ಇಂದು ವಿಶ್ವಾರಾಧ್ಯ ಶಿವಾಚಾರ್ಯರಿಗೆ-ಶಿವಾಚಾರ್ಯ ರತ್ನ, ಸಂತೋಷಗೆ-ಸೇವಾರತ್ನ, ಚನ್ನಮಲ್ಲಿಕಾರ್ಜುನಗೆ-ಮಾಧ್ಯಮ ಭೂಷಣ, ಆರ್‌.ಟಿ.ಪ್ರಶಾಂತಗೆ-ಧರ್ಮ ವಿಭೂಷಣ ಪ್ರಶಸ್ತಿ ಪ್ರದಾನ

| Published : Dec 22 2024, 01:31 AM IST

ಇಂದು ವಿಶ್ವಾರಾಧ್ಯ ಶಿವಾಚಾರ್ಯರಿಗೆ-ಶಿವಾಚಾರ್ಯ ರತ್ನ, ಸಂತೋಷಗೆ-ಸೇವಾರತ್ನ, ಚನ್ನಮಲ್ಲಿಕಾರ್ಜುನಗೆ-ಮಾಧ್ಯಮ ಭೂಷಣ, ಆರ್‌.ಟಿ.ಪ್ರಶಾಂತಗೆ-ಧರ್ಮ ವಿಭೂಷಣ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಬಿಸನಳ್ಳಿ ಗ್ರಾಮದಲ್ಲಿ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಡಿ.22 ರಂದು ನಡೆಯುವ ವೀರಶೈವ ಅಷ್ಟಾವರಣ ವಿಜ್ಞಾನ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಬಿಸನಳ್ಳಿ ಗ್ರಾಮದಲ್ಲಿ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ ಲೋಕ ಕಲ್ಯಾಣಾರ್ಥ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಡಿ.22 ರಂದು ನಡೆಯುವ ವೀರಶೈವ ಅಷ್ಟಾವರಣ ವಿಜ್ಞಾನ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಹಿರೇಮಣಕಟ್ಟಿ ಮುರುಘೇಂದ್ರಮಠದ ವಿಶ್ವಾರಾಧ್ಯ ಶಿವಾಚಾರ್ಯರಿಗೆ-ಶಿವಾಚಾರ್ಯ ರತ್ನ, ಯುವ ಉದ್ಯಮಿ ಸಂತೋಷ ಕಬ್ಬಿನಕಂತಿಮಠಗೆ-ಸೇವಾರತ್ನ, ಹಿರಿಯ ಪತ್ರಕರ್ತ ಚನ್ನಮಲ್ಲಿಕಾರ್ಜುನ ಹದಡಿಗೆ-ಮಾಧ್ಯಮ ಭೂಷಣ, ದಾವಣಗೇರೆ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಆರ್‌.ಟಿ.ಪ್ರಶಾಂತ ದುಗ್ಗತ್ತಿಮಠಗೆ-ಧರ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಭಗತ್ಪಾದರು ಸಾನ್ನಿಧ್ಯ, ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವರಾದ ವಿಶ್ವನಾಥ ಹಿರೇಮಠ, ಇಂಜನಿಯರ್‌ ಪ್ರಕಾಶ ಶಿವಮೂರ್ತೆಪ್ಪ ಯಲಿಗಾರ, ಅಖಿಲ ಭಾರತ ವೀರಶೈವ ಮಹಾಸಭಾ ನ್ಯಾಯವಾದಿಗಳ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಜಿ. ರಾಗಿ, ಉನ್ನತ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ವಿಶ್ವನಾಥ ಕಂಬಾಳಿಮಠ, ಡಾ.ಅಶ್ವಿನಿ ವಸ್ತ್ರದ, ಡಾ.ಗುಹೇಶ್ವರ ಪಾಟೀಲ, ಗುತ್ತಿಗೆದಾರ ನಾಗರಾಜ ಜವಾಯಿ ಸೇರಿದಂತೆ ಗಣ್ಯ ಮುಖಂಡರು ಭಾಗವಹಿಸುವರು.