ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ ತಾಲೂಕಿನ ಗ್ರಾಹಕರ ಸಹಕಾರ ಹಾಗೂ ಅತ್ಯುತ್ತಮ ಸೇವೆ ಒದಗಿಸುವಲ್ಲಿ ವ್ಯವಸ್ಥಾಪಕ ಹಾಗೂ ಸಿಬ್ಬಂದಿಯ ಕ್ರಿಯಾಶೀಲತೆ ಪರಿಣಾಮ ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ಕರ್ಣಾಟಕ ಬ್ಯಾಂಕ್ ಬೆಂಗಳೂರು ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ (ಎಜಿಎಂ) ಮಲ್ಲನಗೌಡ ಬಿರಾದಾರ್ ಮೆಚ್ಚುಗೆ ವ್ಯಕ್ತಪಡಿಸಿದರು.ಅವರು ಕರ್ಣಾಟಕ ಬ್ಯಾಂಕ್ ಪಾವಗಡ ಶಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕರ್ಣಾಟಕ ಬ್ಯಾಂಕ್ 49ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೇಕ್ ಕಟ್ ಮಾಡಿದ ಬಳಿಕ ಮಾತನಾಡಿದ ಅವರು, ಕರ್ಣಾಟಕ ಬ್ಯಾಂಕ್ ಸ್ಥಾಪಿತವಾಗಿ ಇಂದಿಗೆ 49ವರ್ಷ ಕಳೆದಿದ್ದು 50ನೇ ವರ್ಷಕ್ಕೆ ಪರ್ದಾಪಣೆ ಮಾಡುತ್ತಿದೆ. ಬ್ಯಾಂಕ್ ಜತೆ ಗ್ರಾಹಕರು ಉತ್ತಮ ಭಾಂಧವ್ಯ ಹೊಂದಿದ್ದು ನಿಗದಿತ ಅವಧಿಯೊಳಗೆ ಸೇವೆ ಕಲ್ಪಿಸುವಲ್ಲಿ ಯಶಸ್ವಿಯಾಗುತ್ತಿದೆ. ಬ್ಯಾಂಕ್ ಪ್ರಗತಿಗೆ ಸಹಕರಿಸಿದ ಎಲ್ಲಾ ಗ್ರಾಹಕ ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಇಲ್ಲಿನ ಶ್ರೀ ಶನಿಮಹಾತ್ಮ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಸಿ.ಕೆ.ಪುರ ಆನಂದ್‌ರಾವ್ ಮಾತನಾಡಿ ರೈತ ಹಾಗೂ ಜನಸಾಮಾನ್ಯರಿಗೆ ಉತ್ತಮ ಸೇವೆ ಕಲ್ಪಿಸುವಲ್ಲಿ ಕರ್ಣಾಟಕ ಬ್ಯಾಂಕ್ ತನ್ನದೇ ಆದ ಹೆಗ್ಗಳಿಕೆ ಪಡೆದಿದೆ. ವ್ಯವಸಾಯದ ಹಿನ್ನಲೆ ರೈತ ಹಾಗೂ ವರ್ತಕರ ವ್ಯಾಪಾರ ವಹಿವಾಟುಗಳಿಗೆ ತನ್ನದೇ ಆದ ಭದ್ರತೆಯೊಂದಿಗೆ ನಿಗದಿತ ಅವಧಿಯಲ್ಲಿ ಅರ್ಥಿಕ ಸಾಲ ಸೌಲಭ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಇಲ್ಲಿ ಸಾಲಕೊಡುವುದು ಮುಖ್ಯವಲ್ಲ. ಬ್ಯಾಂಕಿಗೆ ಬರುವ ಗ್ರಾಹಕರಿಗೆ ಅತ್ಯುತ್ತಮ ಸಲಹೆ ಮತ್ತು ಮಾರ್ಗದರ್ಶನ ನೀಡುವಲ್ಲಿ ಬ್ಯಾಂಕ್ ಮಾದರಿ ಸೇವೆ ಕಲ್ಪಿಸುತ್ತಿರುವುದು ಸಂತಸ ತಂದಿದೆ ಎಂದರು.ಪುರಸಭೆ ಮಾಜಿ ಅಧ್ಯಕ್ಷರಾದ ಎ.ಶಂಕರರೆಡ್ಡಿ ಮಾತನಾಡಿ, ಕರ್ಣಾಟಕ ಬ್ಯಾಂಕ್ 50ವರ್ಷಕ್ಕೆ ದಾವುಗಾಲಿಡುತ್ತಿರುವುದು ಸಂತಸ ತಂದಿದೆ. ರೈತ ಹಾಗೂ ಗ್ರಾಹಕರಿಗೆ ಅತ್ಯುತ್ತಮ ಸೇವೆ ಕಲ್ಪಿಸುವ ಬ್ಯಾಂಕ್ ಎಂದರೆ ಕರ್ಣಾಟಕ ಬ್ಯಾಂಕ್. ಇಲ್ಲಿನ ವ್ಯವಸ್ಥಾಪಕ ಹಾಗೂ ಸಿಬ್ಬಂದಿಯ ಅತ್ಯುತ್ತಮ ಸೇವೆ ಹಿನ್ನಲೆಯಲ್ಲಿ ಉತ್ತಮ ಹೆಸರಿನೊಂದಿಗೆ ಬ್ಯಾಂಕ್ ಪ್ರಗತಿದತ್ತ ಸಾಗುತ್ತಿರುವುದು ಶ್ಲಾಘನೀಯ ಎಂದರು.ಇಲ್ಲಿನ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕರಾದ ವಿ.ಸಂದೀಪ್‌ಕುಮಾರ್ ಮಾತನಾಡಿ ಗ್ರಾಹಕರಿಗೆ ಬ್ಯಾಂಕಿನ 49ನೇ ವರ್ಷದ ಶುಭಾಶಯ ಕೋರಿದರು. ಪಾವಗಡ ಶಾಖೆಯ ಸಹಾಯಕ ವ್ಯವಸ್ಥಾಪಕರಾದ ಮನೋಜ್ ಬಿ.ಉಪಾಧ್ಯಯ, ಪುರಸಭೆ ಸದಸ್ಯರಾದ ತೆಂಗಿನಕಾಯಿ ರವಿ, ಕರ್ಣಾಟಕ ಬ್ಯಾಂಕ್ ಮಾಜಿ ವ್ಯವಸ್ಥಾಪಕ ಪಾವಗಡದ ದೈವದೀನಂ, ಬ್ಯಾಂಕ್ ಸಿಬ್ಬಂದಿ ಮನೋಜ್ ನಾಡಿಗ್, ನಂದನ್, ಹರೀಶ್, ಕೃಷ್ಣರಾವ್, ಮಹಾಬಲಗಿರಿ, ಐಶ್ವರ್ಯ ಶಾರದಮ್ಮ, ಶಿವು ರಾಜೇಶ್ ರಮೇಶ್ ಎಂ.ಎಸ್.ಮಹೇಶ್ ಬಾಬು, ಅಂಜಪ್ಪ ಸೇರಿದಂತೆ ಇತರೆ ಆನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))