ಕಾಲೇಜು ವಿದ್ಯಾರ್ಥಿಗಳಿಗೆ ಪೊಲೀಸ್‌ ಇಲಾಖೆ ಸಂಚಾರ ಸುರಕ್ಷ ನಿಯಮ ಅರಿವು

| Published : Jun 15 2024, 01:10 AM IST

ಕಾಲೇಜು ವಿದ್ಯಾರ್ಥಿಗಳಿಗೆ ಪೊಲೀಸ್‌ ಇಲಾಖೆ ಸಂಚಾರ ಸುರಕ್ಷ ನಿಯಮ ಅರಿವು
Share this Article
  • FB
  • TW
  • Linkdin
  • Email

ಸಾರಾಂಶ

ವಿರಾಜಪೇಟೆ ನಗರದಲ್ಲಿರುವ ಸಂತ ಅನ್ನಮ್ಮ ಕಾಲೇಜಿನ ಮೊದಲನೇ ಮತ್ತು ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ರಸ್ತೆ ಸಂಚಾರಿ ಸುರಕ್ಷ ನಿಯಮದ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿದ ವಿರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಮಾತನಾಡಿ, ದ್ವಿಚಕ್ರ ವಾಹನ ಸವಾರರು ಕಡ್ಡಯವಾಗಿ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಜೀವ ಉಳಿಸಿಕೊಳ್ಳುವಂತಾಗಬೇಕು ಎಂದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ದ್ವಿಚಕ್ರ ವಾಹನ ಸವಾರರು ಕಡ್ಡಯವಾಗಿ ಹೆಲ್ಮೆಟ್ ಧರಿಸುವ ಮೂಲಕ ತಮ್ಮ ಜೀವ ಉಳಿಸಿಕೊಳ್ಳುವಂತಾಗಬೇಕು ಎಂದು ವಿರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿರುವ ಸಂತ ಅನ್ನಮ್ಮ ಕಾಲೇಜಿನ ಮೊದಲನೇ ಮತ್ತು ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ರಸ್ತೆ ಸಂಚಾರಿ ಸುರಕ್ಷ ನಿಯಮದ ಬಗ್ಗೆ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಾಹನ ಚಾಲನೆ ಮಾಡುವ ಸಂದರ್ಭ ಚಾಲಕರು ಮೋಬೈಲ್ ಫೋನ್ ಬಳಸಬಾರದು ಇದರಿಂದ ವಾಹನ ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗದೆ ಅನೇಕ ಅಪಘಾತಗಳು ನಡೆಯುತ್ತಿವೆ. ಅಪಘಾತಗಳಿಂದ ಅನೇಕ ಜೀವಗಳನ್ನು ಕಳೆದುಕೊಳ್ಳುವಂತಾಗಿದೆ. ಆದುದರಿಂದ ವಿದ್ಯಾರ್ಥಿಗಳು ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸುವಂತಾಗಬೇಕು ಎಂದರು.

ಪೊಲೀಸ್ ವೃತ್ತ ನಿರೀಕ್ಷಕ ಶಿವರುದ್ರ ಮಾತನಾಡಿ, ವಾಹನಗಳ ಚಾಲನೆ ಸಂದರ್ಭ ವಾಹನದ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ನಾಲ್ಕು ಚಕ್ರ ವಾಹನಗಳ ಚಾಲನೆ ಮಾಡುವಾಗ ಬೆಲ್ಟ್‌ ಬಳಸುವುದು ಮುಖ್ಯ, ಅತೀ ವೇಗದ ಚಾಲನೆ ಮಾಡುವುದರಿಂದ ರಸ್ತೆಯಲ್ಲಿ ಗುಂಡಿಗಳು, ಎದುರಿನಿಂದ ಬರುವ ವಾಹನ, ಮಂಜು ಕವಿದ ವಾತಾವರಣ ಇತ್ಯಾದಿ ಕಾರಣಗಳಿಂದ ಅಪಘಾತಗಳು ಸಂಭವಿಸಬಹುದು. ಅದರಿಂದ ಚಾಲಕರು ವೇಗದ ಮಿತಿಯಲ್ಲಿ ಚಾಲನೆ ಮಾಡುವುದು ಉತ್ತಮ ನಿಮ್ಮನ್ನು ನೀವೆ ರಕ್ಷಣೆ ಮಾಡಿಕೊಳ್ಳುವಂತಾಗಬೇಕೆಂದು ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ನಗರ ಠಾಣಾಧಿಕಾರಿ ರವೀಂದ್ರ ವಾಹನ ಅಪಘಾತಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಾಕ್ಷ್ಯಚಿತ್ರ ತೋರಿಸಿದ ಬಳಿಕ ಮಾತನಾಡಿ, ಹಿಂದೆ ದ್ವಿಚಕ್ರ ವಾಹನ ಇರಲಿಲ್ಲ. ೧೯೯೮ರಲ್ಲಿ ಕರ್ನಾಟಕದಲ್ಲಿ ವಾಹನಗಳ ನಿಯಮ ಉಲ್ಲಂಘನೆ ಕಾನೂನು ಜಾರಿಗೆ ಬಂತು, ದೇಶದಲ್ಲಿ ದಿನನಿತ್ಯ ೧.೫ ಲಕ್ಷ ಮಂದಿ ಅಪಘಾತಗಳಿಂದ ಮೃತಪಡುತ್ತಿದ್ದಾರೆ. ಇದಕ್ಕೆ ಅತೀ ವೇಗವೆ ಕಾರಣ ಎಂದರು.

ರಸ್ತೆ ಇಳಿಜಾರು ಮತ್ತು ಮುಂದೆ ಹೋಗುವ ವಾಹನವನ್ನು ಹಿಂದೆ ಹಾಕುವ ಹಂಬಲದಿಂದ ವೇಗವಾಗಿ ಚಲಿಸುವುದರಿಂದ ಪಾದಚಾರಿಗಳು ಅಪಘಾತಕ್ಕೆ ಬಲಿಯಾಗುವುದುಂಟು. ಚಾಲಕರು ಎಚ್ಚರದಿಂದ ವಾಹನ ಚಾಲನೆ ಮಾಡುವಂತಾಗಬೇಕು ಎಂದರು.

ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲ ಮದಲೈಮುತ್ತು ಉದ್ಘಾಟನಾ ಭಾಷಣ ಮಾಡಿದರು. ಉಪನ್ಯಾಸಕ ಕೃಷ್ಣರಾಜ್ ವಂದಿಸಿದರು.