುನರ್ ನಿರ‍್ಮಾಣಕ್ಕಾಗಿ ಸಹಾಯಧನ ವ್ಯವಸ್ಥೆ ಮಾಡಿದ್ದರು. ಅದು ಇತಿಹಾಸದಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿಯೂ ಇಂದಿಗೂ ಇದೆ. ಆದರೂ ಟಿಪ್ಪು ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸಿ ವಿರೋಧ ಮಾಡುತ್ತಿರುವುದು ಬಹಳ ನೋವಿನ ವಿಷಯ ಎಂದು ತಿಳಿಸಿದರು.

ವಕೀಲ ಯೋಗೀಶ್ ಮಾತನಾಡಿ, ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಅಧಿಕವಾಗಿದ್ದು, ಟಿಪ್ಪು ಜಯಂತಿ ಜಿಲ್ಲಾ ಸಹಯೋಗದೊಂದಿಗೆ ಮಾಡಬೇಕಾಗಿತ್ತು. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಸಮುದಾಯಗಳು ಸೇರಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಅದ್ಧೂರಿಯಾಗಿ ಆಚರಣೆ ಮಾಡಲು ಸಿದ್ಧರಾಗಬೇಕೆಂದು ತಿಳಿಸಿದರು.

ಹಿರಿಯ ಪತ್ರಕರ್ತ ವಾಜಿದ್ ಖಾನ್ ಮಾತನಾಡಿ, ಟಿಪ್ಪು ತಾಯಿ ಟಿಪ್ಪು ಗರ್ಭದಲ್ಲಿದ್ದಾಗ ನವಮಾಸಗಳು ಜಿಲ್ಲೆಯ ಶಿರಾ ತಾಲೂಕಿನಲ್ಲೇ ಕಳೆದರು. ನಂತರ ಏಳು ದಿನಗಳ ಪ್ರವಾಸ ಕೈಗೊಂಡಾಗ ಟಿಪ್ಪು ಜನನವಾಯಿತು, ಪ್ರವಾಸ ಕೈಗೊಳ್ಳದಿದ್ದರೆ ಟಿಪ್ಪು ಜನನ ಶಿರಾ ತಾಲೂಕಿನಲ್ಲಿ ಆಗುತ್ತಿತ್ತು ಎಂದರು. ಜಿಲ್ಲೆಗೆ ವಿಶ್ವದಲ್ಲೇ ಪ್ರಸಿದ್ಧಿಯನ್ನು ಪಡೆಯುವ ಸಂಭವ ಇರುತ್ತಿತ್ತು ಎಂದು ತಿಳಿಸಿದರು.

ಡಾ.ಎ ಪಿ ಜೆ ಅಬ್ದುಲ್ ಕಲಾಂ ಫೌಂಡೇಶನ್ ಮತ್ತು ಅಕಾಡೆಮಿಯ ಅಧ್ಯಕ್ಷ‌ ನಿಸ್ಸಾರ್ ಅಹಮದ್ ಮಾತನಾಡಿ, ಟಿಪ್ಪು ಜೀವನದ ಇತಿಹಾಸವನ್ನು ತಿಳಿದು, ಓದಿಕೊಂಡು, ನಾವೆಲ್ಲರೂ ಟಿಪ್ಪುರಂತೆ ನಾಡಿಗಾಗಿ ಹಾಗೂ ಈ ದೇಶಕ್ಕಾಗಿ ಹುಲಿಯಾಗಿ ಬದುಕಿ ಎಲ್ಲರಿಗೂ ಮಾದರಿಯಾಗಬೇಕೆಂದು ತಿಳಿಸಿದರು.

ಮುಖಂಡ ಇಕ್ಬಾಲ್ ಅಹಮದ್, ಅಕ್ರಮ್ ಉಲ್ಲಾ ಖಾನ್, ಸೈಯದ್ ನಯಾಜ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಫಯಾಜ್ ಅಹ್ಮದ್, ರಾಜ್ಯ ವಕ್ಫ್ ಮಹಿಳಾ ಮಂಡಳಿ ಸದಸ್ಯೆ ಡಾ. ಫರ‍್ಹಾನ ಬೇಗಂ,ಕರಾಟೆ ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.