ಸಾರಾಂಶ
ಸಿಂಧನೂರಿನ ವಕೀಲರ ಸಂಘದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕ್ರಿಮಿನಲ್ ಪ್ರಕರಣಗಳ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಶಶಿಧರಗೌಡರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಸಿಂಧನೂರು
ಕ್ರಿಮಿನಲ್ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಡೆಸಲು ಉಪನ್ಯಾಸಗಳು ಹಾಗೂ ತರಬೇತಿಗಳು ಸಹಕಾರಿಯಾಗಲಿವೆ ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಎನ್.ರಾಮನಗೌಡ ಹೇಳಿದರು.ಇಲ್ಲಿನ ವಕೀಲರ ಸಂಘದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕ್ರಿಮಿನಲ್ ಪ್ರಕರಣಗಳ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕ್ರಿಮಿನಲ್ ಅಪರಾಧಗಳ ಬಗ್ಗೆ ಮೂರು ಹೊಸ ಕಾನೂನುಗಳು ಜಾರಿಯಾಗಿದ್ದು, ವಕೀಲರು ಈ ಕಾನೂನು ಅರಿತುಕೊಳ್ಳಲು ಹಿರಿಯ ವಕೀಲ ಶಶಿಧರಗೌಡ ಕೆಲೂರ್‌ರಿಂದ ಉಪನ್ಯಾಸ ಹಮ್ಮಿಕೊಳ್ಳಲಾಗಿದ್ದು, ವಕೀಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಭಾರತೀಯ ಸಾಕ್ಷಿ ಅಧಿನಿಯಮ ಹಾಗೂ ಭಾರತೀಯ ನ್ಯಾಯ ಸುರಕ್ಷತಾ ಸಂಹಿತೆ ಮೊದಲ ಅಧ್ಯಾಯಗಳನ್ನು ಶಶಿಧರಗೌಡ ಅವರು ಉದಾಹರಣೆಗಳೊಂದಿಗೆ ವಿವರಿಸಿದರು. ಇದೇ ವೇಳೆ ವಕೀಲರ ಪ್ರಶ್ನೆಗಳಿಗೂ ಸಮರ್ಪಕವಾಗಿ ಉತ್ತರಿಸಿದರು.ವಿಶೇಷ ಉಪನ್ಯಾಸ ನೀಡಿದ ಶಶಿಧರಗೌಡರನ್ನು ವಕೀಲರ ಸಂಘದಿಂದ ಸನ್ಮಾನಿಸಲಾಯಿತು. ಕಾರ್ಯದರ್ಶಿ ಶಿವಕುಮಾರ ಉಮಲೂಟಿ, ಖಜಾಂಚಿ ಶರಣಬಸವ ಉಮಲೂಟಿ, ಹಿರಿಯ ವಕೀಲರಾದ ಜಿ.ಎಸ್.ಆರ್.ಕೆ.ರೆಡ್ಡಿ, ಡಿ.ಎಸ್.ಕಲ್ಮಠ, ಎಂ.ಅಮರೇಗೌಡ, ಬಸವಂತರಾಯಗೌಡ, ಈರೇಶ್ ಇಲ್ಲೂರು, ಎಸ್.ಎಸ್ .ಹಿರೇಮಠ್, ಶ್ರೀಧರ ಕುಲಕರ್ಣಿ, ಪ್ರಹ್ಲಾದ ಗುಡಿ, ಬಸವರಾಜ ಬುರ್ಲಿ, ಲಕ್ಷ್ಮಿಕಾಂತ ರೆಡ್ಡಿ, ವೀರೇಶ ಚಿಂಚರಕಿ, ಸುರೇಶ್ ರೆಡ್ಡಿ ಚನ್ನಳ್ಳಿ ಇದ್ದರು.