ಸಾರಾಂಶ
ಲಕ್ಷ್ಮೇಶ್ವರ: ಸೂರಣಗಿಯಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಮೂವರು ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಸಾಂತ್ವನ ಹೇಳಿ ಎರಡು ಲಕ್ಷ ರು. ಪರಿಹಾರ ಚೆಕ್ ವಿತರಿಸಿದರು. ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಟ ಯಶ್ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಅವರ ಕಟೌಟ್ ಅಳವಡಿಸುವಾಗ ವಿದ್ಯುತ್ ತಗುಲಿ ಮೂವರು ಯುವಕರು ಮೃತಪಟ್ಟಿದ್ದರು. ಸರಕಾರ ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಶುಕ್ರವಾರ ಪರಿಹಾರದ ಚೆಕ್‌ಗಳನ್ನು ವಿತರಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಸಚಿವರು ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳಿಗೆ ರು. 50 ಸಾವಿರ ಪರಿಹಾರ ಚೆಕ್ ವಿತರಿಸಿದರು.ಪಾಲಕರೊಂದಿಗೆ ಮಾತನಾಡಿ ''''''''ನಿಮಗೆ ಏನು ಕೊಟ್ಟರೂ ಆದ ನಷ್ಟವನ್ನು ತುಂಬಿಕೊಡಲು ಸಾಧ್ಯವಿಲ್ಲ. ಆದಷ್ಟು ಧೈರ್ಯ ತಂದುಕೊಂಡು ಮುಂದಿನ ಜೀವನ ನಡೆಸಬೇಕು. ಸರಕಾರ ಪರಿಹಾರವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರಕಾರ ನಿಮ್ಮೊಂದಿಗೆ ಇರುತ್ತದೆ ಎಂದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''''''''ಯುವಕರು ತಮ್ಮ ನೆಚ್ಚಿನ ನಟರು, ನಾಯಕರ ಜನ್ಮ ದಿನ ಆಚರಿಸುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಭಾವಾವೇಶಕ್ಕೆ ಒಳಗಾಗಬಾರದು. ಬ್ಯಾನರ್, ಕಟೌಟ್, ಪ್ಲೆಕ್ಸ್ ಕಟ್ಟುವ ಸಮಯದಲ್ಲಿ ಸೂಕ್ತ ಎಚ್ಚರಿಕೆ ವಹಿಸಬೇಕು.
ಮೃತ ಯುವಕರ ಕುಟುಂಬಗಳು ಕಡುಬಡತನದಲ್ಲಿದ್ದು, ಸರಕಾರ ಕೊಟ್ಟಿರುವ ಪರಿಹಾರ ಸಾಲದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯನವರೊಂದಿಗೆ ಮಾತನಾಡಿ, ಮೃತರ ಕುಟುಂಬಕ್ಕೆ ಇನ್ನೂ ಹೆಚ್ಚಿನ ಸಹಾಯ ಮಾಡಲು ಮನವಿ ಮಾಡುತ್ತೇನೆ ಎಂದರು.ಯುವಕರ ಪಾಲಕರು ಜಿಲ್ಲಾಧಿಕಾರಿಗಳ ಮೂಲಕ ಅರ್ಜಿಸಿದಲ್ಲಿ ಅವರಿಗೆ ಸರಕಾರದ ವತಿಯಿಂದ ಜಮೀನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಸುಜಾತಾ ದೊಡ್ಡಮನಿ, ಜಯಕ್ಕ ಕಳ್ಳಿ, ಆನಂದ ಗಡ್ಡದೇವರಮಠ, ಚೆನ್ನಪ್ಪ ಜಗಲಿ, ಎಸ್.ಪಿ. ಪಾಟೀಲ, ಜಿ.ಆರ್. ಕೊಪ್ಪದ, ಫಕ್ಕೀರೇಶ ಮ್ಯಾಟಣ್ಣವರ, ಅಶೋಕ ಮಂದಾಲಿ, ಕೋಟೆಪ್ಪ ವರ್ದಿ, ವಿಜಯ ಹಳ್ಳಿ, ಶಂಕ್ರಣ್ಣ ಶೀರನಹಳ್ಳಿ, ಪ್ರಕಾಶ ಕಳ್ಳಿಹಾಳ, ವಿರೂಪಾಕ್ಷಿ ನಂದೆಣ್ಣವರ, ನಾಗರಾಜ ಮಡಿವಾಳರ, ವಿ.ಜಿ. ಪಡಿಗೇರಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಎಸ್‌ಪಿ ಬಿ.ಎಸ್. ನೇಮಗೌಡ, ತಹಸೀಲ್ದಾರ್, ವಾಸುದೇವಸ್ವಾಮಿ, ಇಒ ಕೃಷ್ಣಪ್ಪ ಧರ್ಮರ ಸೇರಿದಂತೆ ಮತ್ತಿತರರು ಇದ್ದರು.