ಸಾರಾಂಶ
ಪ್ರಸ್ತುತ ಗಂಡು ಮತ್ತು ಹೆಣ್ಣುಗಳಲ್ಲಿ ಪ್ರತಿಶತ ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ. ಲಿಂಗಪತ್ತೆ ಮತ್ತು ಭ್ರೂಣ ಹತ್ಯೆಯಿಂದ ಹೀಗಾಗಿದೆ. ಇಂತಹ ಕೃತ್ಯ ಮಾಡುವ ಬಗ್ಗೆ ಮಾಹಿತಿ ಇದ್ದಲ್ಲಿ 1098/112ಗೆ ಕರೆ ಮಾಡಿ ತಿಳಿಸಬೇಕು.
ಧಾರವಾಡ:
ಲಿಂಗಪತ್ತೆ ಮತ್ತು ಭ್ರೂಣ ಹತ್ಯೆ ಅಪರಾಧ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಜತೆಗೂಡಿ ಅವರ್ ಲೇಡಿ ಆಫ್ ಲೂರ್ಧ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಕಾರ್ಯಾಗಾರ ಉದ್ಘಾಟಿಸಿದ ಅವರು, ಪ್ರತಿಯೊಬ್ಬರು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವುದು ಅತೀ ಅವಶ್ಯ ಎಂದರು.
ಪ್ರಸ್ತುತ ಗಂಡು ಮತ್ತು ಹೆಣ್ಣುಗಳಲ್ಲಿ ಪ್ರತಿಶತ ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ. ಲಿಂಗಪತ್ತೆ ಮತ್ತು ಭ್ರೂಣ ಹತ್ಯೆಯಿಂದ ಹೀಗಾಗಿದೆ. ಇಂತಹ ಕೃತ್ಯ ಮಾಡುವ ಬಗ್ಗೆ ಮಾಹಿತಿ ಇದ್ದಲ್ಲಿ 1098/112ಗೆ ಕರೆ ಮಾಡಿ ತಿಳಿಸಬೇಕು ಎಂದ ಅವರು, ಇನ್ನು, ಪರಿತ್ಯಕ್ತ, ಒಪ್ಪಿಸುವ ಅನಾಥ ಮಕ್ಕಳನ್ನು ಪುನರ್ವಸತಿಗೊಳಿಸಲು ಇಲಾಖೆ ಇದೆ. ಪೋಕ್ಸೋ ಮತ್ತು ಬಾಲ್ಯ ವಿವಾಹ ಹಾಗೂ ಮಕ್ಕಳ ಕಾಯ್ದೆ ಕುರಿತು ಕಾನೂನು ಅರಿವು ಪಡೆಯಬೇಕು ಎಂದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ. ಮಹೇಶ ಚಿತ್ತರಗಿ ಮಾತನಾಡಿ, ತಾಯಿ ಹಾಗೂ ಶಿಶು ಮರಣ ತಡೆದರೆ ಮಾತ್ರ ದೇಶದ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆಯ ಅಶೋಕ ಮಜ್ಜಗಿ, ಅವರ್ ಲೇಡಿ ಆಪ್ ಲೂರ್ಧ ನರ್ಸಿಂಗ್ ಕಾಲೇಜನ ಪ್ರಾಂಶುಪಾಲೆ ಸಿಸ್ಟರ್ ಮವಲೆ, ಮಕ್ಕಳ ರಕ್ಷಣಾ ಘಟಕದ ನೂರಜಹಾನ ಕಿಲ್ಲೇದಾರ, ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ಇದ್ದರು.