ಸಾರಾಂಶ
ತಾಲೂಕಿನ ಗೋಪಿನಾಥಂ ಹಾಗೂ ಪಾಲಾರ್ ಮಾರ್ಗ ಮಧ್ಯೆ ಐದು ಕಾಡಾನೆಗಳು ರಸ್ತೆ ದಾಟಿದ್ದು, ಈ ವೇಳೆ ಪ್ರವಾಸಿಗರು ಆತಂಕಕ್ಕೆ ಒಳಗಾದರು. ತಾಲೂಕಿನ ಪಾಲಾರ್ ರಸ್ತೆಯೂ ಗೋಪಿನಾಥಂ ಮತ್ತು ಹೊಗೇನಕಲ್ ಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಗೋಪಿನಾಥಂ ಹಾಗೂ ಪಾಲಾರ್ ಮಾರ್ಗ ಮಧ್ಯೆ ಐದು ಕಾಡಾನೆಗಳು ರಸ್ತೆ ದಾಟಿದ್ದು, ಈ ವೇಳೆ ಪ್ರವಾಸಿಗರು ಆತಂಕಕ್ಕೆ ಒಳಗಾದರು. ತಾಲೂಕಿನ ಪಾಲಾರ್ ರಸ್ತೆಯೂ ಗೋಪಿನಾಥಂ ಮತ್ತು ಹೊಗೇನಕಲ್ ಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಕಾವೇರಿ ವನ್ಯಧಾಮದ ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳು ರಸ್ತೆ ದಾಟಿ ಇನ್ನೊಂದು ಅರಣ್ಯ ಪ್ರದೇಶಕ್ಕೆ ಹೋಗಿವೆ. ಪ್ರವಾಸಿಗರು ಕಾಡಾನೆ ಹೋಗಿದ್ದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪಾಲಾರ್ ಗೋಪಿನಾಥಂ- ಹೊಗೇನಕಲ್- ಮಾರಿಕೊಟ್ಟೆ -ಅತೂರು ಸೇರಿದಂತೆ ವಿವಿಧ ಭಾಗಗಳಿಗೂ ಸಹ ಈ ಪ್ರಮುಖ ರಸ್ತೆಯಲ್ಲಿ ಕಾಡುಪ್ರಾಣಿಗಳು ದಾಟುವುದರಿಂದ ಪ್ರವಾಸಿಗರು ಹಾಗೂ ನಿವಾಸಿಗಳು ಎಚ್ಚರಿಕೆಯಿಂದ ತೆರಳುವಂತೆ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ವತಿಯಿಂದ ಎಚ್ಚರಿಕೆ ನಾಮಫಲಕಗಳು ಅಳವಡಿಸದೆ ಇರುವ ಬಗ್ಗೆ ಪ್ರವಾಸಿಗರುಆಕ್ರೋಶ ವ್ಯಕ್ತಪಡಿಸಿದ್ದು,
ಸ್ಥಳೀಯರು ಹಾಗೂ ಈ ಭಾಗದಲ್ಲಿ ಹೊಗೇನಕಲ್ ಜಲಪಾತಕ್ಕೆ ಬರುವ ಪ್ರವಾಸಿಗರು ವಾಹನಗಳಲ್ಲಿ ತೆರಳುವ ವೇಳೆ ಕಾಡಾನೆಗಳನ್ನು ಕಂಡು ತಕ್ಷಣ ಎಚ್ಚೆತ್ತುಕೊಂಡಿದ್ದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ಆದರೂ ಈ ಭಾಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ಬದಿಗಳಲ್ಲಿ ಕಾಡುಪ್ರಾಣಿಗಳು ಓಡಾಡುವ ಸ್ಥಳ ಸೇರಿದಂತೆ ರಸ್ತೆ ಬದಿಗಳಲ್ಲಿ ನಾಮಫಲಕಗಳನ್ನು ಅಳವಡಿಸಿದೆ ಇರುವುದು ಪ್ರಾಣಿ ಪ್ರಿಯರ ಹಾಗೂ ನಾಗರಿಕರ ಮತ್ತು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.