ವರ್ತಕರು ಉದ್ಯಮಿ ಪರವಾನಗಿ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಿ

| Published : Oct 19 2024, 12:38 AM IST

ವರ್ತಕರು ಉದ್ಯಮಿ ಪರವಾನಗಿ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ವರ್ತಕರ ಭವನದಲ್ಲಿ ನಗರಸಭೆ ಹಾಗೂ ವರ್ತಕರ ಸಂಘದ ಸಹಯೋಗದಲ್ಲಿ ಉದ್ಯಮ ಪರವಾನಗಿ ಆಂದೋಲನ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ಸುರೇಶ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವರ್ತಕರು ನಗರಸಭೆಯಿಂದ ನೀಡುವ ಉದ್ಯಮಿ ಪರವಾನಗಿಯನ್ನು ಹೊಂದಿ ವ್ಯಾಪಾರ ವಹಿವಾಟು ನಡೆಸುವ ಜೊತೆಗೆ ನಗರಸಭೆಯನ್ನು ಸ್ವಚ್ಛವಾಗಿಡಲು ಹೆಚ್ಚಿನ ಸಹಕಾರ ನೀಡಬೇಕು ಎಂದು ನಗರಸಭೆ ಅಧ್ಯಕ್ಷ ಸುರೇಶ್ ತಿಳಿಸಿದರು.

ನಗರದ ವರ್ತಕರ ಭವನದಲ್ಲಿ ನಗರಸಭೆ ಹಾಗೂ ವರ್ತಕರ ಸಂಘದ ಸಹಯೋಗದಲ್ಲಿ ನಡೆದ ಉದ್ಯಮ ಪರವಾನಗಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ಥಳದಲ್ಲಿಯೇ ಉದ್ಯಮಿ ಪರವಾನಗಿ ನೀಡಿ ಅವರು ಮಾತನಾಡಿದರು. ವರ್ತಕರು ತಾವು ನಡೆಸುವ ಅಂಗಡಿ, ಮುಂಗಟ್ಟು ಹಾಗೂ ಇತರೇ ವ್ಯಾಪಾರಗಳಿಗೆ ನಗರಸಭೆ ಉದ್ಯಮಿ ಪರವಾನಗಿ ಪಡೆದುಕೊಳ್ಳುವುದು. ಬಹು ಮುಖ್ಯವಾಗಿರುತ್ತದೆ. ಪ್ರತಿ ವರ್ಷವು ನಗರಸಭೆಗೆ ಅರ್ಜಿ ಸಲ್ಲಿಸಿದರೆ ಉದ್ಯಮ ಪರವಾನಗಿ ನವೀಕರಿಸಿಕೊಡಲಾಗುತ್ತದೆ. ಸಿಬ್ಬಂದಿ ಕೊರತೆಯಿಂದ ತಾವು ಬಂದ ದಿನದಂದು ಸಿಬ್ಬಂದಿ ಇಲ್ಲದೇ ವರ್ತಕರಿಗೆ ಅಡಚಣೆಯಾಗಿಬಹುವುದು. ಇದನ್ನು ತಪ್ಪಿಸಲು ನಗರಸಭೆಯಿಂದ ಉದ್ಯಮ ಪರವಾನಗಿ ಆಂದೋಲನವನ್ನು ನಡೆಸಲಾಗುತ್ತಿದೆ ಎಂದರು.

ಎರಡು ದಿನಗಳ ಕಾಲ ನಗರದ ವರ್ತಕರ ಭವನದಲ್ಲಿ ಈ ಆಂದೋಲನ ನಡೆಯಲಿದೆ. ನಗರಸಭೆಯ ಅಧಿಕಾರಿಗಳು ಇಂಟರ್‌ನೆಟ್ ಹಾಗೂ ಇತರೇ ಸೌಲಭ್ಯಗಳೊಂದಿಗೆ ನಿಮ್ಮ ಬಳಿಗೆ ಬಂದಿದ್ದಾರೆ. ನಗರದ ಎಲ್ಲ ವರ್ತಕರು ಅಗತ್ಯ ದಾಖಲಾತಿಗಳನ್ನು ನೀಡಿ ಉದ್ಯಮಿ ಪರವಾನಿಗೆ ಪಡೆದುಕೊಳ್ಳಬೇಕು. ಅಲ್ಲದೇ ನಗರಸಭೆಯ ಸ್ವಚ್ಛತೆಗೆ ತಮ್ಮೆಲ್ಲರ ಸಹಕಾರ ಅತಿ ಮುಖ್ಯವಾಗಿರುತ್ತದೆ ಎಂದರು. ನಗರಸಭೆ ಪೌರಾಯುಕ್ತ ರಾಮದಾಸ್ ಮಾತನಾಡಿ, ಅಂಗಡಿ ಬೀದಿಗಳಲ್ಲಿ ವ್ಯಾಪಾರ ಮಾಡುವ ಬಹಳಷ್ಟು ವರ್ತಕರು ಉದ್ಯಮ ಪರವಾನಗಿ ಪಡೆದಿಲ್ಲ. ತಾವು ವ್ಯವಹಾರ ಆರಂಭಿಸುವ ಮುನ್ನವೇ ಈ ಪರವಾನಗಿ ಬೇಕು. ಆದರೆ, ವರ್ತಕರು ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಮಾತ್ರ ಈ ಪರವಾನಗಿಗೆ ಅರ್ಜಿ ಹಾಕುತ್ತಾರೆ. ಇದು ಸರಿಯಾದ ಕ್ರಮವಲ್ಲ. ಪ್ರತಿ ವರ್ಷದ ಪರವಾನಗಿ ಹೊಂದಿ ಫೋಟೋ ಫ್ರೇಂ ಆಗಿ ತಮ್ಮ ವ್ಯಾಪಾರ ನಡೆಯುವ ಪ್ರಮುಖ ಸ್ಥಳದಲ್ಲಿ ನೇತು ಹಾಕಬೇಕು. ಅಧಿಕಾರಿಗಳು ಬಂದಾಗ ಅದನ್ನು ನೋಡಿ, ಖಾತರಿ ಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಅಲ್ಲದೇ ನಗರಸಭೆಯನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕು. ನಗರವನ್ನು ಪಾಸ್ಲಿಕ್ ಮುಕ್ತವನ್ನಾಗಿಲು ಸ್ವಚ್ಛ ನಗರಸಭೆಯನ್ನಾಗಿಸಲು ಎಲ್ಲರು ಸಹಕಾರ ನೀಡಬೇಕು ಎಂದು ರಾಮದಾಸ್ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಅಧ್ಯಕ್ಷ ಶಂಕರ್, ವರ್ತಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಪದ್ಮ ಪ್ರಸಾದ್, ಕಾರ್ಯದರ್ಶಿ ಚಿದಾನಂದ ಗಣೇಶ, ಕಾರ್ಯದರ್ಶಿ ಸತೀಶ್, ನಗರಸಭೆ ಸದಸ್ಯ ಕಲೀಲ್, ಯೋಜನಾ ನಿರ್ದೇಶಕಿ ಪಿ.ಸುಧಾ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಂಜು, ಸುಷ್ಮಾ, ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.