ಚುನಾವಣೆ ಕಣದಲ್ಲಿ 12 ಪಕ್ಷಗಳು, 18 ಪಕ್ಷೇತರರು ಸೇರಿ ಒಟ್ಟು 30 ಅಭ್ಯರ್ಥಿಗಳು

| Published : May 07 2024, 01:04 AM IST

ಚುನಾವಣೆ ಕಣದಲ್ಲಿ 12 ಪಕ್ಷಗಳು, 18 ಪಕ್ಷೇತರರು ಸೇರಿ ಒಟ್ಟು 30 ಅಭ್ಯರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

8 ವಿಧಾನಸಭಾ ಕ್ಷೇತ್ರ ಒಳಗೊಂಡ ಲೋಕಸಭಾ ಕ್ಷೇತ್ರಕ್ಕೆ 1946 ಮತಗಟ್ಟೆಗಳು, 851990 ಪುರುಷ, 857117 ಮಹಿಳೆ, 137 ಇತರೆ, ಒಟ್ಟು 1709244 ಮತದಾರ, ಸಖಿ ಮತಗಟ್ಟೆ, ವಿಶೇಷಚೇತನ ಮತಗಟ್ಟೆ, ಪಿಂಕ್ ಮತಗಟ್ಟೆಗಳ ವೀಕ್ಷಿಸಿದ ಡಿಸಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಕಣದಲ್ಲಿರುವ 30 ಅಭ್ಯರ್ಥಿಗಳ ಭವಿಷ್ಯವನ್ನು ಇಂದು ಕ್ಷೇತ್ರದ 17,09,244 ಮತದಾರರು ಬರೆಯಲಿದ್ದಾರೆ.

ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರ ಸೇರಿ ದಾವಣಗೆರೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಲೋಕಸಭಾ ಕ್ಷೇತ್ರದ ಚುನಾವಣೆಗಾಗಿ ಜಿಲ್ಲಾ ಕೇಂದ್ರ, ಆಯಾ ತಾಲೂಕು ಕೇಂದ್ರಗಳ ಮಸ್ಟರಿಂಗ್ ಕೇಂದ್ರದಿಂದ ಇವಿಎಂ ನೊಂದಿಗೆ, ವಿವಿಪ್ಯಾಟ್, ಬ್ಯಾಲೆಟ್ ಯುನಿಟ್, ಶಾಯಿ ಸೇರಿ ಶಾಸನಬದ್ಧ ಲಕೋಟೆ, ಶಾಸನಬದ್ಧವಲ್ಲದ ಲಕೋಟೆಗಳೊಂದಿಗೆ ಸೂಕ್ತ ಭದ್ರತೆಯಲ್ಲಿ ಮತಗಟ್ಟೆಗಳಿಗೆ ಅಧಿಕಾರಿಗಳು ತಲುಪಿದ್ದಾರೆ.

ಲೋಕಸಭಾ ಕ್ಷೇತ್ರದಲ್ಲಿ 851990 ಪುರುಷ, 857117 ಮಹಿಳೆಯರು, 137 ಇತರೆ ಸೇರಿ ಒಟ್ಟು 1709244 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 1946 ಮತಗಟ್ಟೆ ಸ್ಥಾಪಿಸಿದ್ದು, ಮತದಾರರಿಗೆ ಅನುಕೂಲವಾಗುವಂತೆ ಪಿಂಕ್ ಮತಗಟ್ಟೆ, ವಿಕಲಚೇತನ ಸ್ನೇಹಿ ಮತಗಟ್ಟೆ, ಸಖಿ ಮತಗಟ್ಟೆಗಳನ್ನು ಸ್ಥಾಪಿಸುವ ಮೂಲಕ 2019ರ ಸಾರ್ವತ್ರಿಕ ಚುನಾವಣೆಗಿಂತಲೂ ಹೆಚ್ಚು ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಪಂ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಿವೆ.

ಕ್ಷೇತ್ರವಾರು ಮತದಾರರ ವಿವರ:

ಜಗಳೂರು ಕ್ಷೇತ್ರ 263 ಮತಗಟ್ಟೆಗಳಲ್ಲಿ 100046 ಪುರುಷ, 98759 ಮಹಿಳೆ, 10 ಇತರೆ ಸೇರಿ 198815 ಮತದಾರರಿದ್ದಾರೆ. ಹರಪನಹಳ್ಳಿ 253 ಮತಗಟ್ಟೆಗಳಲ್ಲಿ 112969 ಪುರುಷ, 110985 ಮಹಿಳೆ, 19 ಇತರೆ ಸೇರಿ 223973 ಮತದಾರರು. ಹರಿಹರ ಕ್ಷೇತ್ರದ 228 ಮತಗಟ್ಟೆಗಳಲ್ಲಿ 105510 ಪುರುಷ, 106870 ಮಹಿಳೆ, 17 ಇತರೆ ಸೇರಿ 212397 ಮತದಾರರು, ದಾವಣಗೆರೆ ಉತ್ತರ 245 ಮತಗಟ್ಟೆಗಳಲ್ಲಿ 124485 ಪುರುಷ, 128635 ಮಹಿಳೆ, 36 ಇತರೆ ಸೇರಿ 253156, ದಾವಣಗೆರೆ ದಕ್ಷಿಣ 217 ಮತಗಟ್ಟೆ, 109184 ಪುರುಷ, 111774 ಮಹಿಳೆ, 39 ಇತರೆ ಸೇರಿ 220997 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದ್ದಾರೆ.

ಮಾಯಕೊಂಡದ 240 ಮತಗಟ್ಟೆಗಳಲ್ಲಿ 97759 ಪುರುಷ, 97326 ಮಹಿಳೆ, 4 ಇತರೆ ಸೇರಿ 195089, ಚನ್ನಗಿರಿ 255 ಮತಗಟ್ಟೆಗಳಲ್ಲಿ 101653 ಪುರುಷ, 102208 ಮಹಿಳೆ, 9 ಇತರೆ ಸೇರಿ 203870, ಹೊನ್ನಾಳಿ 245 ಮತಗಟ್ಟೆಗಳಲ್ಲಿ 100384 ಪುರುಷ, 100560 ಮಹಿಳೆ, 3 ಇತರೆ ಸೇರಿ 200947 ಮತದಾರರಿದ್ದಾರೆ.ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1946 ಮತಗಟ್ಟೆಗಳ ಪೈಕಿ ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ, ಮತಗಟ್ಟೆ ಸಿಬ್ಬಂದಿ 2 ಸೇರಿ ಪ್ರತಿ ಮತಗಟ್ಟೆಗಳಲ್ಲಿ ಭದ್ರತಾ ಸಿಬ್ಬಂದಿ ಹೊರತುಪಡಿಸಿ 4 ಜನ ಮತದಾನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಹೆಚ್ಚುವರಿ ಸೇರಿ ಒಟ್ಟು 8996 ಮತದಾನ ಸಿಬ್ಬಂದಿ ನಿಯೋಜಿಸಿದ್ದು, ಅಂತಹವರು ಎಲ್ಲಾ ತಾಲೂಕುಗಳ ಮಸ್ಟರಿಂಗ್ ಕೇಂದ್ರದಿಂದ ಇವಿಎಂ ನೊಂದಿಗೆ, ವಿವಿಪ್ಯಾಟ್, ಬ್ಯಾಲೆಟ್ ಯುನಿಟ್ ಸೇರಿದಂತೆ ಶಾಸನಬದ್ಧ ಲಕೋಟೆಗಳು, ಶಾಸನಬದ್ಧವಲ್ಲದ ಲಕೋಟೆಗಳೊಂದಿಗೆ ಮತಗಟ್ಟೆ ತಲುಪಿದ್ದಾರೆ. 30 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಬ್ಯಾಲೆಟ್ ಯುನಿಟ್‍ನಲ್ಲಿ 30 ಅಭ್ಯರ್ಥಿಗಳು ಮತ್ತು 1 ನೋಟಾ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕ್ರಮ ಸಂಖ್ಯೆ-ಪಕ್ಷಗಳು, ಅಭ್ಯರ್ಥಿಗಳು, ಚಿಹ್ನೆ

1. ಗಾಯಿತ್ರಿ ಸಿದ್ದೇಶ್ವರ ಭಾರತೀಯ ಜನತಾ ಪಾರ್ಟಿ ಕಮಲ, ಹೂವಿನ ಚಿಹ್ನೆ

2. ಡಾ. ಪ್ರಭಾ ಮಲ್ಲಿಕಾರ್ಜುನ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಹಸ್ತದ ಚಿಹ್ನೆ,

3. ಡಿ.ಹನುಮಂತಪ್ಪ, ಬಹುಜನ ಸಮಾಜ ಪಾರ್ಟಿ, ಆನೆ,

4. ಈಶ್ವರ ಶೇಂಗಾ, ಉತ್ತಮ ಪ್ರಜಾಕೀಯ ಪಾರ್ಟಿ, ಚಪ್ಪಲಿಗಳು,

5. ಅಣಬೇರು ತಿಪ್ಪೇಸ್ವಾಮಿ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ, ಆಟೋ ರಿಕ್ಷಾ,

6. ಎಂ.ಪಿ.ಖಲಂದರ್, ಕಂಟ್ರಿ ಸಿಟಿಜನ್ ಪಾರ್ಟಿ, ತೆಂಗಿನ ತೋಟ,

7. ದೊಡ್ಡೇಶಿ ಎಚ್.ಎಸ್, ಜನಹಿತ ಪಕ್ಷ, ಸ್ಟೆತೋಸ್ಕೋಪ್,

8. ರುದ್ರೇಶ್ ಕೆ.ಎಚ್, ಸಮಾಜ ವಿಕಾಸ ಕ್ರಾಂತಿ ಪಾರ್ಟಿ, ವಿದ್ಯುತ್ ಕಂಬ,

9. ವಿರೇಶ್.ಎಸ್ (ಲಯನ್ ವಿರೇಶ್) ರಾಣಿ ಚೆನ್ನಮ್ಮ ಪಾರ್ಟಿ, ಉಂಗುರ,

10. ಕೆ.ಎಸ್.ವೀರಭದ್ರಪ್ಪ, ಕರ್ನಾಟಕ ರಾಷ್ಟ್ರ ಸಮಿತಿ, ಬ್ಯಾಟರಿ ಟಾರ್ಚ್,

11. ಎಂ.ಜಿ.ಶ್ರೀಕಾಂತ್, ನವಭಾರತ ಸೇನಾ, ಬೆಂಕಿಪೊಟ್ಟಣ,

12. ಎಂ.ಸಿ.ಶ್ರೀನಿವಾಸ, ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷ, ಏಳು ಕಿರಣಗಳಿರುವ ಪೆನ್ನಿನ ನಿಬ್,

ಕ್ರಮ ಸಂಖ್ಯೆ-ಪಕ್ಷೇತರು, ಹೆಸರು, ಚಿಹ್ನೆ

13. ಅಬ್ದುಲ್ ನಜೀರ್ ಅಹಮದ್, ರೋಡ್ ರೋಲರ್,

14. ಎ.ಕೆ.ಗಣೇಶ್, ಚಕ್ಕಿ(ಬೀಸುವ ಕಲ್ಲು),

15. ಜಿ.ಎಂ.ಗಾಯಿತ್ರಿ ಸಿದ್ದೇಶಿ, ಹೂ ಕೋಸು,

16. ಟಿ.ಚಂದ್ರು, ಗ್ರಾಮ ಫೋನ್,

17. ಟಿ.ಜಬೀನಾ ಆಪಾ, ಕಲ್ಲಂಗಡಿ ಹಣ್ಣು,

18. ತಸ್ಲೀಮ್ ಬಾನು, ಬ್ಯಾಟ್,

19. ಪರವೀಜ್ ಎಚ್, ವಜ್ರ,

20. ಪೆದ್ದಪ್ಪ.ಎಸ್, ಕೇರಂ ಬೋರ್ಡ್,

21. ಬರಕತ್ ಅಲಿ, ಅಲಮಾರು,

22. ಜಿ.ಎಂ.ಬರ್ಕತ್ ಅಲಿ ಬಾಷಾ, ಗಿಫ್ಟ್ ಪ್ಯಾಕ್,

23. ಮಹಬೂಬ್ ಬಾಷ, ಸ್ಪಾನರ್,

24. ಮೊಹ್ಮದ್ ಹಯಾತ್.ಎಂ, ಪಕ್ಷೇತರ ಬ್ಯಾಟ್ಸಮನ್,

25. ಮಂಜು ಮಾರಿಕೊಪ್ಪ, ಟ್ರಕ್,

26. ರವಿನಾಯ್ಕ.ಬಿ, ಕರಣೆ,

27. ರಷೀದ್ ಖಾನ್, ದೂರವಾಣಿ,

28. ಜಿ.ಬಿ.ವಿನಯ್ ಕುಮಾರ್, ಗ್ಯಾಸ್ ಸಿಲಿಂಡರ್

29. ಸಲೀಂ.ಎಸ್, ಪೆನ್‍ಡ್ರೈವ್

30. ಸೈಯದ್ ಜಬೀವುಲಾ.ಕೆ, ಬಕೆಟ್ ಚಿಹ್ನೆ.

ಮತದಾನಕ್ಕೆ ಪರ್ಯಾಯ ದಾಖಲೆಗೆ ಅವಕಾಶ:

ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಚುನಾವಣಾ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು. ಅಲ್ಲದೇ ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಬ್ಯಾಂಕ್, ಅಂಚೆ ಕಚೇರಿಯಿಂದ ಪಡೆಯಲಾದ ಖಾತೆ ಪುಸ್ತಕದಲ್ಲಿ ಭಾವಚಿತ್ರ ಇದ್ದಲ್ಲಿ, ಕೇಂದ್ರ ಕಾರ್ಮಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪಾನ್ ಕಾರ್ಡ್, ಆರ್‌ಬಿಐ ನಿಂದ ನೀಡಲಾದ ಸ್ಮಾರ್ಟ್ ಕಾರ್ಡ್, ಇಂಡಿಯನ್ ಪಾಸ್‍ಪೋರ್ಟ್, ಭಾವಚಿತ್ರವಿರುವ ಪೆನ್ಷನ್ ದಾಖಲೆ, ಸರ್ಕಾರಿ, ಅರೆ ಸರ್ಕಾರಿ, ಸಾರ್ವಜನಿಕ ಉದ್ದಿಮೆಗಳಲ್ಲಿನ ಭಾವಚಿತ್ರವಿರುವ ಗುರುತಿನ ಚೀಟಿ, ಅಧಿಕೃತವಾಗಿ ವಿತರಿಸಲಾದ ಲೋಕಸಭಾ, ವಿಧಾನಸಭಾ, ಪರಿಷತ್ ಸದಸ್ಯರ ಐಡಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ನೀಡಲಾದ ದಿವ್ಯಾಂಗರ ಗುರುತಿನ ಚೀಟಿಗಳನ್ನು ನೀಡಿ ಮತದಾನ ಮಾಡಬಹುದಾಗಿದೆ.ಮಸ್ಟರಿಂಗ್ ನಡೆದ ಕೇಂದ್ರಗಳು:

ಜಗಳೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಹರಿಹರ ಸೆಂಟ್ ಮೇರಿಸ್ ಕಾನ್ವೆಂಟ್ ಸ್ಕೂಲ್, ದಾವಣಗೆರೆ ಉತ್ತರ ಡಿ.ಆರ್.ಆರ್.ವಿದ್ಯಾಸಂಸ್ಥೆ, ದಾವಣಗೆರೆ ದಕ್ಷಿಣ ಹೈಸ್ಕೂಲ್ ಮೈದಾನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಮಾಯಕೊಂಡ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜು, ಚನ್ನಗಿರಿ ಶ್ರೀ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರ, ಹಿರೇಕಲ್ಮಠ ಇಲ್ಲಿ ಮಸ್ಟರಿಂಗ್ ನಡೆದಿದ್ದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ; ವೆಂಕಟೇಶ ಎಂ.ವಿ ಅವರು ದಾವಣಗೆರೆ ಉತ್ತರ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚನ್ನಗಿರಿ ಸಖಿಮತಗಟ್ಟೆ ಪರಿಶೀಲನೆ:

ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ಕ್ಷೇತ್ರದಲ್ಲಿ 5 ಮತಗಟ್ಟೆಗಳನ್ನು ಸಖಿ ಮತಗಟ್ಟೆಯನ್ನಾಗಿ ಮಾಡಿ, ಅಲ್ಲಿ ಮಹಿಳಾ ಸಿಬ್ಬಂದಿಗಳಿಂದ ನಿರ್ವಹಿಸಲ್ಪಡುವ ಮತಗಟ್ಟೆ ಇದಾಗಿದೆ. ಎಲ್ಲಾ ಪಿಂಕ್ ಬಣ್ಣದಿಂದ ಕೂಡಿರುತ್ತದೆ. ಪಿಂಕ್ ಬಣ್ಣದಿಂದ ಸಿಂಗಾರಗೊಂಡಿರುವ ಮತಗಟ್ಟೆ, ಮತಗಟ್ಟೆಯಲ್ಲಿನ ಸಿಬ್ಬಂದಿಗಳು ಸಹ ಪಿಂಕ್ ಬಣ್ಣದ ಸ್ಯಾರಿಯನ್ನು ಧರಿಸಿರುತ್ತಾರೆ. ಚನ್ನಗಿರಿ ಪಟ್ಟಣದ ಬಿಇಓ ಕಚೇರಿ ಹಿಂಭಾಗದ ಸರ್ಕಾರಿ ಸಂಯುಕ್ತ ಬಾಲಕಿಯರ ಪ್ರೌಢಶಾಲೆಯಲ್ಲಿ ಇರುವ 169 ಮತಗಟ್ಟೆಯನ್ನು ಸಖಿ ಮತಗಟ್ಟೆಯನ್ನಾಗಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪುರುಷ 608, ಮಹಿಳೆ 636 ಸೇರಿ ಒಟ್ಟು 1244 ಮತದಾರರಿದ್ದಾರೆ.

ವಿಶೇಷಚೇತನರ ಮತಗಟ್ಟೆ ಸಿಬ್ಬಂಗೆ ವಿಶೇಷ ಗೌರವ:

ದಾವಣಗೆರೆ ಜಿಲ್ಲೆಯಲ್ಲಿ ತಲಾ 1 ಕ್ಷೇತ್ರದಲ್ಲಿ 1ರಂತೆ ಒಟ್ಟು 8 ವಿಶೇಷಚೇತನರ ಮತಗಟ್ಟೆ ಸ್ಥಾಪಿಸಲಾಗಿದ್ದು ಇಲ್ಲಿನ ಮತಗಟ್ಟೆ ಸಿಬ್ಬಂದಿ ವಿಶೇಷಚೇತನರಾಗಿರುತ್ತಾರೆ. ಇವರಿಗೆ ವಿಶೇಷ ವಾಹನ ಸೌಲಭ್ಯ ಕಲ್ಪಿಸಿದ್ದು ಇನ್ನೋವಾ ವಾಹನ ನೀಡಲಾಗಿದೆ. ಮಸ್ಟರಿಂಗ್ ಮತ್ತು ಡಿ.ಮಸ್ಟರಿಂಗ್‍ನಲ್ಲಿ ಇವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬಹಳ ಗೌರವಯುತವಾಗಿ ನಡೆಸಿಕೊಳ್ಳುವ ಮೂಲಕ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ದಾವಣಗೆರೆ ಉತ್ತರ ಕ್ಷೇತ್ರದ ವಿಶೇಷಚೇತನರ ಮತಗಟ್ಟೆ ಸಿಬ್ಬಂದಿಗಳಿಗೆ ಹೂವಿನಹಾರ ಹಾಕುವ ಮೂಲಕ ಗೌರವಪೂರ್ವಕವಾಗಿ ಮತಗಟ್ಟೆಗೆ ಕಳುಹಿಸಿಕೊಟ್ಟರು.