ಸಾರಾಂಶ
ಕನ್ನಡಪ್ರಭವಾರ್ತೆ ಮೂಲ್ಕಿ
ಯುವಜನತೆ ಹಾಗೂ ವಿದ್ಯಾರ್ಥಿಗಳು ತಮ್ಮ ದುಶ್ಟಟದಿಂದ ದೂರವಿದ್ದು, ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಬೇಕು ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮ ಚಂದ್ರಶೇಖರ್ ಹೇಳಿದರು.10ನೇ ತೋಕೂರು ಲೈಟ್ ಹೌಸ್‌ನ ಫೇಮಸ್ ಯೂತ್ ಕ್ಲಬ್‌ನ ಸಭಾಭವನದಲ್ಲಿ ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ 10ನೇ ತೋಕೂರು ಆಶ್ರಯದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಮಂಗಳೂರು , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಪೂಜಾ ಎರೇಂಜರ್ಸ್ ಮತ್ತು ಪೂಜಾ ಫ್ರೆಂಡ್ಸ್ ಹಳೆಯಂಗಡಿ, ಗ್ರಾಮ ಪಂಚಾಯಿತಿ ಪಡುಪಣಂಬೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್ ಸಹಯೋಗದಲ್ಲಿ ಸಾರ್ವಜನಿಕ ದಂತ ಆರೋಗ್ಯ ವಿಭಾಗ ಎ. ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ನಿಟ್ಟೆ ಮಹಾವಿದ್ಯಾಲಯ ಮಂಗಳೂರು, ಡಾ. ಎಂ. ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ತೋಕೂರು ತಪೋವನ, ಇಂಟರಾಕ್ಟ್ ಕ್ಲಬ್, ಸ್ಕೌಟ್ಸ್ ಗೈಡ್ಸ್, ರೆಡ್ ಕ್ರಾಸ್ ನ ಸಹಕಾರದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಜರುಗಿದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷ ಸುಧಾಕರ ಸಾಲ್ಯಾನ್, ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ದಂತ ವೈದ್ಯಾಧಿಕಾರಿ ಸಹನಾ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್ ನ ವೈದ್ಯಾದಿಕಾರಿ ಡಾ. ಅನ್ಸಿಲ್ಲಾ ಪತ್ರಾವೊ, ಡಾ. ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆ ತಪೋವನ, ತೋಕೂರುನ ಶಿಕ್ಷಕಿ ಜ್ಯೋತಿ ಬಂಜನ್, ಯುವಜನ ಮತ್ತು ಕ್ರೀಡಾ ಇಲಾಖೆ ಯುವ ಪರಿವರ್ತಕ ಪ್ರೀತೇಶ್, ಆಲ್ ಇಂಡಿಯಾ ಡಿಮ್ಯಾಟ್ ಅಕೌಂಟ್ ಇಂಪಿರಿಯಲ್ ಕಾರ್ಪೊರೇಷನ್ ನ ಮುಖ್ಯಸ್ಥ ಸುಭಾಷ್ ಶೆಟ್ಟಿ, ಯುವ ಫೇಮಸ್ ಯೂತ್ ಕ್ಲಬ್ ನ ಮಹಿಳಾ ಅಧ್ಯಕ್ಷೆ ಪ್ರೇಮಲತಾ ಯೋಗೀಶ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ತಂಬಾಕು ಸೇವನೆಯ ದುಶ್ಚಟದ ಕುರಿತಾಗಿ ಬೀದಿ ನಾಟಕವನ್ನು ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನೆರವೇರಿಸಿ ಕೊಟ್ಟರು. ಅನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಗ್ರಾಮಸ್ಥರಿಗೆ ಬಿಪಿ ಶುಗರ್ ಟೆಸ್ಟ್ ಗಳನ್ನು ಮಾಡಲಾಯಿತು. ಸಾರ್ವಜನಿಕರಿಗೆ ಉಚಿತವಾಗಿ ದಂತ ತಪಾಸಣೆ ಮತ್ತು ಚಿಕಿತ್ಸೆ ಹಾಗೂ ಔಷಧಿಗಳನ್ನು ವಿತರಿಸಲಾಯಿತು. ಸುಭಾಷ್ ಶೆಟ್ಟಿಯವರು ಡಿಮ್ಯಾಟ್ ಅಕೌಂಟ್ ನ ಬಗ್ಗೆ ಮಾಹಿತಿಯನ್ನು ನೀಡಿದರು. ಅಧ್ಯಕ್ಷ ಭಾಸ್ಕರ್ ಅಮೀನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಹಿಮಕರ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.