ನಾಪೋಕ್ಲು: ಇಂದು ಬಿಲ್ಲವ ಸಮಾಜ ‘ಆಟಿಡೊಂಜಿ ದಿನ’

| Published : Aug 04 2024, 01:19 AM IST

ಸಾರಾಂಶ

ಆ. 4ರಂದು ಆಟಿಡೊಂಜಿ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಪ್ರಯುಕ್ತ ಬೃಹತ್‌ ರಕ್ತದಾನ ಶಿಬಿರ ನಡೆಯಲಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ಆ.4ರಂದು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದೆ ಎಂದು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಪ್ರತೀಪ ಹೇಳಿದರು.

ನಾಪೋಕ್ಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬಿಲ್ಲವ ಸಮಾಜದ ಸಂಘದ ಉದ್ಘಾಟನೆ ನಡೆಯಲಿದೆ. ಆ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಬಳಿಕ ಬಿಲ್ಲವ ಸಮಾಜದ ಮಹಾಸಭೆ ನಡೆಯಲಿದೆ ಎಂದರು.

ನಾಪೋಕ್ಲು ಹೋಬಳಿ ಮಟ್ಟದಲ್ಲಿ ಸಮಾಜ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಳಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಆಟಿ ಮಾಸದಲ್ಲಿ ತಯಾರಿಸುವ ವಿಶೇಷ ಖಾದ್ಯಗಳ ತಿನಿಸುಗಳ ಪ್ರದರ್ಶನ ಹಾಗೂ ಊಟೋಪಚಾರ ನಡೆಯಲಿದೆ ಎಂದು ತಿಳಿಸಿದರು.

ನಿರಂತರವಾಗಿ ಸಮಾಜ ಸೇವೆ ಮಾಡುವ ಉದ್ದೇಶದಿಂದ ಸಂಘವನ್ನು ಸ್ಥಾಪಿಸಲಾಗಿದ್ದು, ಕನಿಷ್ಠ 50 ಯೂನಿಟ್ ರಕ್ತ ಸಂಗ್ರಹಿಸುವ ಉದ್ದೇಶವನ್ನು ಹೊಂದಿದ್ದೇವೆ. ಮಧ್ಯಾಹ್ನ ಬಿಲ್ಲವ ಸಮಾಜದ ವಾರ್ಷಿಕ ಮಹಾಸಭೆ ನಡೆಯಲಿದ್ದು, ಸಮಾಜ ಬಾಂಧವರಿಗಾಗಿ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ ವಹಿಸುವರು. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ, ರಕ್ತ ನಿಧಿ ಅಧಿಕಾರಿ ಡಾ. ಕರಂಬಯ್ಯ, ಮಡಿಕೇರಿ ಬಿಲ್ಲವ ಸಮಾಜದ ಅಧ್ಯಕ್ಷೆ ಲೀಲಾವತಿ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ, ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ, ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ನೋಟರಿ ವಕೀಲ ದಯಾ ಹೊನ್ನಪ್ಪ, ಮೂರ್ನಾಡು ಭಗವಾನ್ ಬಿಲ್ಡರ್ಸ್‌ನ ಮಾಲೀಕ ಸುರೇಶ್ ಮುತ್ತಪ್ಪ, ಹಿಂದೂ ಮಲಯಾಳಿ ಸಂಘ ಅಧ್ಯಕ್ಷ ಅನಿಲ್, ನಿವೃತ ಸೇನಾಧಿಕಾರಿ ಕ್ಯಾಪ್ಟನ್ ಪೂವಪ್ಪ, 50ಕ್ಕೂ ಅಧಿಕ ಭಾರಿ ರಕ್ತದಾನ ಮಾಡಿದ ರಾಮಪ್ಪ, ಸಿವಿಲ್ ಕಂಟ್ರಾಕ್ಟರ್ ಗೋಪಾಲ ಮೂರ್ನಾಡು, ನಿವೃತ್ತ ಪೊಲೀಸ್ ಅಧಿಕಾರಿ ಲಿಂಗಪ್ಪ ಮೂರ್ನಾಡು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು ಎಂದು ಹೇಳಿದರು.

ಬಿಲ್ಲವ ಸಮಾಜದ ಕಾರ್ಯದರ್ಶಿ ರೋಹಿತ್, ಸಂಘಟನಾ ಕಾರ್ಯದರ್ಶಿ ಬಿ.ಎಸ್. ನಾಗರಾಜ್, ಖಜಾಂಚಿ ಬಿ.ಡಿ. ದೀಪಕ್, ಸದಸ್ಯರಾದ ಪುನೀತ್, ಸದಸ್ಯ ಬಿ.ಎಸ್. ದಿಲೀಪ್ ಉಪಸ್ಥಿತರಿದ್ದರು.