ದಾವಣಗೆರೆ : ಇಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ವಿವಿಧ ಕ್ಷೇತ್ರದ 33 ಸಾಧಕರಿಗೆ ಸನ್ಮಾನ

| Published : Nov 01 2024, 01:16 AM IST / Updated: Nov 01 2024, 12:30 PM IST

Kannada flag

ಸಾರಾಂಶ

 ದಾವಣಗೆರೆ ಸೇರಿದಂತೆ ಹರಿಹರ, ಜಗಳೂರು, ಚನ್ನಗಿರಿ, ಮಾಯಕೊಂಡ ವಿಧಾನಸಭಾ ಕ್ಷೇತ್ರಗಳ 33 ಸಾಧಕರ ಪಟ್ಟಿ ಬಿಡುಗಡೆ ಮಾಡಿದ್ದು, ಜಾನಪದ, ಸಂಗೀತ, ಸಮಾಜ ಸೇವೆ, ಕೃಷಿ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಗಣ್ಯರ ಹೆಸರನ್ನು ಘೋಷಣೆ ಮಾಡಿದೆ.

 ದಾವಣಗೆರೆ : ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತದಿಂದ 2024ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳ 33 ಸಾಧಕರಿಗೆ ಸನ್ಮಾನಿಸಿ, ಗೌರವಿಸಲಾಗುತ್ತದೆ. ಜಿಲ್ಲಾಡಳಿತವು ಗುರುವಾರ ಸಂಜೆ ದಾವಣಗೆರೆ ಸೇರಿದಂತೆ ಹರಿಹರ, ಜಗಳೂರು, ಚನ್ನಗಿರಿ, ಮಾಯಕೊಂಡ ವಿಧಾನಸಭಾ ಕ್ಷೇತ್ರಗಳ 33 ಸಾಧಕರ ಪಟ್ಟಿ ಬಿಡುಗಡೆ ಮಾಡಿದ್ದು, ಜಾನಪದ, ಸಂಗೀತ, ಸಮಾಜ ಸೇವೆ, ಕೃಷಿ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಗಣ್ಯರ ಹೆಸರನ್ನು ಘೋಷಣೆ ಮಾಡಿದೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.1ರಂದು ಬೆಳಿಗ್ಗೆ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಾಧಕರಿಗೆ ಸನ್ಮಾನಿಸಿ, ಗೌರವಸಲಿದ್ದಾರೆ. ರಾಜ್ಯೋತ್ಸವ ಸನ್ಮಾನಿತರುಶಿಲ್ಪಕಲೆ: ಟಿ.ಶ್ರೀನಿವಾಸ(ದಾವಣಗೆರೆ), ವಿ. ಮೇಘಾಚಾರಿ (ದಾವಣಗೆರೆ), ಕೆ.ಆರ್. ಮೌನೇಶ್ವರ(ದಾವಣಗೆರೆ), ಸಂಗೀತ: ಟಿ. ಬಸವರಾಜ (ಜಗಳೂರು), ಎ.ಎನ್.ಶಶಿಕಿರಣ್ (ಚನ್ನಗಿರಿ), ಎನ್.ಬಸಣ್ಣ (ದಾವಣಗೆರೆ).

ಜಾನಪದ: ಪೀರಿ ಬಾಯಿ(ಮಾಯಕೊಂಡ), ಎಚ್.ಪಿ. ನಾಗೇಂದ್ರಪ್ಪ(ಹರಿಹರ), ಎಸ್.ಕೆ. ವೀರೇಶಕುಮಾರ(ಹರಿಹರ), ಪಿ. ಮೀನಾಕ್ಷಿ(ದಾವಣಗೆರೆ)ಸಮಾಜ ಸೇವೆ: ಎ.ಜೆ. ರವಿಕುಮಾರ (ದಾವಣಗೆರೆ), ಹಿರಿಯ ವಕೀಲ ಎಲ್.ಎಚ್. ಅರುಣಕುಮಾರ (ದಾವಣಗೆರೆ)ಸಂಕೀರ್ಣ: ಎಂ. ಮನು (ದಾವಣಗೆರೆ), ಬಿ. ತಿಮ್ಮನಗೌಡ (ದಾವಣಗೆರೆ)ಛಾಯಾಗ್ರಹಣ: ಶ್ರೀನಾಥ ಪಿ. ಅಗಡಿ (ದಾವಣಗೆರೆ)ಕ್ರೀಡಾ ಕ್ಷೇತ್ರ: ಎಸ್.ಪಿ. ಲಾವಣ್ಯ ಶ್ರೀಧರ (ದಾವಣಗೆರೆ)ರಂಗಭೂಮಿ, ಬಯಲಾಟ, ದೊಡ್ಡಾಟ: ಬಡಪ್ಪ(ಜಗಳೂರು), ವಿನಾಯಕ ನಾಕೋಡ (ದಾವಣಗೆರೆ), ಎಸ್.ವಿ. ವಿಶ್ವನಾಥ (ದಾವಣಗೆರೆ), ಕೆ.ಎಸ್. ಕೊಟ್ರೇಶ (ದಾವಣಗೆರೆ)ಕನ್ನಡ ಪರ ಹೋರಾಟ: ಸಂತೋಷ ದೊಡ್ಮನಿ (ದಾವಣಗೆರೆ), ಬಿ.ಎಸ್. ಶುಭಮಂಗಳ (ದಾವಣಗೆರೆ), ನಾಗರಾಜ ಜಮ್ನಳ್ಳಿ (ದಾವಣಗೆರೆ), ಎಲ್.ಜಿ. ಮಧುಕುಮಾರ (ಚನ್ನಗಿರಿ)ಸಾಹಿತ್ಯ: ಕೆ. ಸಿದ್ದಲಿಂಗಪ್ಪ (ಚನ್ನಗಿರಿ)ಕೃಷಿ: ಕೆ.ಟಿ. ಚಂದ್ರಶೇಖರಪ್ಪ (ದಾವಣಗೆರೆ)

ದಾವಣಗೆರೆ ಪತ್ರಿಕೋದ್ಯಮ ಎಚ್.ಎಂ. ಸದಾನಂದ (ಕನ್ನಡಪ್ರಭ, ಮಲೆಬೆನ್ನೂರು)ಎಂ.ಬಿ.ನವೀನ್, ಸ್ಥಾನಿಕ ಸಂಪಾದಕ, ವಿಜಯವಾಣಿ (ದಾವಣಗೆರೆ) ಎಚ್.ಟಿ.ಪರಶುರಾಮ, ಕ್ಯಾಮರಾಮನ್‌, ಪಬ್ಲಿಕ್ ಟೀವಿ(ದಾವಣಗೆರೆ)ಓ.ಎನ್.ಸಿದ್ದಯ್ಯ ಒಡೆಯರ್, ಹಿರಿಯ ವರದಿಗಾರ, ಜನತಾವಾಣಿ(ದಾವಣಗೆರೆ)ಕೆ.ಎಸ್.ಚನ್ನಬಸಪ್ಪ(ಶಂಭು), ಆಕಾಶವಾಣಿ(ದಾವಣಗೆರೆ)ಎಂ.ಎಸ್.ಮಂಜುನಾಥ, ಪತ್ರಿಕಾ ವಿತರಕ(ದಾವಣಗೆರೆ)ಎ.ಎಂ.ಪ್ರಕಾಶ, ಮುದ್ರಣ (ದಾವಣಗೆರೆ)