ಸಾರಾಂಶ
ವಾಣಿಜ್ಯೋದ್ಯಮಿಗಳಾಗುವವರು ವ್ಯಾಪಾರದ ಅವಕಾಶ, ಮಾರುಕಟ್ಟೆ ಗುರಿ, ವ್ಯವಹಾರಕ್ಕೆ ಬೇಕಾದ ಅಗತ್ಯಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿರಬೇಕು
ಕನ್ನಡಪ್ರಭ ವಾರ್ತೆ ತುಮಕೂರುವಾಣಿಜ್ಯೋದ್ಯಮಿಗಳಾಗುವವರು ವ್ಯಾಪಾರದ ಅವಕಾಶ, ಮಾರುಕಟ್ಟೆ ಗುರಿ, ವ್ಯವಹಾರಕ್ಕೆ ಬೇಕಾದ ಅಗತ್ಯಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ರಾಶ್ವಿ ಇಂಟರ್ ನ್ಯಾಷನಲ್ ಫಿಟೋ ಸಾನಿಟರಿ ರಿಸರ್ಚ್ ಅಂಡ್ ಸರ್ವೀಸ್ ಪ್ರವೇಟ್ ಲಿಮಿಟೆಡ್‌ನ ಸ್ಥಾಪಕಿಡಾ. ಎಂ.ಎ. ರಶ್ಮಿ ಹೇಳಿದರು.ತುಮಕೂರು ವಿವಿ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ವಿಭಾಗವು ಆಯೋಜಿಸಿದ್ದ ‘ಉದ್ಯಮಶೀಲತೆ ಅಭಿವೃದ್ಧಿ’ ಕುರಿತು ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ‘ಇಂದಿನ ವಾಣಿಜ್ಯೋದ್ಯಮಿ ಮುಂದಿನ ಕಾರ್ಪೋರೇಟ್ ನಾಯಕ’ಕುರಿತು ವಿಶೇಷ ಉಪನ್ಯಾಸ ನೀಡಿದರು. ವ್ಯಾಪಾರದ ಯೋಜನೆಗಳು, ಹಣಕಾಸಿನ ನಿರ್ವಹಣೆ, ಕಾನೂನು ಮತ್ತು ನಿಯಂತ್ರಕ ಪರಿಗಣನೆಗಳ ಪ್ರಾಮುಖ್ಯತೆಗಳ ಕುರಿತು ಮಾತನಾಡಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷೆ ಪ್ರೊ.ನೂರ್‌ಅಫ್ಜಾ, ಕಾನೂನು ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಎ. ಮೋಹನ್‌ರಾಮ್ ಉಪಸ್ಥಿತರಿದ್ದರು.