ಕನ್ನಡಪ್ರಭ ವಾರ್ತೆ ದಾವಣಗೆರೆ
ಕನಕ ದಾಸರ ಸಾಹಿತ್ಯ ಕುರಿತು ಮುತ್ತು ಬಂದಿದೆ ಕೇರಿಗೆ ನೃತ್ಯರೂಪಕದ ಪ್ರದರ್ಶನವು ಪ್ರತಿಮಾ ಸಭಾ, ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಜೂ.17ರಂದು ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಪ್ರತಿಮಾ ಸಭಾ ಅಧ್ಯಕ್ಷ, ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ತಿಳಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 7.30ಕ್ಕೆ ಸಭಾದ ಗೌರವಾಧ್ಯಕ್ಷ ಎಸ್.ಹಾಲಪ್ಪ ಅಧ್ಯಕ್ಷತೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೃತ್ಯ ರೂಪಕ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ.ಶೇಖರ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ತಂಡದ ಪರ ನೃತ್ಯರೂಪಕದ ರೂವಾರಿ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಸಾಹಿತಿ ಡಾ. ಕಾ.ತ.ಚಿಕ್ಕಣ್ಣ, ಸಂಘಟಕ ಡಾ.ಶ್ರೀನಿವಾಸ ಜಿ.ಕಪ್ಪಣ್ಣನವರಿಗೆ ಗೌರವಾರ್ಪಣೆ ಮಾಡಲಾಗುವುದು. ಶ್ರೀ ಬೀರೇಶ್ವರ ದೇವಸ್ಥಾನ ಜಾಗದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ, ಮಾಜಿ ಮೇಯರ್ ಎಚ್.ಬಿ. ಗೋಣೆಪ್ಪ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಜಿ.ಗಣೇಶಪ್ಪ, ಜಿಲ್ಲಾ ಕನಕ ನೌಕರರ ಬಳಗದ ಅಧ್ಯಕ್ಷ ಶಿವಾನಂದ ದಳವಾಯಿ ಭಾಗವಹಿಸುವರು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ವಿದ್ವಾನ್ ಆನಂದ ಪಾಟೀಲ ಮತ್ತು ತಂಡದಿಂದ ದಾಸಶ್ರೇಷ್ಠರ ತತ್ವಪದ ಗಾಯನ ಇರುತ್ತದೆ. ಕನಕದಾಸರದು ಬಹುತ್ವದ ವ್ಯಕ್ತಿತ್ವ. ತಮ್ಮ 4 ಕಾವ್ಯ, 350ಕ್ಕೂ ಹೆಚ್ಚು ಕೀರ್ತನೆಗಳ ಮೂಲಕ ಕನ್ನಡ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪೂರ್ವ ಎಂದರು.ಬೆಂಗಳೂರಿನ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ವಿಶೇಷ ನೃತ್ಯರೂಪಕ ಸಿದ್ಧಪಡಿಸಿದ್ದು, ಕನಕದಾಸರ ಮಹತ್ವದ ಕೀರ್ತನೆ, ಕಾವ್ಯ ಭಾಗ, ತತ್ವಾದರ್ಶಗಳನ್ನು ಜನತೆಗೆ ತಲುಪಿಸುವುದು ಕಾರ್ಯಕ್ರಮದ ಉದ್ದೇಶ. ಸ್ನೇಹಾ ಕಪ್ಪಣ್ಣ ನೃತ್ಯ ಸಂಯೋಜನೆ, ಡಾ.ಪ್ರವೀಣ ಡಿ.ರಾವ್ ಸಂಗೀತ ಸಂಯೋಜನೆ, ಕಾ.ತ.ಚಿಕ್ಕಣ್ಣನವರ ಪರಿಕಲ್ಪನೆ ಮತ್ತು ಸಾಹಿತ್ಯ ಒಳಗೊಂಡ ಭ್ರಮರಿ ಡ್ಯಾನ್ಸ್ ರೆಪರ್ಟರಿ ಕಲಾವಿದರು ನೃತ್ಯರೂಪಕ ಪ್ರಸ್ತುತಪಡಿಸುವರು ಎಂದು ಮಾಹಿತಿ ನೀಡಿದರು.
ಪ್ರತಿಮಾ ಸಭಾ ಪ್ರಧಾನ ಕಾರ್ಯದರ್ಶಿ, ನಗರವಾಣಿ ಸಹ ಸಂಪಾದಕ ಬಿ.ಎನ್.ಮಲ್ಲೇಶ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಸಭಾದ ಜಿ.ಎಸ್.ಶಂಕರ, ಎನ್.ಟಿ.ಮಂಜುನಾಥ, ಹಿರಿಯ ಲೇಖಕಿ ಟಿ.ಶೈಲಜಾ, ಕುರುಬ ಸಮಾಜದ ಮುಖಂಡರಾದ ಎಸ್.ಎಸ್.ಗಿರೀಶ, ಕೆ.ರೇವಣ್ಣ, ವಿದುಷಿ ಮಾಧವಿ ಗೋಪಾಲಕೃಷ್ಣ, ಗೋಪಾಲಕೃಷ್ಣ ಇತರರು ಇದ್ದರು.
- - -
(ಟಾಪ್ ಕೋಟ್)ಪ್ರತಿಭಾ ಸಭಾದಿಂದ ಕಳೆದೊಂದು ವರ್ಷದಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಕುರಿತ ಕಾರ್ಯಕ್ರಮ, ಪರಂಪರೆ ಬೆಳೆಸುವಲ್ಲಿ ಕಳೆದ ಐದು ದಶಕದಿಂದಲೂ ಪ್ರತಿಮಾ ಸಭಾ ಕೆಲಸ ಮಾಡುತ್ತಿದೆ. - ಬಿ.ಎನ್.ಮಲ್ಲೇಶ, ಪ್ರಧಾನ ಕಾರ್ಯದರ್ಶಿ, ಪ್ರತಿಮಾ ಸಭಾ.- - -
-16ಕೆಡಿವಿಜಿ8: