ಸಾರಾಂಶ
ಶುಕ್ರವಾರ ಮಧ್ಯರಾತ್ರಿ ವೇಳೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡಿನ ಸತೀಶ್ ಪೂಜಾರಿ ಅವರ ಮನೆ ಮೇಲೆ ದೊಡ್ಡ ಮರ ಬಿದ್ದು ಅಪಾರ ಹಾನಿ ಸಂಭವಿಸಿದ್ದು ಮನೆಯವರು ಪಾರಾಗಿದ್ದಾರೆ.
ಮೂಲ್ಕಿ: ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಬೀಸಿದ ಸುಂಟರಗಾಳಿಗೆ ಕೆಲವೆಡೆ ಭಾರಿ ಹಾನಿ ಸಂಭವಿಸಿದೆ.
ಶುಕ್ರವಾರ ಮಧ್ಯರಾತ್ರಿ ವೇಳೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುತ್ತಕಾಡಿನ ಸತೀಶ್ ಪೂಜಾರಿ ಅವರ ಮನೆ ಮೇಲೆ ದೊಡ್ಡ ಮರ ಬಿದ್ದು ಅಪಾರ ಹಾನಿ ಸಂಭವಿಸಿದ್ದು ಮನೆಯವರು ಪಾರಾಗಿದ್ದಾರೆ.ತಾಳಿಪಾಡಿ ಗುತ್ತುವಿನಿಂದ ದಾಮಸ್‌ಕಟ್ಟೆಗೆ ಸಂಪರ್ಕಿಸುವ ರಸ್ತೆಯಲ್ಲಿ ಮರ ಹಾಗೂ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬಕ್ಕೆ ಹಾನಿ ಉಂಟಾಗಿದ್ದು ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಕಿನ್ನಿಗೋಳಿ ಗುತ್ತಕಾಡು ಪ್ರಧಾನ ರಸ್ತೆಯಲ್ಲಿ ಮರ ಬಿದ್ದು ರಸ್ತೆ ತಡೆ ಉಂಟಾಗಿದ್ದು ಗುತ್ತಕಾಡು ಶಾಲೆಯ ಹತ್ತಿರ ವಿದ್ಯುತ್ ಕಂಬ ರಸ್ತೆಗೆ ಬಿದ್ದಿದೆ. ಘಟನೆಯಿಂದಾಗಿ ಕಿನ್ನಿಗೋಳಿ ಮೆಸ್ಕಾಂಗೆ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ತಾಲೂಕು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.