ಸೂರ್ಯಕಾಂತಿ ಜಮೀನಿಗೆ ಪ್ರವಾಸಿಗರ ದಂಡು

| Published : Jul 07 2025, 11:48 PM IST

ಸಾರಾಂಶ

ತಾಲೂಕಿನಲ್ಲಿ ಸೂರ್ಯಕಾಂತಿ ಬೆಳೆಯನ್ನು ರೈತರು ಅತೀ ಹೆಚ್ಚಾಗಿ ಬೆಳೆಯುತ್ತಾರೆ. ಮೈಸೂರು-ಊಟಿ ಮತ್ತು ಗುಂಡ್ಲುಪೇಟೆ-ಸುಲ್ತಾನ್‌ ಬತ್ತೇರಿ ರಸ್ತೆ ಬದಿಯ ಜಮೀನುಗಳಲ್ಲಿ ಕಟಾವಿಗೆ ಮುಂಚೆ ಅರಳಿ ನಿಂತ ಸೂರ್ಯಕಾಂತಿ ʼಹೂʼಗೆ ಮನಸೋತ ಪ್ರವಾಸಿಗರ ದಂಡು ಸೂರ್ಯ ಕಾಂತಿ ಬೆಳೆ ಕಂಡು ಜಮೀನಿನಲ್ಲಿ ರೈತರಿಗೆ ಹಣ ಕೊಟ್ಟು ಮೊಬೈಲ್‌ ಮೂಲಕ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನಲ್ಲಿ ಬಂಡೀಪುರ ಕಾಡು, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಹಾಗೂ ಸಫಾರಿ ಇರುವ ಕಾರಣ ಪ್ರವಾಸೋದ್ಯಮ ತಾಣವಾಗಿದೆ. ಪ್ರವಾಸಿಗರು ರಜಾ ಸಮಯದಲ್ಲಿ ರಾಜ್ಯ, ನೆರೆ ರಾಜ್ಯಗಳ ಪ್ರವಾಸಿಗರು ತಾಲೂಕಿಗೆ ಬರುವಾಗ ಮಾರ್ಗ ಮದ್ಯೆ ಮೈಸೂರು-ಊಟಿ, ಮೈಸೂರು-ಸುಲ್ತಾನ್‌ ಬತ್ತೇರಿ ರಸ್ತೆಯಲ್ಲಿ ಸಾಗುವಾಗ ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಬಿದ್ದಿರುವ ಕಾರಣ ರೈತರು ಬಿತ್ತನೆ ಮಾಡಿದ ಫಸಲು ನಳ ನಳಿಸುತ್ತಿರುವುದನ್ನು ಕಂಡು ಸೂರ್ಯ ಕಾಂತಿ ಜಮೀನಿಗೆ ಪ್ರವಾಸಿಗರು ಲಗ್ಗೆ ಇಟ್ಟು ಸಂಭ್ರಮಿಸುತ್ತಿದ್ದಾರೆ.ರೈತನಿಗೆ ಖುಷಿ ತಂದ ಹೂ

ಪ್ರವಾಸಿಗರು ಸೂರ್ಯಕಾಂತಿಯ ಜಮೀನಿನೊಳಗೆ ಹೋಗಲು ರೈತ ಪ್ರವಾಸಿಗರ ಮುಖ ನೋಡಿ ಹಣ ವಸೂಲಿ ಮಾಡುತ್ತಿದ್ದಾರೆ. ಆದರೂ ಪ್ರವಾಸಿಗರ ಹೂವಿನ ಪ್ರೀತಿಗೆ ಮಾರು ಹೋಗಿ ಹಣ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ ಎಂದು ಸೂರ್ಯಕಾಂತಿ ಫಸಲು ಬೆಳೆದ ರೈತ ಹೇಳಿದ್ದಾರೆ.

ಸೂರ್ಯಕಾಂತಿ ಹೂವು ಬಿಟ್ಟ ಜಮೀನುಗಳ ಮುಂದೆ ಹಾದು ಹೋಗುವ ಹೆದ್ದಾರಿ ಬದಿಯಲ್ಲಿ ಕಾರುಗಳ ಸಾಲು ಕಂಡುಬಂತು. ಸೂರ್ಯಕಾಂತಿ ಹೂವು ಬಿಟ್ಟ ಜಮೀನಿನ ಮುಂದೆ ಕಬ್ಬಿನ ಜ್ಯೂಸ್‌, ಎಳೆ ನೀರು ವ್ಯಾಪಾರ ಮಾಡುವವರಿಗೆ ವ್ಯಾಪಾರ ಜೋರಾಗಿದೆ.