ಇಂದು ಸಿದ್ಧಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವ

| Published : Mar 06 2024, 02:21 AM IST

ಸಾರಾಂಶ

ಸಿದ್ಧಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲೆಯ ಐವರು ಸಾಧಕರಿಗೆ ಮಾ.6 ರಂದು ಬುಧವಾರ ಸಿದ್ಧ ಬಸವಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲದ ಗಡ್ಡೇಬಸವೇಶ್ವರ ದೇವಸ್ಥಾನದ ಮಹಾತಪಸ್ವಿ ಸಿದ್ಧಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲೆಯ ಐವರು ಸಾಧಕರಿಗೆ ಮಾ.6 ರಂದು ಬುಧವಾರ ಸಿದ್ಧ ಬಸವಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಕೋಡಾಲದ ಸಿದ್ಧಲಿಂಗ ಶಿವಯೋಗಿಗಳು ಸಂಸ್ಥಾನದ ಪೀಠಾಧಿಪತಿ ಪಂಚಮಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ವರ್ಷದಿಂದ ನೀಡಲಾಗುತ್ತಿರುವ ಪ್ರಶಸ್ತಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಪ್ರಖ್ಯಾತ ವೈದ್ಯೆ ಡಾ. ಸಂಗಮ್ಮ ವೀರಬಸವಂತರೆಡ್ಡಿ ಮುದ್ನಾಳ, ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾಪೂರ, ಯೋಗಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ. ಸಂಗೀತಾ ಅಶೋಕ ಗೌಳಿ, ಸಂಗೀತ ಕ್ಷೇತ್ರದಿಂದ ಹಿರಿಯ ಗಾಯಕ ಶರಣಕುಮಾರ ವಠಾರ, ಕ್ರೀಡಾ ಕ್ಷೇತ್ರದಿಂದ ಪಲ್ಲವಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಂದು ಸಂಜೆ ಕೋಡಾಲಪುರ ಉತ್ಸವದ ಅಂಗವಾಗಿ ನಡೆಯುತ್ತಿರುವ ಪ್ರವಚನ ಕಾರ್ಯಕ್ರಮದ ಮಂಗಲ ಸಮಾರಂಭದಲ್ಲಿ ಖೇಳಗಿಯ ಶಿವಲಿಂಗ ಮಹಾಸ್ವಾಮಿಗಳು ಹಾಗೂ ಹೆಡಗಿಮದ್ರಾದ ಶಾಂತಶಿವಯೋಗೀಶ್ವರ ಮಠದ ಶಾಂತಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಶಾಸಕರುಗಳಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ಮಾಜಿ ಶಾಸಕರುಗಳಾದ ವೆಂಕಟರೆಡ್ಡಿ ಮುದ್ನಾಳ, ಡಾ. ವೀರಬಸವಂತರೆಡ್ಡಿ ಮುದ್ನಾಳ, ಡಾ. ಎ.ಬಿ. ಮಾಲಕರೆಡ್ಡಿ, ಮುಖಂಡರಾದ ಹನುಮೇಗೌಡ ಬೀರನಕಲ್, ಡಾ. ಎಸ್.ಬಿ. ಕಾಮರೆಡ್ಡಿ, ಬಸ್ಸುಗೌಡ ಬಿಳ್ಹಾರ, ಬಸವರಾಜ ಸೊನ್ನದ, ಡಾ. ಸಿದ್ಧರಾಜರೆಡ್ಡಿ, ಮಂಜುಳಾ ಗೂಳಿ, ನಾಮದೇವ ವಾಟ್ಕರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.