ರಮೇಶ್ ಕುಮಾರ್ ಅವರ ಸುಮಾರು 100 ಎಕರೆ ಭೂಮಿ ಅರಣ್ಯ ಒತ್ತುವರಿ ತೆರವು ಮಾಡುವ ಸಮಯ ಬಂದಿದೆ. ಇದರಿಂದ ತಪ್ಪಿಸಿಕೊಳ್ಳಲು ಇಂದು ಸಾಮಾನ್ಯ ರೈತರ ಜಮೀನುಗಳನ್ನು ಪಣಕ್ಕೀಟ್ಟು ಹೋರಾಟ ಮಾಡುವುದಾಗಿ ಹೇಳುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕೋಲಾರಮಾಜಿ ಸ್ಪೀಕರ್ ರಮೇಶ್ ಕುಮಾರ್‌ರಿಗೆ ಅರಣ್ಯ ಇಲಾಖೆ ನೋಟೀಸ್ ನೀಡಲು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಾರಣರಾದರೆ, ಶ್ರೀನಿವಾಸಪುರ ತಾಲೂಕಿನಲ್ಲಿ ೪ ಸಾವಿರ ಎಕರೆಗೆ ನೋಟೀಸ್ ಬರಲು ನೀವೆ ಕಾರಣವೆಂದು ವೆಂಕಟಶಿವಾರೆಡ್ಡಿ ಟಾಂಗ್ ನೀಡಿದರು.ಶ್ರೀನಿವಾಸಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಭೂಮಿ ಒತ್ತುವರಿ ವಿಚಾರದಲ್ಲಿ ವಿನಾಕಾರಣ ಕುಮಾರಸ್ವಾಮಿ ಅವರ ಹೆಸರನ್ನು ತರುವುದು ಎಷ್ಟರ ಮಟ್ಟಿಗೆ ಸರಿಯೆಂದು ಪ್ರಶ್ನಿಸಿದರು.ರಮೇಶ್ ಕುಮಾರ್ ಅವರ ಸುಮಾರು 100 ಎಕರೆ ಭೂಮಿ ಅರಣ್ಯ ಒತ್ತುವರಿ ತೆರವು ಮಾಡುವ ಸಮಯ ಬಂದಿದೆ. ಇದರಿಂದ ತಪ್ಪಿಸಿಕೊಳ್ಳಲು ಇಂದು ಸಾಮಾನ್ಯ ರೈತರ ಜಮೀನುಗಳನ್ನು ಪಣಕ್ಕೀಟ್ಟು ಹೋರಾಟ ಮಾಡುವುದಾಗಿ ಹೇಳುತ್ತಿದ್ದಾರೆ. ರಮೇಶ್ ಕುಮಾರ್ ಅವರು ತಮ್ಮ ಜಮೀನು ಉಳಿಸಲು ವಿಕಾಸ ಸೌಧ, ವಿಧಾನ ಸೌಧ, ಅರಣ್ಯ ಸಚಿವರು, ಮುಖ್ಯಮಂತ್ರಿಗಳು ಭೇಟಿ ಮಾಡಿದ ನಂತರ ಕೊನೆಯದಾಗಿ ಈಗ ರೈತರು ಪಾದವೇ ಗತಿ ಎಂದು ರೈತರನ್ನ ಸೇರಿಸಿಕೊಂಡು ಜಮೀನು ಉಳಿಸುತ್ತೇನೆ ಎಂದು ಕೊನೆ ಹೋರಾಟ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ನಿಮ್ಮ ಜಮೀನು ಉಳಿಸಿಕೊಂಡರೆ ನಮ್ಮ ಅಭ್ಯಂತರವಿಲ್ಲ, ಆದ್ರೆ ರೈತರಿಗೆ ತಪ್ಪು ಮಾಹಿತಿ ನೀಡಿ ತಾಲೂಕಿನಲ್ಲಿ ಅರಾಜಕತೆ ಸೃಷ್ಟಿಸುವುದು ಬೇಡವೆಂದ ಶಾಸಕ ವೆಂಕಟಶಿವರೆಡ್ಡಿ ತಿಳಿಸಿದರು.ಶ್ರೀನಿವಾಸಪುರದಲ್ಲಿ ರೈತರ ಪರವಾಗಿ ನಾನು ಇರುವೆ ಈಗಾಗಲೇ ಅರಣ್ಯಾಧಿಕಾರಿಗಳ ಜೊತೆ ಮಾತನಾಡುತ್ತಿರುವೆ, ತಾಲೂಕಿನಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ದೊಡ್ಡ ಸವಾಲಾಗಿ ಪರಿಣಮಿಸಿದೆ, ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ವಿಚಾರದಲ್ಲಿ ರೈತರು ಅನುಭವಿಸುತ್ತಿರುವ ತೊಂದರೆಗೆ ಕಾರಣ ಯಾರು, 2021 ರಲ್ಲಿ 3180 ಎಕರೆ ರೈತರ ಭೂಮಿ ಅರಣ್ಯ ಇಲಾಖೆ ಹಿಂಡೀಕರಣ ಮಾಡಿದ್ದರು, ನೀವು ಶಾಸಕರಾಗಿ ಮಾಡಿದ್ದೇನು ಎಂದು ಪ್ರಶ್ನೆ ಮಾಡಿದರು.ರೈತರ ಪರವಾಗಿ ಧ್ವನಿ ಏತ್ತಿ ಸರ್ಕಾರ ಗಮನಕ್ಕೆ ತರಬಹುದಾಗಿತ್ತು, ಸರ್ಕಾರ ಪತ್ರ ವ್ಯವಹಾರ ಮಾಡಿದರೆ ಹಿಂಡೀಕರಣ ತಪ್ಪುತ್ತಿತ್ತು. ಇಡೀ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಹಿಂಡೀಕರಣವಾಗಿಲ್ಲ, ಶ್ರೀನಿವಾಸಪುರದಲ್ಲಿ ಮಾತ್ರವಾಗಿದೆ, ಇದಕ್ಕೆ ರಮೇಶ್ ಕುಮಾರ್ ಅವರ ಕಾರಣರೆಂದು ಆಕ್ರೋಶ ವ್ಯಕ್ತಪಡಿಸಿದರು.