ಚಿದಂಬರರ ನಾಮಸ್ಮರಣೆಯಿಂದ ಪರಿವರ್ತನೆ

| Published : Nov 17 2025, 01:30 AM IST

ಸಾರಾಂಶ

ಭಕ್ತಿಯ ಹೊರತಾಗಿ ಎಲ್ಲವೂ ವ್ಯರ್ಥ.ಇನ್ನೊಬ್ಬರ ಸಂತಸದಲ್ಲಿ ಭಾಗಿಯಾಗುವುದು ಬದುಕಿನ ಅಮೃತ ಗಳಿಗೆ

ಕೊಪ್ಪಳ: ಶಿವ ಚಿದಂಬರೇಶ್ವರರ ನಿರಂತರ ನಾಮಸ್ಮರಣೆ ಮಾಡಿದರೆ ಬದುಕಿನಲ್ಲಿ ನೆಮ್ಮದಿ ಹಾಗೂ ಪರಿವರ್ತನೆ ಕಾಣಲು ಸಾಧ್ಯ ಎಂದು ಪಂಡಿತ್‌ ನೀಲಕಂಠಯ್ಯ ದೀಕ್ಷಿತ್ ಹೇಳಿದರು.

ತಾಲೂಕಿನ ಕರ್ಕಿಹಳ್ಳಿಯಿಂದ ಮುರುಗೋಡದ ಶಿವ ಚಿದಂಬರೇಶ್ವರರ ಸನ್ನಿಧಿಗೆ ಕೈಗೊಂಡಿರುವ 26ನೇ ವರ್ಷದ ಪಾದಯಾತ್ರೆ (ದಿಂಡಿ) ತಂಡವು ಇಲ್ಲಿನ ಪ್ರಶಾಂತ ಕಾಲನಿಯಲ್ಲಿರುವ ವಿಠ್ಠಲ ಕೃಷ್ಣ ಮಂದಿರಕ್ಕೆ ಬಂದಾಗ ಆಶೀರ್ವಚನ ನೀಡಿದ ಅವರು, ಭಕ್ತಿಯ ಹೊರತಾಗಿ ಎಲ್ಲವೂ ವ್ಯರ್ಥ.ಇನ್ನೊಬ್ಬರ ಸಂತಸದಲ್ಲಿ ಭಾಗಿಯಾಗುವುದು ಬದುಕಿನ ಅಮೃತ ಗಳಿಗೆ ಎಂದರು.

ಯಾರನ್ನು ನೋಡಿದಾಕ್ಷಣ ನಮ್ಮ ಮನಸ್ಸು ಪರಿವರ್ತನೆ ಆಗುತ್ತದೆಯೊ,ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆಯಾಗುತ್ತದೆಯೊ ಅವರೇ ಸದ್ಗುರುಗಳು ಆಗುತ್ತಾರೆ. ನಮಗೆ ಅಂಥ ಸದ್ಗುರುಗಳ ಸಾನ್ನಿಧ್ಯ,ಸತ್ಸಂಗ ಲಭಿಸಿದೆ. ಜೀವನದ ಮುಕ್ತಿಗೆ ಸತ್ಸಂಗ ಮತ್ತು ಚಿದಂಬರೇಶ್ವರರ ಸ್ಮರಣೆ ಬೇಕು. ಇದರಿಂದ ದೇಹ ಪವಿತ್ರವಾಗುತ್ತದೆ ಎಂದರು.

ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಪಾದಯಾತ್ರೆ ತಂಡದವರು ಭಕ್ತರ ಸಮ್ಮುಖದಲ್ಲಿ ಚಿದಂಬರೇಶ್ವರರ ಹಾಡುಗಳ ಭಜನೆ ಮಾಡಿದರು.

ಕರ್ಕಿಹಳ್ಳಿಯ ಸಂತ ಸುರೇಶ ಗುರುಮಹಾರಾಜ ಪಾಟೀಲ ಪಂಡಿತ್‌ ರಾಮಚಂದ್ರ ದೀಕ್ಷಿತ್‌ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.