ಇಂದು ಪೇಜಾವರ ಶ್ರೀಗಳಿಂದ ಶ್ರೀ ಕ್ಷೇತ್ರ ಪೆರ್ಣಂಕಿಲದಲ್ಲಿ ಶ್ರೀರಾಮ ನವಮಿ

| Published : Apr 17 2024, 01:24 AM IST

ಇಂದು ಪೇಜಾವರ ಶ್ರೀಗಳಿಂದ ಶ್ರೀ ಕ್ಷೇತ್ರ ಪೆರ್ಣಂಕಿಲದಲ್ಲಿ ಶ್ರೀರಾಮ ನವಮಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮ ಮಂದಿರ ನಿರ್ಮಾಣದೊಂದಿಗೆ ರಾಮ ರಾಜ್ಯ ನಿರ್ಮಾಣದ ಕನಸು ಹೊತ್ತಿರುವ ಸ್ವಾಮಿಜಿಯವರು ಕೊಟ್ಟ ಕರೆಯಂತೆ, ಸಂಕಷ್ಟದಲ್ಲಿರುವವರಿಗೆ ಸೂರು ಕಟ್ಟಿ ಕೊಡುವ ಸಂಕಲ್ಪದಂತೆ ಇಲ್ಲಿನ ಮದ್ವರಾಯಬೆಟ್ಟಿನಲ್ಲಿ ಅಣ್ಣು ನಾಯಕರಿಗೆ ಜೀರ್ಣೋದ್ಧಾರ ಸಮಿತಿಯ ವತಿಯಿಂದ ನಿರ್ಮಿಸಿದ ನೂತನ ಗೃಹ ‘ಶ್ರೀ ರಾಮ ನಿಲಯ’ದ ಹಸ್ತಾಂತರ ಕಾರ್ಯಕ್ರಮವು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನೆರವೇರಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಸಂಪೂರ್ಣ ಜೀರ್ಣೋದ್ಧಾರಗೊಳಿಸಲಾದ ಕ್ಷೇತ್ರ ಪೆರ್ಣಂಕಿಲದ ನೂತನ ಪೇಜಾವರ ಶಾಖಾ ಮಠದ ಶ್ರೀ ರಾಮನ ಸನ್ನಿಧಾನದಲ್ಲಿ ಏ.17ರಂದು ವೈಭವದಿಂದ ರಾಮ ನವಮಿ ಉತ್ಸವವು ಪೇಜಾವರ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ವಿಶೇಷ ರೀತಿಯಲ್ಲಿ ಆಚರಣೆಯಾಗಲಿದೆ.

ಸಂಜೆ 5 ಗಂಟೆಯಿಂದ ಊರಿನ ಭಕ್ತರಿಂದ ಶ್ರೀ ರಾಮ ಭಜನಾ ಕಾರ್ಯಕ್ರಮ ನಡೆಯಲಿದೆ. ನಂತರ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾದ ಭವ್ಯವಾದ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಟಾಪಿಸಿ 48 ದಿನಗಳ ಮಂಡಲ ಪೂಜೆಯನ್ನು ನಿರ್ವಹಿಸಿದ ಸವಿ ನೆನಪಿಗಾಗಿ ಪೆರ್ಣಂಕಿಲದ ಮಠದಲ್ಲಿ ಪ್ರತಿಷ್ಠಾಪಿಸಲಾದ ಸಾಲಿಗ್ರಾಮ ಶಿಲೆಯ ಶ್ರೀ ರಾಮ ದೇವರ ಸನ್ನಿಧಾನದಲ್ಲಿ ತೊಟ್ಟಿಲು ಪೂಜೆ, ಚಾಮರ ಸೇವೆ ಮತ್ತು ರಾತ್ರಿ ಪೂಜೆಗಳು ವೈಭವದಿಂದ ನಡೆಯಲಿವೆ.