ಕನ್ನಡಪ್ರಭ ವಾರ್ತೆ ಹಲಗೂರು
ಇಲ್ಲಿನ ಶ್ರೀನಡುಕೇರಿ ವೀರಭದ್ರೇಶ್ವರ ಸ್ವಾಮಿಯವರ 15ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ ಶುಕ್ರವಾರ ಬೆಳಗ್ಗೆ ಗುರುವಿನ ಪುರ ಮಠದ ಶ್ರೀಜಗದೀಶ ಶಿವಾಚಾರ್ಯ ಸ್ವಾಮಿಗಳು, ಧನಗೂರು ಮಠದ ಶ್ರೀ ಮುಮ್ಮಡಿ ದೇಶಿಕೇಂದ್ರ ಸ್ವಾಮಿಗಳು ಮತ್ತು ಪುರಿಗಾಲಿ ಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮಿಗಳು ಇವರ ದಿವ್ಯ ಸಮ್ಮುಖದಲ್ಲಿ ವೀರಭದ್ರ ಸ್ವಾಮಿ ದೇವಾಲಯದ ಪ್ರಧಾನ್ ಅರ್ಚಕ ವಿದ್ವಾನ್ ಪ್ರಸಾದ್ ಸಹಯೋಗದೊಂದಿಗೆ ಕಾರ್ಯಕ್ರಮಗಳು ಜರುಗಲಿವೆ.19ರ ಗುರುವಾರ ಸಂಜೆ 5 ಸಮಯದಲ್ಲಿ ಹಲಗೂರಿನ ಬೃಹನ್ಮಠದಿಂದ ಕುಂಭಮೇಳದೊಡನೆ ಜಗದೀಶ ಶಿವಾಚಾರ್ಯ ಸ್ವಾಮಿಗಳು ಹಾಗೂ ಧನಗೂರು ಮಠದ ಷಡಕ್ಷರ ಸ್ವಾಮೀಜಿ ಅವರನ್ನು ಮೆರವಣಿಗೆ ಮುಖಾಂತರ ವೀರಭದ್ರ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು.
ನಂತರ ಜಗದೀಶ ಶಿವಾಚಾರ್ಯ ಸ್ವಾಮೀಜಿ ಮಾತನಾಡುತ್ತಾ, ಗುರುವಾರ ಸಂಜೆಯಿಂದ ಸ್ವಾಮಿಯ ಅನುಜ್ಞೆ ಆಗ್ರೋದಕ ಪುಣ್ಯಾಹ, ಪಂಚಗವ್ಯ ಸಾಧನ, ದೇವನಾಂಧಿ ರಕ್ಷಾಬಂಧನ, ಋತ್ವಿಜಾಧಿಕಾರ ಸ್ವೀಕಾರ, ಗಣಪತಿ ಪೂಜೆ, ಪರಿವಾರ ದೇವತಾ ಪೂಜೆ, ನವಗ್ರಹ ಪೂಜೆ, ವಾಸ್ತು ರಾಕ್ಷೋಜ್ಞ ಪೂಜೆ ,ಲಘು ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು.20ರ ಶುಕ್ರವಾರ ತೃತೀಯ ಉತ್ತರಭಾದ್ರ ನಕ್ಷತ್ರ ಪ್ರಧಾನ ಕಳಶ ಸ್ಥಾಪನ, ಏಕದಶ ರುದ್ರ ಕಳಶ ಸ್ಥಾಪನ, ಪಂಚ ವಿಶಂತಿ ಕಳಶ ಸ್ಥಾಪನೆ, ಪಂಚಬ್ರಹ್ಮ ಕಳಶ ಸ್ಥಾಪನೆ, ಮಹಾ ರುದ್ರ ಅಭಿಷೇಕ, ರುದ್ರಪಾರಾಯಣ ಜಯಾದಿ ಹೋಮ, ಕಳಾ ಹೋಮ, ಪ್ರಧಾನ ಹೋಮ, ಮಹಾಪೂರ್ಣಾಹುತಿ, ಕುಂಭಾಭಿಷೇಕ, ಅಲಂಕಾರ, ಮಹಾಮಂಗಳಾರತಿ ರಜೋಪಚಾರ ಪೂಜೆ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಸ್ವಾಮೀಜಿ ವೀರಭದ್ರೇಶ್ವರ ಭಕ್ತ ಮಂಡಳಿ ಭಕ್ತರಿಗೆ ಕರೆ ನೀಡಿದರು.
ವೀರಶೈವ ಸಮಾಜದ ಪಾಲಾಕ್ಷಪ್ಪ, ಶೆಟ್ರು ಸರ್ವೇಶ ಮಹದೇವಸ್ವಾಮಿ (ರವಿ ನಾಗೇಶ ,ಶಿವಕುಮಾರ್ (ಪುಟ್ಟ )ಪ್ರಧಾನ ಅರ್ಚಕರಾದ ನಾಗರಾಜಪ್ಪ ಮತ್ತು ಮುಖಂಡರಾದ ವಿರೂಪಾಕ್ಷಪ್ಪ, ನಾಗೇಂದ್ರ, ಅಶೋಕ, ಕೆ.ಎಂ.ಮಧು, ಎಚ್. ಆರ್.ವಿಶ್ವ, ಕೆ.ಪಿ.ರವಿ, ಅಭಿ, ಅಡ್ಡೆ ಪ್ರಕಾಶ, ಸತೀಶ ಸೇರಿದಂತೆ ಇತರರು ಪಾಲ್ಗೊಂಡಿದ್ದರು.