ತಿರುಪತಿ ಲಡ್ಡು; ಜಗನಮೋಹನ ರೆಡ್ಡಿಗೆ ತಟ್ಟಲಿದೆ ಶಾಪ

| Published : Sep 27 2024, 01:21 AM IST

ಸಾರಾಂಶ

ದೇವರ ಪ್ರಸಾದ ಪವಿತ್ರವಾದುದ್ದು. ನಂಬಿಕೆ, ವಿಶ್ವಾಸ ಭಾವನೆಯಿಂದ ಕೂಡಿರುತ್ತದೆ. ಇಂಥ ವಸ್ತುವಿನಲ್ಲಿ ಪ್ರಾಣಿ ಕೊಬ್ಬು ಬೆರೆಸಿದ್ದಾರೆ. ಮುಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆ ರೀತಿ ಆಗದಂತೆ ನೋಡಿಕೊಳ್ಳಬೇಕು.

ಹುಬ್ಬಳ್ಳಿ:

ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬೆರೆಸಿರುವುದು ಅಕ್ಷಮ್ಯ ಅಪರಾಧ. ಇದರ ಶಾಪ ಈಗಾಗಲೇ ಜನಮೋಹನ ರೆಡ್ಡಿಗೆ ತಟ್ಟಿದೆ. ಹೀಗಾಗಿ ಅಧಿಕಾರ ಕಳೆದುಕೊಂಡರು. ಮುಂದೆಯೂ ಶಾಪ ತಟ್ಟಲಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಜಗನಮೋಹನ ರೆಡ್ಡಿ ಅವರ ಅಪ್ಪ ತಿರುಪತಿಯ 7 ಗುಡ್ಡಗಳ ಪೈಕಿ ಐದು ಗುಡ್ಡ ಹಾಗೂ ಲಡ್ಡು ಮಾಡುವುದನ್ನು ಕ್ರಿಶ್ಚಿಯನರಿಗೆ ನೀಡಿದ್ದರು. ಅವರ ಹೆಣ ಕೂಡ ಸಿಗಲಿಲ್ಲ. ಅಷ್ಟೊಂದು ಭೀಕರವಾಗಿತ್ತು ಅವರ ಸಾವು. ಲಡ್ಡುವಿನಲ್ಲಿ ಕೊಬ್ಬು ಬೆರೆಸಿದ್ದಕ್ಕೆ ಜಗನಮೋಹನ ರೆಡ್ಡಿಗೂ ಶಾಪ ತಟ್ಟಲಿದೆ ಎಂದರು.

ದೇವರ ಪ್ರಸಾದ ಪವಿತ್ರವಾದುದ್ದು. ನಂಬಿಕೆ, ವಿಶ್ವಾಸ ಭಾವನೆಯಿಂದ ಕೂಡಿರುತ್ತದೆ. ಇಂಥ ವಸ್ತುವಿನಲ್ಲಿ ಪ್ರಾಣಿ ಕೊಬ್ಬು ಬೆರೆಸಿದ್ದಾರೆ. ಮುಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಮುಡಾ ಹಗರಣದ ಬಗ್ಗೆ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಮುಖ್ಯಮಂತ್ರಿಗಳು ನ್ಯಾಯಾಲಯದ ಆದೇಶಕ್ಕೆ ತಲೆಬಾಗಬೇಕು. ಕೂಡಲೇ ರಾಜೀನಾಮೆ ನೀಡಲು ನಿರ್ಧಾರ ಪ್ರಕಟಿಸಬೇಕು ಎಂದರು.