ಸಾರಾಂಶ
- ಶ್ರೀ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರರ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ವರ್ಷದ ಹಿಂದೆ ನಿರ್ಮಿಸಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ಪ್ರಥಮ ವರ್ಷದ ಗುರು ಪೂರ್ಣಿಮೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.೨೧ರಂದು ಮುಂಜಾನೆ ಬ್ರಾಹೀ ಮುಹೂರ್ತದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿಕೆರೆ ಮಠದ ಶ್ರೀ ಜಗದ್ಗುರು ವೀರ ಗಂಗಾಧರೇಶ್ವರ ಮಾನಸ ಪುತ್ರರಾದ ಶ್ರೀ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ೪:೩೦ರಿಂದ ೯:೩೦ ರವರೆಗೆ ಗಣಹೋಮ ಹಾಗೂ ಗುರು ಹೋಮವನ್ನು ಶ್ರೀ ಸಾಯಿ ಬಾಬಾ ಮೂರ್ತಿಗೆ ಹಾಲಿನ ಅಭಿಷೇಕ, ಶ್ರೀ ಸಾಯಿ ಸತ್ಯನಾರಾಯಣ ಹಾಗೂ ನವಗ್ರಹ ಪೂಜೆ ಮಾಡಲಾಗುವುದು.
ಬೆಳಗ್ಗೆ ೧೦:೩೦ರಿಂದ ಬಾಬಾ ಉತ್ಸವ ಮೂರ್ತಿ ಮೆರವಣಿಗೆಯನ್ನು ಶ್ರೀ ವೀರಭಧ್ರೇಶ್ವರ ಭಕ್ತ ಮಂಡಳಿಯಿಂದ ಸಮಾಳ, ನಾಸಿಕ್ ಡೋಲು ವಾದ್ಯಗಳ ಮುಖಾಂತರ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ೧೨:೩೦ರಿಂದ ಶ್ರೀ ಸಾಯಿಬಾಬಾ ಮಂಗಳಾರತಿ ನಂತರ ೧೧:೩೦ ರಿಂದ ಮಹಾಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ೬:೩೦ರಿಂದ ಧೂಪಾರತಿ ರಾತ್ರಿ ೯:೩೦ ರಿಂದ ತೇಜ ಆರತಿ ಇರುತ್ತದೆ ಎಂದು ಶಿರಡಿ ಸಾಯಿ ಬಾಬಾ ಚಾರಿಟಬಲ್ ಟ್ರಸ್ಟ್ ತಿಳಿಸಿದೆ.ವಿಶಾಲವಾದ ಸ್ಥಳದಲ್ಲಿ ನಿರ್ಮಿಸಿರುವ ದೇಗುಲದಲ್ಲಿ ಸಾಯಿಬಾಬಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಅಭಿವೃದ್ಧಿ ಕಾರ್ಯಗಳು ನಿರಂತರ ನಡೆಸಲಾಗುತ್ತಿದೆ. ಪ್ರತಿದಿನ ಆಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರತಿದಿನ ೩ ಹೊತ್ತು ಆರತಿ ಪೂಜೆ ನಡೆಯುವ ಈ ದೇಗುಲಕ್ಕೆ ಪ್ರತಿ ಗುರುವಾರ ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ, ಜಗಳೂರು ತಾಲೂಕುಗಳಿಂದ ಸಾವಿರರು ಭಕ್ತರು ಆಗಮಿಸಿ, ಪೂಜೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಭಕ್ತರು ಇರುವ ಈ ದೇಗುಲದಲ್ಲಿ ಬೆಳಗ್ಗೆ ಪ್ರಸಾದ ವ್ಯವಸ್ಥೆ, ಸಂಜೆ ಪಲ್ಲಕ್ಕಿ ಉತ್ಸವದ ನಂತರ ೧ ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆರಂಭದಿಂದ ಇಲ್ಲಿಯವರೆಗೂ ಪ್ರತಿದಿನ ಸಾಯಿಬಾಬಾ ಮಂದಿರದಲ್ಲಿ ಭಜನೆ ನಡೆಯುತ್ತಿದೆ.
ಸೊಕ್ಕೆ ಗ್ರಾಪಂ ಮಾಜಿ ಅಧ್ಯಕ್ಷೆ ಹಾಗೂ ದಿಶಾ ಸಮಿತಿ ಸದಸ್ಯೆ ಸ್ವಾತಿ ತಿಪ್ಪೇಸ್ವಾಮಿ ಕಾರ್ಯಕ್ರಮ ಕುರಿತು ಪ್ರತಿಕ್ರಿಯಿಸಿದ್ದು, ತಂದೆ ಹಾಗೂ ಪ್ರೊಫೆಸರ್ ತಿಪ್ಪೇಸ್ವಾಮಿ ಅವರ ಆಸೆಯಂತೆ ಸ್ವಂತ ಗ್ರಾಮವಾದ ಸೊಕ್ಕೆಯಲ್ಲಿ ಸಾಯಿಬಾಬಾ ಮಂದಿರ ನಿರ್ಮಾಣ ಮಾಡಲಾಗಿದೆ. ಬಹಳ ವರ್ಷಗಳ ಅವರ ಕನಸು ನೆರವೇರಿದೆ. ಹಾಗಾಗಿ ಪ್ರಥಮ ವರ್ಷದ ಗುರು ಪೂರ್ಣಿಮೆ ಪೂಜೆ, ಹೋಮ ಹವಾನದಿಗಳನ್ನು ಕೈಗೊಳ್ಳಲಾಗುತ್ತಿದೆ. ಶ್ರೀ ಶಿರಡಿ ಸಾಯಿಬಾಬಾ ದೇವರ ದರ್ಶನವನ್ನು ಭಕ್ತರು ಪಡೆದು, ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.- - - -19ಜಿಎಲ್ಆರ್01:
ಸೊಕ್ಕೆ ಗ್ರಾಮದಲ್ಲಿ ಪ್ರಥಮ ವರ್ಷದ ಗುರು ಪೂರ್ಣಿಮೆ ಕಾರ್ಯಕ್ರಮಗಳ ಹಿನ್ನೆಲೆ ಶೃಂಗಾರಗೊಳ್ಳುತ್ತಿರು ಶ್ರೀ ಶಿರಡಿ ಸಾಯಿಬಾಬಾ ಮಂದಿರ. -19ಜಿಎಲ್ಆರ್02: ಸೊಕ್ಕೆ ಗ್ರಾಮದ ಪವಾಡ ಪುರುಷ ಶ್ರೀ ಶಿರಡಿ ಸಾಯಿಬಾಬಾ ಮೂರ್ತಿ.