- ಹಿರಿಯ ಪತ್ರಕರ್ತರಿಗೆ ಜೀವಮಾನ ಸಾಧನೆ ಪರಿಗಣಿಸಿ ಗೌರವ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲಾ ವರದಿಗಾರರ ಕೂಟದ ವತಿಯಿಂದ 2024-25 ಹಾಗೂ 2025-26ನೇ ಸಾಲಿನ ಮಾಧ್ಯಮ ದಿನಾಚರಣೆ, ಮಾಧ್ಯಮ ಪ್ರಶಸ್ತಿ ಪ್ರದಾನ, ಹಿರಿಯ ಪತ್ರಕರ್ತರಿಗೆ ಜೀವಮಾನ ಸಾಧನೆಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಜುಲೈ 31ರಂದು ಬೆಳಗ್ಗೆ 11:30 ಗಂಟೆಗೆ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಆಂಧ್ರಪ್ರದೇಶದ ಶ್ರೀಶೈಲ ಜಗದ್ಗುರುಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಜರುಗುವ ಕಾರ್ಯಕ್ರಮವನ್ನು ಮಾಜಿ ಸಚಿವ, ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದು, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಸಮರ್ಥ ಶಾಮನೂರು ಜೀವಮಾನ ಸಾಧಕರಿಗೆ ಗೌರವ ಸನ್ಮಾನ ಮಾಡಿ ಪುರಸ್ಕರಿಸಲಿದ್ದಾರೆ. ಇದೇ ವೇಳೆ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಸಂಸ್ಥಾಪಕ, ಪದ್ಮಶ್ರೀ ಪುರಸ್ಕೃತ ಡಾ. ಸುರೇಶ ಹನಗವಾಡಿ ಅವರಿಗೆ ಕೂಟದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಗುತ್ತದೆ.


ಶಾಸಕರುಗಳಾದ ಬಿ.ಪಿ.ಹರೀಶ್, ಕೆ.ಎಸ್.ಬಸವಂತಪ್ಪ, ಶಿವಗಂಗಾ ಬಸವರಾಜ್ ಅವರು ಮಾಧ್ಯಮ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದು, ಕೂಟದ ಉಪಾಧ್ಯಕ್ಷ ಮಂಜುನಾಥ ಗೌರವಕ್ಕಳವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಆಯುಕ್ತ ಎನ್.ಮಹಾಂತೇಶ್, ದೂಡಾ ಆಯುಕ್ತರಾದ ರೇಣುಕಾ, ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಏಕಬೋಟೆ, ವಿಜಯವಾಣಿ ಸ್ಥಾನಿಕ ಸಂಪಾದಕ ಎನ್.ಡಿ. ಶಾಂತಕುಮಾರ್, ಮಲ್ನಾಡವಾಣಿ ಸಂಪಾದಕ ಕೆ. ಏಕಾಂತಪ್ಪ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ ಹಾಗೂ ಕೂಟದ ಉಪಾಧ್ಯಕ್ಷ ಎ.ಎಲ್. ತಾರಾನಾಥ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಪ್ರಶಸ್ತಿ ಪುರಸ್ಕೃತರ ವಿವರ:2024-25ನೇ ಸಾಲಿನ ಮಾಧ್ಯಮ ಪ್ರಶಸ್ತಿಗೆ ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ, ವಿಜಯ ಕರ್ನಾಟಕ ಹಿರಿಯ ಉಪಸಂಪಾದಕ ಪ್ರಸನ್ನ ಜವಳಿ, ವಿಜಯವಾಣಿ ಹಿರಿಯ ಉಪ ಸಂಪಾದಕ ಹರ್ಷ ಪುರೋಹಿತ, ಪಬ್ಲಿಕ್ ವಾಯ್ಸ್ ಹಿರಿಯ ವರದಿಗಾರ ಎ.ಸಿ. ನಾಗರಾಜ್, ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಬಿ.ಜಿ. ಮಹದೇವ್ ಭಾಜನರಾಗಿದ್ದಾರೆ.2024-25ನೇ ಸಾಲಿನ ಜೀವಮಾನ ಸಾಧನೆ ಗೌರವ:ಕರ್ನಾಟಕ ಎಕ್ಸ್ ಪ್ರೆಸ್ ಸಂಪಾದಕ ಕೆ. ಚಂದ್ರಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಡಾಎಚ್.ಬಿ.ಮಂಜುನಾಥ್, ಹಿರಿಯ ವರದಿಗಾರ ಆರ್.ಎಸ್.ತಿಪ್ಪೇಸ್ವಾಮಿ, ಸುಭಾಷಿತ ಪತ್ರಿಕೆ ಸಂಪಾದಕ ಡಾ. ಕೆ. ಜೈಮುನಿ, ಜಿಲ್ಲಾ ಸಮಾಚಾರ ಪತ್ರಿಕೆಯ ಸಂಸ್ಥಾಪಕ ಸಂಪಾದಕ ವಿ. ಹನುಮಂತಪ್ಪ ಅವರಿಗೆ ಜೀವಮಾನ ಸಾಧನೆಯಡಿ ಗೌರವಿಸಲಾಗುತ್ತದೆ.2025-26ನೇ ಸಾಲಿನ ಮಾಧ್ಯಮ ಪ್ರಶಸ್ತಿ:ನಗರ ಮಿಡಿತ ಸಂಪಾದಕ ಜಿ.ಎಸ್. ವಸಂತಕುಮಾರ್, ಟಿವಿ 5 ವರದಿಗಾರ ಅಣ್ಣಪ್ಪ ಕುಂದುವಾಡ, ಹಿರಿಯ ಪತ್ರಿಕಾ ಛಾಯಾಗ್ರಹಕ ವಿಜಯ್ ಜಾಧವ್, ನಗರವಾಣಿ ವರದಿಗಾರ ಮಹೇಶ್ ಕಾಶಿಪುರ, ರಿಪಬ್ಲಿಕ್ ಕನ್ನಡ ಕ್ಯಾಮೆರಾಮ್ಯಾನ್ ಶಿವರಾಜ್ ಇಳಿಗೇರ್ 2025-26ನೇ ಸಾಲಿನ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.2025-26ನೇ ಸಾಲಿನ ಜೀವಮಾನ ಸಾಧನೆ ಗೌರವ:ವಿಸ್ಮಯವಾಣಿ ಸಂಪಾದಕ ಡಾ. ಬಿ. ವಾಸುದೇವ, ವಾರ್ತಾ ವಿಹಾರ ಸಂಪಾದಕ ಸಿ.ಪಿ. ಸತೀಶ್ ಕುಮಾರ್, ಜನಸ್ಪಂದನ ಸಂಪಾದಕ ಕೆ. ಉಮೇಶ್ ಕಾಡಪ್ಪ, ಜನಕ್ರಾಂತಿ ಸಂಪಾದಕ ಕೆ.ಆರ್. ಗಂಗರಾಜು ಅವರುಗಳಿಗೆ ಜೀವಮಾನ ಸಾಧನೆ ಗೌರವ ನೀಡಿ ಗೌರವಿಸಲಾಗುವುದು.ಇದೇ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪ್ರಜಾವಾಣಿಯ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ, ದೂರದರ್ಶನದ ಎ.ಎಲ್. ತಾರಾನಾಥ್, ಸುಭಾಷಿತ ಪತ್ರಿಕೆ ಸಂಪಾದಕ ಡಾ. ಕೆ. ಜೈಮುನಿ, ವಿಜಯವಾಣಿ ಪತ್ರಿಕೆ ಹಿರಿಯ ವರದಿಗಾರ ರಮೇಶ್ ಜಹಗೀರದಾರ್, ವಿಜಯ ಕರ್ನಾಟಕ ಪತ್ರಿಕೆ ಹಿರಿಯ ವರದಿಗಾರ ಯಳನಾಡು ಮಂಜುನಾಥ, ಹಿರಿಯ ಛಾಯಾಗ್ರಹಕ ವಿವೇಕ್ ಎಲ್. ಬದ್ದಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತರಾದ ಎಚ್.ಕೆ. ನಟರಾಜ್ ಮತ್ತು ವಿಠ್ಠಲ್ ಕ್ಯಾರವಾಡ ಅವರನ್ನು ಸನ್ಮಾನಿಸಲಾಗುತ್ತದೆ.

- - -