ನಿರುದ್ಯೋಗಿಗಳ ಕೌಶಲ್ಯ ಅಭಿವೃದ್ಧಿಗೆ ತರಬೇತಿ ಕೇಂದ್ರ: ಹಾಸನ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಎಚ್.ಎ.ಕಿರಣ್

| Published : Apr 01 2024, 12:51 AM IST

ನಿರುದ್ಯೋಗಿಗಳ ಕೌಶಲ್ಯ ಅಭಿವೃದ್ಧಿಗೆ ತರಬೇತಿ ಕೇಂದ್ರ: ಹಾಸನ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಎಚ್.ಎ.ಕಿರಣ್
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಡೈರಿ ವೃತ್ತದ ಬಳಿ ಇರುವ ಕೈಗಾರಿಕ ಪ್ರದೇಶದಲ್ಲಿ ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಕೇಂದ್ರ ನಡೆಸಲು ಉದ್ದೇಶಿಸಿರುವ ಸಣ್ಣ ಕೈಗಾರಿಕ ಸಂಘದ ಮೊದಲ ಮಹಡಿಯ ಉದ್ಘಾಟನೆ ನೆರವೇರಿಸಲಾಯಿತು.

ಸಣ್ಣ ಕೈಗಾರಿಕ ಸಂಘದ ಮೊದಲ ಮಹಡಿ ಉದ್ಘಾಟನೆ

ಹಾಸನ: ಕೌಶಲ್ಯ ಅಭಿವೃದ್ಧಿ ಕೇಂದ್ರವು ಸಣ್ಣ ಮತ್ತು ಮಾಧ್ಯಮ ಕೈಗಾರಿಕೆಗಳಿಗೆ ನಿತ್ಯ ಅವಶ್ಯಕತೆ ಇರುವಂತಹ ತಾಂತ್ರಿಕತೆಯ ವಿವಿಧ ತರಬೇತಿಗಳನ್ನು ಕೊಟ್ಟು ಅವುಗಳಿಗೆ ಸಹಾಯ ಆಗುತ್ತದೆ ಎಂದು ಹಾಗೂ ಸ್ವಾವಲಂಬನೆ ಕೊಡುತ್ತದೆ ಎಂದು ಹಾಸನ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಎಚ್.ಎ.ಕಿರಣ್ ತಿಳಿಸಿದರು.

ನಗರದ ಡೈರಿ ವೃತ್ತದ ಬಳಿ ಇರುವ ಕೈಗಾರಿಕ ಪ್ರದೇಶದಲ್ಲಿ ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಕೇಂದ್ರ ನಡೆಸಲು ಉದ್ದೇಶಿಸಿರುವ ಸಣ್ಣ ಕೈಗಾರಿಕ ಸಂಘದ ಮೊದಲ ಮಹಡಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬೆಂಗಳೂರಿನ ಕಾಸಿಯಾ ಅಧ್ಯಕ್ಷರಾದ ಶಶಿಧರ್ ಶೆಟ್ಟಿ, ಉಪಾಧ್ಯಕ್ಷರಾದ ಎಂ.ಜಿ. ರಾಜಗೋಪಾಲ್, ಕೇಂದ್ರ ಸರ್ಕಾರದ ಎಂ.ಎಸ್.ಎಂ.ಇ. ಬೋರ್ಡ್ ಸದಸ್ಯ ಡಾ.ಜೆ.ಆರ್. ಬಂಗೇರ ಹಾಗೂ ಬೆಂಗಳೂರಿನ ಎಫ್.ಕೆ.ಸಿ.ಸಿ. ನಿರ್ದೇಶಕ ಪಿ.ಎಚ್. ರಾಜು ಪುರೋಹಿತ್ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಣ್‌ ವಹಿಸಿದ್ದರು. ಸಂಘದ ಹಿರಿಯ ಉಪಾಧ್ಯಕ್ಷರಾದ ಪ್ರಕಾಶ್. ಎಸ್. ಯಾಜಿ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು. ಇದೇ ವೇಳೆ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನ ಮೀರೈಸ್ ಸಂಸ್ಥೆಯ ಮುಖ್ಯಸ್ಥ ಡಾ.ಗೀತಾ ಕಿರಣ್ ಜೊತೆ ಪರಸ್ಪರ ಕೌಶಲ್ಯ ಅಭಿವೃದ್ಧಿಯಲ್ಲಿ ಸಂಘದ ಜತೆ ಪರಸ್ಪರ ಸಹಕಾರಕ್ಕೆ ಒಡಂಬಡಿಕೆ ಮಾಡಿಕೊಂಡರು.

ಕಾಸಿಯಾ ಕಾರ್ಯದರ್ಶಿಗಳಾದ ನಾಗರಾಜ್, ಖಜಾಂಚಿ ಎಚ್.ಕೆ. ಮಲ್ಲೇಶಗೌಡ, ಜಂಟಿ ಕಾರ್ಯದರ್ಶಿ ಶ್ರೇಯಸ್ ಕುಮಾರ್ ಜೈನ, ಅರುಣ್ ಪಡಿಯಾರ ಹಾಗೂ ಹಾಸನ್ ಮೊಫ್ಫುಸಿಲ್, ಸಬ್ ಕಮಿಟಿ ಛೇರ್ಮನ್ ಎಂ.ಆರ್. ರಂಗಸ್ವಾಮಿ, ಸಂಘದ ಕಟ್ಟಡ ಕಟ್ಟಲು ಸಹಕರಿಸಿದ ದಾನಿಗಳನ್ನು ಸನ್ಮಾನಿಸಿದರು. ಈ ಕಾರ್ಯಕ್ರಮಕ್ಕೆ ಹಾಸನ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಧನಪಾಲ್ ಆಗಮನಿಸಿದ್ದರು.

ಸಂಘದ ನಿಕಟ ಪೂರ್ವ ಅಧ್ಯಕ್ಷ ಜಿ.ಓ.ಮಹಾಂತಪ್ಪ ವಂದನಾರ್ಪಣೆ ಮಾಡಿದರು. ಸಂಘದ ಕಟ್ಟಡದ ಸಮಿತಿಯ ಅಧ್ಯಕ್ಷ ಸಿ.ಗೋಪಿ ಹಾಗೂ ಉಪಾಧ್ಯಕ್ಷ ಶಿವರಾಮ್ ಕಟ್ಟಡ ಕಟ್ಟುವ ಜವಾಬ್ದಾರಿ ವಹಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದಕ್ಕೆ ಸಂಘದ ಗೌರವ ಅಧ್ಯಕ್ಷ ಮದನ್ ಕುಮಾರ್ ಅಭಿನಂದಿಸಿದರು. ಕಾರ್ಯದರ್ಶಿ ಸುದರ್ಶನ್, ಜಂಟಿ ಕಾರ್ಯದರ್ಶಿಗಳಾದ ರಾಜಕುಮಾರ್ ಹಾಗೂ ಅನಿಲ್, ಖಜಾಂಚಿ ಚೆನ್ನಪ್ಪ, ನಿರ್ದೇಶಕರಾದ ಕಳುಲಾಲ್ ಸೆನ್, ರಾಜೇಗೌಡ, ಕೃಷ್ಣೆಗೌಡ, ವೆಂಕಟೇಶ್, ಜಯರಾಮ್, ಶಾಹೀನ್ ಪಾಶ, ನಿಕಟ ಪೂರ್ವ ಕಾರ್ಯದರ್ಶಿ ರಾಜೇಂದ್ರ, ಹಾಸನದ ವಿವಿಧ ಸಂಘದ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಹಾಸನದ ಡೈರಿ ವೃತ್ತದ ಬಳಿ ಇರುವ ಕೈಗಾರಿಕ ಪ್ರದೇಶದಲ್ಲಿ ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಸಣ್ಣ ಕೈಗಾರಿಕ ಸಂಘದ ಮೊದಲ ಮಹಡಿಯ ಉದ್ಘಾಟನೆ ನೆರವೇರಿಸಲಾಯಿತು.