ಜೋಳದಕಡ್ಡಿ ರಾಶಿಯನ್ನು ಟ್ರಾಕ್ಟರ್‌ನಲ್ಲಿ ಕೊಂಡೊಯ್ಯುವಾಗ ನಡುರಸ್ತೆಯಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಹನೂರು ತಾಲೂಕಿನ ಚಿಕ್ಕಮಾಲಾಪುರದ ಬಳಿ ಶನಿವಾರ ನಡೆದಿದೆ.

- ಜೋಳದ ಕಡ್ಡಿ ರಾಶಿ ಸಾಗಿಸುವಾಗ ಬೆಂಕಿ

- ಸಮಯಪ್ರಜ್ಞೆಯಿಂದ ಲೋಡ್‌ ಇಳಿಸಿ ಬಚಾವ್‌

---

ಕನ್ನಡಪ್ರಭ ವಾರ್ತೆ ಹನೂರು

ಜೋಳದಕಡ್ಡಿ ರಾಶಿಯನ್ನು ಟ್ರಾಕ್ಟರ್‌ನಲ್ಲಿ ಕೊಂಡೊಯ್ಯುವಾಗ ನಡುರಸ್ತೆಯಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಹನೂರು ತಾಲೂಕಿನ ಚಿಕ್ಕಮಾಲಾಪುರದ ಬಳಿ ಶನಿವಾರ ನಡೆದಿದೆ.

ಕೆಂಪರಾಜು ಎಂಬುವರು ಅಗ್ನಿ ಅವಘಡದಲ್ಲಿ ಅದೃಷ್ಟವಶಾತ್ ಪಾರಾಗಿದ್ದಾರೆ. ಚಿಕ್ಕಮಾಲಾಪುರ ಸಮೀಪ ತಮ್ಮ ಜಮೀನಿಗೆ ಜೋಳದಕಡ್ಡಿ ಸಾಗಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಟೇಲರ್‌ನಲ್ಲಿದ್ದ ಕಡ್ಡಿರಾಶಿಯನ್ನು ಕೆಳಕ್ಕೆ ಚೆಲ್ಲಿ ಟ್ರಾಕ್ಟರ್‌ ಚಲಾಯಿಸಿದ್ದರಿಂದ ಟ್ರಾಕ್ಟರ್‌ ಕೂಡ ಬೆಂಕಿಯಿಂದ ಪಾರಾಗಿದೆ.

ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಜೋತು ಬಿದ್ದ ತಂತಿಗಳನ್ನು ಸೆಸ್ಕಾಂ ಸರಿಪಡಿಸಬೇಕೆಂದು ವಕೀಲ ಅಶೋಕ್ ಆಗ್ರಹಿಸಿದ್ದಾರೆ.---