ಪ್ರಸಕ್ತ ವರ್ಷದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಪ್ರಾರಂಭದ ದಿನಗಳಲ್ಲಿ ಉತ್ತಮ ಬೆಲೆ ದೊರಕುತ್ತಿದ್ದು, ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸಿದ ನಂತರ ದಿಢೀರ್ ಕುಸಿತ ಕಂಡಿತು. ಬೆಲೆ ಇಳಿಕೆ ವಿರೋಧಿಸಿ ಅನೇಕ ಪ್ರತಿಭಟನೆಗಳು ನಡೆದು, ಸಂಸದರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮಾರುಕಟ್ಟೆಗೆ ಭೇಟಿ ನೀಡಿ ತಂಬಾಕು ಬೆಲೆ ಇಳಿಕೆ ಕುರಿತು ವಾಣಿಜ್ಯ ಸಚಿವಾಲಯದ ಗಮನಸೆಳೆದು ಅಬಕಾರಿ ಸುಂಕವನ್ನು ಕಡಿಮೆ ಮಾಡಿ ಬೆಳೆಗಾರರಿಂದ ತಂಬಾಕು ಖರೀದಿಯ ಹೆಚ್ಚು ದೊರಕುವಂತೆ ಕ್ರಮಕೈಗೊಳ್ಳುವ ಭರವಸೆ ನೀಡಿದರು ತಂಬಾಕು ಖರೀದಿಯ ಬೆಲೆಯಲ್ಲಿ ಏರಿಕೆ ಕಾಣಲಿಲ್ಲ.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಲ್ಲಿಯ ಸುಬ್ರಹ್ಮಣ್ಯ ನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯ ಪ್ಲಾಟ್‌ಫಾರಂ 7 ಹಾಗೂ 63 ಫ್ಲಾಟ್‌ಫಾರಂ ಎರಡು ಹರಾಜು ಮಾರುಕಟ್ಟೆಯಲ್ಲಿ 2025-26 ನೇ ಸಾಲಿನ ತಂಬಾಕು ಹರಾಜು ಮಾರುಕಟ್ಟೆಯು ಖರೀದಿಯು ಮುಕ್ತಾಯಗೊಂಡಿದ್ದು, 211 ಕೋಟಿ ರು. ವಹಿವಾಟು ದಾಖಲಾಗಿದೆ.ಹಾಸನ ಜಿಲ್ಲೆಯ, ಅರಕಲಗೂಡು, ಹೊಳೆನರಸಿಪುರ, ಸೋಮವಾರಪೇಟೆ, ಸಾಲಿಗ್ರಾಮ ಈ ಭಾಗದ ಸುಮಾರು 30 ಸಾವಿರಕ್ಕೂ ಅಧಿಕ ತಂಬಾಕು ಬೆಳೆಗಾರರಿದ್ದು ಪ್ರಮುಖ ವಾಣಿಜ್ಯ ಬೆಳೆ ಹೊಗೆಸೊಪ್ಪಿನ ಮಾರಾಟ ವಹಿವಾಟು ಬಹುತೇಕ ಮುಕ್ತಾಯಗೊಂಡಿದ್ದು , ರಾಮನಾಥಪುರದಲ್ಲಿನ ತಂಬಾಕು ಹರಾಜು ಮಾರುಕಟ್ಟೆಯಲ್ಲಿನ ಹರಾಜು ಪ್ಲಾಟ್ ಫಾರಂ ಸಂಖ್ಯೆ ೭ ರಲ್ಲಿನ ಖರೀದಿಯ ವಹಿವಾಟು ಶುಕ್ರವಾರ ಮುಕ್ತಾಯಗೊಂಡಿದೆ. ಪ್ಲಾಟ್ ಫಾರಂ ಸಂಖ್ಯೆ 63ರಲ್ಲಿನ ವಹಿವಾಟು ಇನ್ನೂ ನಡೆಯುತ್ತಿದೆ.ಪ್ರಸಕ್ತ ವರ್ಷದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಪ್ರಾರಂಭದ ದಿನಗಳಲ್ಲಿ ಉತ್ತಮ ಬೆಲೆ ದೊರಕುತ್ತಿದ್ದು, ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸಿದ ನಂತರ ದಿಢೀರ್ ಕುಸಿತ ಕಂಡಿತು. ಬೆಲೆ ಇಳಿಕೆ ವಿರೋಧಿಸಿ ಅನೇಕ ಪ್ರತಿಭಟನೆಗಳು ನಡೆದು, ಸಂಸದರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಮಾರುಕಟ್ಟೆಗೆ ಭೇಟಿ ನೀಡಿ ತಂಬಾಕು ಬೆಲೆ ಇಳಿಕೆ ಕುರಿತು ವಾಣಿಜ್ಯ ಸಚಿವಾಲಯದ ಗಮನಸೆಳೆದು ಅಬಕಾರಿ ಸುಂಕವನ್ನು ಕಡಿಮೆ ಮಾಡಿ ಬೆಳೆಗಾರರಿಂದ ತಂಬಾಕು ಖರೀದಿಯ ಹೆಚ್ಚು ದೊರಕುವಂತೆ ಕ್ರಮಕೈಗೊಳ್ಳುವ ಭರವಸೆ ನೀಡಿದರು ತಂಬಾಕು ಖರೀದಿಯ ಬೆಲೆಯಲ್ಲಿ ಏರಿಕೆ ಕಾಣಲಿಲ್ಲ. ಗರಿಷ್ಠ ಬೆಲೆ ಕೇಜಿಗೆ ೩೨೧ ರು.೨೦೨೫-೨೬ನೇ ಸಾಲಿಗೆ ರಾಮನಾಥಪುರದಲ್ಲಿನ ಪ್ಲಾಟ್‌ಫಾರಂ ಸಂಖ್ಯೆ ೭ರಲ್ಲಿ ಒಟ್ಟು ೮೦೭೮೬ ಬೇಲ್‌ಗಳ ೮೭೩೩೫೧೪ ಕೇಜಿ ತಂಬಾಕು ಮಾರಾಟವಾಗಿದೆ.ಪ್ರತಿ ಕೇಜಿ ಉತ್ತಮ ಗುಣಮಟ್ಟದ ಹೊಗೆಸೊಪ್ಪಿಗೆ ಗರಿಷ್ಠ ೩೨೧ ರು, ಕನಿಷ್ಠ ೫೦ ರು. ಬೆಲೆ ದೊರೆತಿದ್ದು, ಮಾರಾಟವಾದ ಪ್ರತಿ ಕೇಜಿ ತಂಬಾಕಿನ ಬೆಲೆ ಸರಾಸರಿ ಬೆಲೆ ।₹೨೪೨.೪೦ ಸಿಕ್ಕಿದ್ದು, ಒಟ್ಟು ೨೧೧. ೬೯ ಕೋಟಿ ರುಪಾಯಿ ವಹಿವಾಟು ನಡೆದಿದೆ.ಉತ್ತಮ ಬೆಲೆಯ ತಂಬಾಕು ಪ್ರತಿ ಕೇಜಿಗೆ ೨೯೨.೯೪ ರುಪಾಯಿ, ಮಧ್ಯಮ ಬೆಲೆಯ ತಂಬಾಕು ಪ್ರತಿ ಕೇಜಿಗೆ ೨೫೧.೭೫ ರುಪಾಯಿ ಮತ್ತು ಕಡಿಮೆ ದರ್ಜೆಯ ತಂಬಾಕು ಪ್ರತಿ ಕೇಜಿಗೆ ೧೮೭.೭೩ ರುಪಾಯಿ ಸರಾಸರಿ ಬೆಲೆ ದೊರಕಿದೆ.ರಸಗೊಬ್ಬರ ವಿತರಣೆ ಪ್ರಾರಂಭ.
ಪ್ರಸಕ್ತ ಸಾಲಿನ ಹೊಗೆಸೊಪ್ಪು ಬೆಳೆಸಲು ಅಗತ್ಯವಿರುವ ರಸಗೊಬ್ಬರಗಳನ್ನು ಮಾರುಕಟ್ಟೆಯಲ್ಲಿ ವಿತರಿಸಲು ಪ್ರಾರಂಭಿಸಿದ್ದು, ಬೆಳೆಗಾರರು ತಮ್ಮ ವಾಹನಗಳಲ್ಲಿ ಗೊಬ್ಬರವನ್ನು ಕೊಂಡೊಯ್ಯುತ್ತಿದ್ದಾರೆ. ಬೆಲೆ ಇಳಿಕೆಯ ಜೊತೆಗೆ ಮಂಡಳಿಯು ತಂಬಾಕು ಉತ್ಪಾದನೆ ಕಡಿತಗೊಳಿಸಿದ್ದು ೨೦೨೬-೨೭ ನೇ ಸಾಲಿಗೆ ಸಿಂಗಲ್ ಬ್ಯಾರಲ್ ಪರವಾನಗಿ ಹೊಂದಿರುವ ಬೆಳೆಗಾರರು ೧೦೧೭ ಕೇಜಿ ಮತ್ತು ಡಬಲ್ ಬ್ಯಾರಲ್ ಹೊಂದಿರುವವರು ೨೦೩೪ ಕೇಜಿ ಮಾತ್ರ ಬೆಳೆಯುವಂತೆ ತಂಬಾಕು ಮಂಡಳಿಯು ಪ್ರಕಟಣೆ ಹೊರಡಿಸಿದೆ. ಖರೀದಿಯಲ್ಲಿ ೩೫ ಕಂಪೆನಿಗಳು:೨೦೨೫-೨೬ನೇ ಸಾಲಿನಲ್ಲಿ ರಾಮನಾಥಪುರದ ಪ್ಲಾಟ್‌ಫಾರಂ ಸಂಖ್ಯೆ ೭ರಲ್ಲಿ ನಡೆದ ತಂಬಾಕು ಹರಾಜಿನಲ್ಲಿ ೩೫ ಕಂಪೆನಿಗಳು ರೈತರಿಂದ ತಂಬಾಕನ್ನು ಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಮಾರಾಟವಾಗಿರುವ ೮೭೩೩೫೧೪ ಕೇಜಿ ತಂಬಾಕಿನ ಪೈಕಿ ಶೇ.೪೦.೮೩ರಷ್ಟು ( ೩೫. ೬೬ ಲಕ್ಷ ಕೇಜಿ) ಕೊಂಡಿದೆ.