ಇಂದು ಬೆಳ್ತಂಗಡಿ ಧರ್ಮಪ್ರಾಂತ್ಯ ನೂತನ ಧರ್ಮಾಧ್ಯಕ್ಷರ ಪದಗ್ರಹಣ

| Published : Nov 05 2025, 01:03 AM IST

ಇಂದು ಬೆಳ್ತಂಗಡಿ ಧರ್ಮಪ್ರಾಂತ್ಯ ನೂತನ ಧರ್ಮಾಧ್ಯಕ್ಷರ ಪದಗ್ರಹಣ
Share this Article
  • FB
  • TW
  • Linkdin
  • Email

ಸಾರಾಂಶ

ಅತೀ ವಂದನೀಯ ಮಾರ್ ಜೇಮ್ಸ್ ಪಟೇರಿಲ್ ಅವರ ಧರ್ಮಾಧ್ಯಕ್ಷ ದೀಕ್ಷೆ ಹಾಗೂ ಅಧಿಕಾರ ಸ್ವೀಕಾರ ಸಮಾರಂಭ ಬುಧವಾರ ಬೆಳ್ತಂಗಡಿ ಸೈಟ್ ಲಾರೆನ್ಸ್ ಪ್ರಧಾನ ದೇವಾಲಯಲ್ಲಿ ನಡೆಯಲಿದೆ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ನೂತನ ಧರ್ಮಾಧ್ಯಕ್ಷರಾಗಿ ಆಯ್ಕೆಯಾಗಿರುವ ಅತೀ ವಂದನೀಯ ಮಾರ್ ಜೇಮ್ಸ್ ಪಟೇರಿಲ್ ಅವರ ಧರ್ಮಾಧ್ಯಕ್ಷ ದೀಕ್ಷೆ ಹಾಗೂ ಅಧಿಕಾರ ಸ್ವೀಕಾರ ಸಮಾರಂಭ ಬುಧವಾರ ಬೆಳ್ತಂಗಡಿ ಸೈಟ್ ಲಾರೆನ್ಸ್ ಪ್ರಧಾನ ದೇವಾಲಯಲ್ಲಿ ನಡೆಯಲಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅ.ವಂ. ಜೋಸೆಫ್ ವಲಿಯಪರಂಬಿಲ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಸಮಾರಂಭದಲ್ಲಿ ಸೀರೋ ಮಲಬಾರ್ ಧರ್ಮಸಭೆಯ ಮಹಾ ಧರ್ಮಾಧ್ಯಕ್ಷ ಅ.ವಂ. ರಾಫೇಲ್ ತಟ್ಟಿಲ್, ತಲಶೇರಿ ಆರ್ಚ್ ಬಿಷಪ್ ಅ.ವಂ. ಡಾ ಜೋಸೆಫ್ ಪಾಂಪ್ಲಾನಿ, ಬೆಂಗಳೂರಿನ ಮೆಟ್ರೋಪಾಲಿಟನ್ ಆರ್ಚ್ ಬಿಷಪ್ ಅ.ವಂ. ಡಾ. ಪೀಟರ್ ಮಚಾದೊ, ಕ್ಯಾಥೋಲಿಕ್ ಬಿಷನ್ಸ್ ಕಾನ್ಸಲೆನ್ಸ್ ಆಫ್ ಇಂಡಿಯಾ ಅಧ್ಯಕ್ಷ ಅ.ವಂ. ಆಂಡ್ರೂಸ್ ತಾಯತ್, ಅಪೋಸ್ಟೋಲಿಕ್ ನುನ್ಸಿಯೊ ಅವರ ಉಪ ಮುಖ್ಯಸ್ಥ ಅ.ವಂ ಅಂಡ್ರಿಯಾ ಫ್ರಾನ್ಸಿಯಾ, ಮತ್ತು ಕ್ಲಾರೆಟಿಯನ್ಸ್ ನ ಸುಪೀರಿಯರ್ ಜನರಲ್, ಮ್ಯಾಥ್ಯೂ ವೆಟ್ಟಿ ಮಟ್ಟಮ್ (ಸಿಎಂಎಫ್) , ಹಾಗೂ ಭಾರತದಾದ್ಯಂತದ ಇರುವ ಸುಮಾರು 44 ಧರ್ಮಾಧ್ಯಕ್ಷರುಗಳು ಹಾಗೂ ಧರ್ಮಗುರುಗಳು ಧರ್ಮಭಗಿನಿಯರು ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.ಧರ್ಮಾಧ್ಯಕ್ಷ ದೀಕ್ಷೆಯು ಒಂದು ಪವಿತ್ರ ಧಾರ್ಮಿಕ ಆಚರಣೆಯಾಗಿದ್ದು ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕ್ಯಥೆಡ್ರಿಲ್ ಚರ್ಚ್ ನಲ್ಲಿ ನಡೆಯಲಿದ್ದು ಬಳಿಕ ಹೊಸ ಧರ್ಮಾಧ್ಯಕ್ಷರಾಗಿ ಅಧಿಕಾರ‌ ಸ್ವೀಕರಿಸುತ್ತಿರುವ ಅ.ವಂ. ಜೇಮ್ಸ್ ಪಟ್ರೇರಿಲ್ ಮತ್ತು ನಿವೃತಿಗೊಳ್ಳುತ್ತಿರುವ ಅ.ವಂ. ಲಾರೆನ್ಸ್ ಮುಕ್ಕುಯಿಯವರಿಗೂ ಶುಭಕೋರಲು ಒಂದು ಸಾರ್ವಜನಿಕ ಸಮ್ಮೇಳನವು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ತಮದಲ್ಲಿ ವಿವಿಧ ಮುಖಂಡರುಗಳು ಭಾಗಿಗಳಾಗಲಿದ್ದಾರೆ ಎಂದು ತಿಳಿಸಿದರು.ಲಾರೆನ್ಸ್ ಮುಕ್ಕುಯಿ ಕಳೆದ 26 ವರ್ಷಗಳಿಂದ ಧರ್ಮಪ್ರಾಂತ್ಯ ಮುನ್ನಡೆಸುತ್ತಿದ್ದು ಅವರು ಈಗ ನಿವೃತ್ತಿಗೊಳ್ಳುತ್ತಿದ್ದಾರೆ. ಕಳೆದ 26ವರ್ಷಗಳಲ್ಲಿ ದೇವರು ಪರಮಪೂಜ್ಯ ಲಾರೆನ್ಸ್ ರವರ ಮೂಲಕ ಈ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ಈ ನಾಡಿನ ಜನತೆಗೆ ನೀಡಿದ ಎಲ್ಲ ಅನುಗ್ರಹಗಳಿಗೆ ಧರ್ಮಪ್ರಾಂತ್ಯವು ಚಿರ ಋಣಿಯಾಗಿದೆ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರ ಕೊಡುಗೆ ಅಪಾರವಾದುದ್ದು. ಅದರಲ್ಲೂ ಪ್ರಧಾನವಾಗಿ ಶಿಕ್ಷಣ, ಆರೋಗ್ಯ ಮತ್ತು ಸಮುದಾಯ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾಡಿದ ಕೊಡುಗೆ ಅದ್ವಿತೀಯವಾಗಿದೆ ಎಂದು ಅವರು ನೆನೆಸಿದರು.ನಿವೃತ್ತರಾಗುವ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿಯವರು ಬೆಳ್ತಂಗಡಿ ಲಾಯಿಲದಲ್ಲಿರುವ ವಿಯಾನ್ನಿ ಸದನದಲ್ಲಿ ನಿವೃತ್ತಿ ಜೀವನವನ್ನು ಕಳೆಯಲಿದ್ದಾರೆ ಎಂದು ತಿಳಿಸಿದರು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ಸುನಿಲ್ ಐಸಾಕ್ ಮಾಹಿತಿಗಳನ್ನು ನೀಡಿದರು, ಮಾದ್ಯಮ ಸಮಿತಿ ಸದಸ್ಯರುಗಳಾದ ಜೈಸನ್ ಪಟ್ಟೇರಿ, ಐವನ್ ಆಲ್ವಿನ್ ಉಪಸ್ಥಿತರಿದ್ದರು.