ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಸಾಲ ಕಾಲೇಜುಗಳಿಗೆ ಬೇಸಿಗೆ ರಜೆ ಇರುವ ಕಾರಣ ಪೋಷಕರು ತಮ್ಮ ಕುಟುಂಬದೊಂದಿಗೆ ಪ್ರವಾಸ ಹೊರಡುತ್ತಾರೆ. ಹಳೇಬೀಡು - ಬೇಲೂರು ಈ ಸಂದರ್ಭದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು, ಆದರೆ ಈ ವರ್ಷದ ಅಸಹಜ ತಾಪಮಾನ ಸುಡು ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಮನೆಯಿಂದ ಹೊರಬರುವುದೇ ಕಷ್ಟವಾಗಿದ್ದು ಇನ್ನೂ ಪ್ರವಾಸಕ್ಕೆ ಎಲ್ಲಿ ಹೊರಡುವುದು ಎಂದು ಹೆದರುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಬೇಲೂರು ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇಗುಲದಂತಹ ಅದ್ಭುತ ಶಿಲ್ಪಕಲೆಯ ತಾಣ ಪ್ರವಾಸಿಗರಿಲ್ಲದೆ ಬಣ ಗುಡುತ್ತಿದೆ. ಬಿರು ಬಿಸಲಿನ ಬೇಗೆಯೆ ಇದಕ್ಕೆ ಪ್ರಮುಖ ಕಾರಣವಾಗಿದ್ದು ಸೂರ್ಯನ ತಾಪಕ್ಕೆ ಹೆದರಿ ಜನರು ಪ್ರವಾಸವನ್ನು ಮುಂದೂಡುತ್ತಿದ್ದಾರೆ.ಅಸಹಜ ತಾಪಮಾನ:
ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಸಾಲ ಕಾಲೇಜುಗಳಿಗೆ ಬೇಸಿಗೆ ರಜೆ ಇರುವ ಕಾರಣ ಪೋಷಕರು ತಮ್ಮ ಕುಟುಂಬದೊಂದಿಗೆ ಪ್ರವಾಸ ಹೊರಡುತ್ತಾರೆ. ಹಳೇಬೀಡು - ಬೇಲೂರು ಈ ಸಂದರ್ಭದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು, ಆದರೆ ಈ ವರ್ಷದ ಅಸಹಜ ತಾಪಮಾನ ಸುಡು ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಮನೆಯಿಂದ ಹೊರಬರುವುದೇ ಕಷ್ಟವಾಗಿದ್ದು ಇನ್ನೂ ಪ್ರವಾಸಕ್ಕೆ ಎಲ್ಲಿ ಹೊರಡುವುದು ಎಂದು ಹೆದರುತ್ತಿದ್ದಾರೆ.ಬಿಸಿಲಿನಲ್ಲಿ ದೇಗುಲ ವೀಕ್ಷಣೆ ಅಸಾಧ್ಯ:
ಚನ್ನಕೇಶವ ದೇಗುಲದ ಪ್ರಮುಖ ಆಕರ್ಷಣೆಯೇ ಅದರ ಹೊರಗೋಡೆಯ ಮೇಲಿರುವ ಸೂಕ್ಷ್ಮ ಕೆತ್ತನೆಗಳು. ಸುಡುವ ಬಿಸಿಲಿನಲ್ಲಿ ಬಯಲು ಅಂಗಳದಲ್ಲಿ ನಿಂತು ಶಿಲ್ಪಕಲೆಯನ್ನು ಆಸ್ವಾದಿಸುವುದು ಪ್ರವಾಸಿಗರಿಗೆ ಅಸಾಧ್ಯವಾಗುತ್ತಿದೆ. ಧಾರ್ಮಿಕ ಕೇಂದ್ರವಾದ್ದರಿಂದ ದೇಗುಲದ ಆವರಣದಲ್ಲಿ ಪಾದರಕ್ಷೆ ಧರಿಸುವಂತಿಲ್ಲ. ಕಾದ ಕಲ್ಲುಗಳ ಮೇಲೆ ಬರಿಗಾಲಿನಲ್ಲಿ ನಡೆಯುವುದು ಪ್ರವಾಸಿಗರಿಗೆ, ಮಕ್ಕಳು ಮತ್ತು ವಯಸ್ಸಾದವರಿಗೆ ಬಹಳ ಕಷ್ಟ.ನದಿಯ ನೀರಿನ ಮಟ್ಟ ಕುಸಿತ:ಕೇವಲ ಬಯಲು ಸೀಮೆಯ ಬೇಲೂರು ಹಳೇಬೀಡು ಮಾತ್ರವಲ್ಲದೆ, ಕರಾವಳಿಯ ದಕ್ಷಿಣ ಕನ್ನಡ ತೀರ್ಥಕ್ಷೇತ್ರಗಳ ಮೇಲೂ ಬಿಸಿಲಿನ ತಾಪಮಾನ ತೀವ್ರ ಪರಿಣಾಮ ಬೀರಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಕಟೀಲಿನಂತಹ ಪವಿತ್ರ ಕ್ಷೇತ್ರಗಳಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ಬಿಸಿಲಿನ ಬೇಗೆಯಿಂದಾಗಿ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ತೀರ್ಥಕ್ಷೇತ್ರಗಳಿಗೆ ಬರುವ ಭಕ್ತರಿಗೆ ಪವಿತ್ರ ಸ್ನಾನ ಮಾಡಲು ಮತ್ತು ದೈನಂದಿನ ಬಳಕೆಗೆ ನೀರಿನ ಅಭಾವ ಉಂಟಾಗುವ ಆತಂಕವೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲು ಒಂದು ಕಾರಣವಾಗಿದೆ.
===========*ಬಾಕ್ಸ್: ಸ್ಥ ಳೀಯ ವ್ಯಾಪಾರದ ಮೇಲೆ ಹೊಡೆತ:
ಈ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿರುತ್ತದೆ. ಆದರೆ ಈಗ ಬೆರಳೆಣಿಕೆಯಷ್ಟು ಬರುತ್ತಿದ್ದಾರೆ. ಬೇಸಿಗೆ ರಜೆ ಇದ್ದಾಗ ದಿನಕ್ಕೆ ಒಬ್ಬರಿಗೆ ಎರಡು ಮೂರು ರೌಂಡ್ ಗೈಡ್ ಮಾಡಲು ಅವಕಾಶವಿತ್ತು. ಆದರೆ ಈಗ ಒಂದು ಸಿಗುವುದು ಕಷ್ಟವಾಗಿದೆ. ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದರಿಂದ ದೇವಸ್ಥಾನದ ಸುತ್ತಮುತ್ತಲಿನ ಹೋಟೆಲ್‌ಗಳು, ಕರಕುಶಲ ವಸ್ತುಗಳ ಮಾರಾಟಗಾರರು ಮತ್ತು ಗೈಡ್‌ಗಳ ಆದಾಯದಲ್ಲೂ ಇಳಿಕೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪ್ರವಾಸೋದ್ಯಮದ ಮೇಲೆ ಪರಿಣಾಮ ಇರಲಿದೆ. - ಬಿ ಎನ್ ತಾರನಾಥ್, ಚನ್ನಕೇಶವ ದೇಗುಲ ಮಾರ್ಗದರ್ಶಿ,