ಪಾರಂಪರಿಕ ವೈದ್ಯರು ಸದಾ ಶೋಧನೆ ಮಾಡಬೇಕು: ಡಾ. ವಿ.ಪಿ ಸಿಂಗ್‌

| Published : Mar 04 2025, 12:32 AM IST

ಪಾರಂಪರಿಕ ವೈದ್ಯರು ಸದಾ ಶೋಧನೆ ಮಾಡಬೇಕು: ಡಾ. ವಿ.ಪಿ ಸಿಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

Traditional healers should always be searching: Dr. V.P. Singh

-ಬೀದರ್‌ನಲ್ಲಿ 15ನೇ ಪಾರಂಪರಿಕ ವೈದ್ಯ ಸಮ್ಮೇಳನದ ಮೂರನೇ ಗೋಷ್ಠಿ

-----

ಕನ್ನಡಪ್ರಭ ವಾರ್ತೆ ಬೀದರ್‌

ಔಷಧೀಯ ಸಸ್ಯಗಳನ್ನು ಬೆಳೆಸುವದು ಮತ್ತು ಮಾರಾಟ ಮಾಡುವದರ ಜೊತೆಗೆ ಅವುಗಳನ್ನು ಸಂರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ತೋಟಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ವಿ.ಪಿ ಸಿಂಗ್‌ ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಬೆಂಗಳೂರು, ಪಾರಂಪರಿಕ ವೈದ್ಯ ಪರಿಷತ್ತು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಲಿಂಗಸುಗೂರು ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ನಡೆಯುತ್ತಿರುವ 15ನೇ ಪಾರಂಪರಿಕ ವೈದ್ಯ ಸಮ್ಮೇಳನದ ಮೂರನೇ ಗೋಷ್ಠಿ “ಔಷಧಿ ಸಸ್ಯಗಳನ್ನು ಬೆಳೆಸುವದು ಮತ್ತು ಮಾರಾಟ ಮಾಡುವುದು ಹಾಗೂ ಔಷಧಿ ಸಸ್ಯಗಳ ಸಂರಕ್ಷಣೆ” ಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಸಧ್ಯ ಪಾರಂಪರಿಕ ಔಷಧ ಕ್ಷೇತ್ರ ಒಟ್ಟು 55 ಬಿಲಿಯನ್ ಡಾಲರ್‌ ವ್ಯವಹಾರ ಮಾಡುತ್ತಿದೆ. ನಾಟಿ ವೈದ್ಯರು ಹೊಸ ಹೊಸ ಸಸ್ಯಗಳಾದ ಅಶ್ವಗಂಧ, ಮುಸ್ಲಿಗಿಡ, ನಾಗದಾಲಿ ಗಿಡ, ಭೋಮಿ ಆವ್ಲಾ ಇವುಗಳ ಉಪಯೋಗ ಅರಿತು ಜನತೆಗೆ ಚಿಕಿತ್ಸೆ ನೀಡಬೇಕು. ಸದಾ ಸಂಶೋಧನಾಶೀಲರಾಗಿ ರಾಜ್ಯದ ಪಾರಂಪರಿಕ ವೈದ್ಯರೊಂದಿಗೆ ಸಂಪರ್ಕ ಸಾಧಿಸಿ ಉತ್ತಮ ವೈದ್ಯರಾಗಿ ಹೊರಹೊಮ್ಮಬೇಕೆಂದು ತಿಳಿಸಿದರು.

ಉಪನ್ಯಾಸಕ ಡಾ. ಧೂಳಪ್ಪ ಮಾತನಾಡಿ, ಔಷಧ ಇಲ್ಲದ ಸಸ್ಯಗಳೇ ಇಲ್ಲ. ಅದನ್ನು ಯುಕ್ತಿಯಿಂದ ಬಳಸಿಕೊಳ್ಳುವ ಜಾಣ್ಮೆ ಪಾರಂಪರಿಕ ವೈದ್ಯರಲ್ಲಿ ಇರಬೇಕು. ತನ್ಮೂಲಕ ಆಯುರ್ವೇದಕ್ಕೆ ವೈಜ್ಞಾನಿಕ ಪರಿವರ್ತನೆ ಕೊಡಬಹುದು. ಜೀವ ಸಂರಕ್ಷಕ ಔಷಧಿಗಳನ್ನು ತಯಾರಿಸುವ ಚಾಕಚಕ್ಯತೆ ವೈದ್ಯರಲ್ಲಿ ಇರಬೇಕೆಂದು ತಿಳಿಸಿದರು.

ಕರ್ನಾಟಕ ಜೀವ ವೈವಿಧ್ಯ ಮಂಡಳಿ ಉಪನಿರ್ದೇಶಕಿ ಡಾ. ಪವಿತ್ರಾ ಮಾತನಾಡಿದರು. ಪಾರಂಪರಿಕ ವೈದ್ಯ ಪರಿಷತ್ತು ಬೆಂಗಳೂರಿನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ದಿನಕರರಾವ್‌ ಕುಲಕರ್ಣಿ ಕಲಬುರಗಿ, ವಿಶ್ವನಾಥ ವೈದ್ಯ ಉಡುಪಿ, ರಮೇಶ ಮಹೇಂದ್ರಕರ್‌ ಕಲಬುರಗಿ, ಪ್ರಕಾಶ ಬೀಳೂರ, ವಿರುಪಾಕ್ಷ ಕೋಡಿಹಾಳ ಇದ್ದರು. ಸುಭಾಷ ನೇಳಗೆ ನಿರೂಪಿಸಿದರು. ವೈಜಿನಾಥ ಪಾಟೀಲ್‌ ಸ್ವಾಗತಿಸಿ, ಡಾ. ರಾಜಕುಮಾರ ಹೆಬ್ಬಾಳೆ ವಂದಿಸಿದರು.

--

ಫೈಲ್‌ 3ಬಿಡಿ3