ಇಂದು, ನಾಳೆ ಧಾರವಾಡದಲ್ಲಿ ಸುವರ್ಣ ಶಿಕ್ಷಣ ಮೇಳ

| Published : Jan 25 2025, 01:00 AM IST

ಇಂದು, ನಾಳೆ ಧಾರವಾಡದಲ್ಲಿ ಸುವರ್ಣ ಶಿಕ್ಷಣ ಮೇಳ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಸೆಸ್ಸೆಲ್ಸಿ ನಂತರದಲ್ಲಿ ಮುಂದೇನು? ಎಂಬುದು ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಪ್ರಶ್ನೆಯಾಗಿ ಉಳಿಯುತ್ತದೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಹಲವು ಪ್ರಶ್ನೆಗಳಿಗೆ ಈ ಮೇಳದಲ್ಲಿ ಶಿಕ್ಷಣ ಸಂಸ್ಥೆಗಳು ತಕ್ಕುದಾದ ಉತ್ತರ ನೀಡಲಿವೆ.

ಧಾರವಾಡ:

"ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ " ವಿದ್ಯಾಕಾಶಿ ಧಾರವಾಡದಲ್ಲಿ ಸುವರ್ಣ ಶಿಕ್ಷಣ ಹೆಸರಿನಲ್ಲಿ ಅತೀ ದೊಡ್ಡ ಮೇಳ ಆಯೋಜಿಸಿವೆ.

ಜ. 25 ಹಾಗೂ 26ರಂದು ಇಲ್ಲಿಯ ಮುಗದುಮ್‌ ಆನಂದ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ನಡೆಯಲಿರುವ ಈ ಮೇಳದಲ್ಲಿ 50ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಒಂದೇ ಸೂರಿನಲ್ಲಿ ಭಾಗವಹಿಸುತ್ತಿದ್ದು, ಹು-ಧಾ ಅವಳಿ ನಗರದ ಕಾಲೇಜು ವಿದ್ಯಾರ್ಥಿಗಳನ್ನು ಈ ಮೇಳವು ಕೈ ಬೀಸಿ ಕರೆಯುತ್ತಿದೆ.

ಎಸ್ಸೆಸ್ಸೆಲ್ಸಿ ನಂತರದಲ್ಲಿ ಮುಂದೇನು? ಎಂಬುದು ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಪ್ರಶ್ನೆಯಾಗಿ ಉಳಿಯುತ್ತದೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಹಲವು ಪ್ರಶ್ನೆಗಳಿಗೆ ಈ ಮೇಳದಲ್ಲಿ ಶಿಕ್ಷಣ ಸಂಸ್ಥೆಗಳು ತಕ್ಕುದಾದ ಉತ್ತರ ನೀಡಲಿವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಲಾಭ ಪಡೆಯುವ ನಿರೀಕ್ಷೆ ಇದೆ.

ಅಮಿತಿ ಯುನಿವರ್ಸಿಟಿ, ಎಕ್ಸ್‌ಲೆಂಟ್‌ ನೀಟ್‌ ಅಕಾಡೆಮಿ, ಅಣ್ಣಿಗೇರಿ ಸೇವಾ ಟ್ರಸ್ಟ್‌, ಐಎಂಜೆ ಇನ್‌ಸ್ಟಿಟ್ಯೂಶನ್ಸ್‌, ಕಾರ್ಮಿಕ ಇಲಾಖೆ ಸೇರಿದಂತೆ ಧಾರವಾಡ ಹಲವು ಸಂಸ್ಥೆಗಳು ಈ ಮೇಳಕ್ಕೆ ಕೈ ಜೋಡಿಸಿವೆ.

ಮೇಳವನ್ನು ಜ. 25ರಂದು ಬೆಳಗ್ಗೆ 10ಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್‌ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು, ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ, ಕರ್ನಾಟಕ ವಿವಿ ಪ್ರಭಾರಿ ಕುಲಪತಿ ಡಾ. ಜಯಶ್ರೀ, ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌. ಕೆಳದಿಮಠ, ಪದವಿ ಪೂರ್ವ ಇಲಾಖೆ ಉಪ ನಿರ್ದೇಶಕ ಕೆ.ಪಿ. ಸುರೇಶ ಹಾಗೂ ನಟಿ ಶರಣ್ಯಾ ಶೆಟ್ಟಿ ಭಾಗವಹಿಸಲಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮುಖ್ಯ ಸಂಪಾದಕ ಅಜಿತ ಹನಮಕ್ಕನವರ ಅಧ್ಯಕ್ಷತೆ ವಹಿಸಲಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ರಾಜಕೀಯ ವಿಶ್ಲೇಷಕ ಪ್ರಶಾಂತ ನಾತು, ನಟ, ನಿರ್ದೇಶಕ ಯಶವಂತ್‌ ಸರದೇಶಪಾಂಡೆ ಹಾಗೂ ವಾಗ್ಮಿಗಳಾದ ಮಹೇಶ ಮಾಶಾಳ ಉಪಸ್ಥಿತಿ ಇರಲಿದೆ.